Kuwait Supermarket : ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿ ಮಾಜಿ ವಕ್ತಾರರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇದೀಗ ಕುವೈತ್ನ ಸೂಪರ್ ಮಾರ್ಕೆಟ್ಗಳಲ್ಲಿ ಸೋಮವಾರದಿಂದ ಭಾರತೀಯ ಉತ್ಪನ್ನಗಳಿಗೆ ಗೇಟ್ಪಾಸ್ ನೀಡಲಾಗಿದೆ ಎಂದು ವರದಿಯಾಗಿದೆ. ಅರ್ದಿಯಾ ಕೋ ಆಪರೇಟಿವ್ ಸೊಸೈಟಿ ಸ್ಟೋರ್ನ ಸಿಬ್ಬಂದಿ ಭಾರತೀಯ ಉತ್ಪನ್ನಗಳನ್ನು ತೆಗೆದು ಟ್ರಾಲಿಗಳಲ್ಲಿ ರಾಶಿ ಹಾಕುತ್ತಿರುವ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಗಳ ವಿವಾದವು ಮತ್ತಷ್ಟು ಭುಗಿಲೆದ್ದ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರಿಯನ್ನು ಕರೆಸಿಕೊಂಡ ಇರಾನ್ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಅಸಮಾಧಾನವನ್ನು ಹೊರ ಹಾಕಿತ್ತು. ಇತ್ತ ಸೌದಿ ಅರೇಬಿಯಾ ಕೂಡ ನೂಪುರ್ ಶರ್ಮಾರ ಹೇಳಿಕೆಯನ್ನು ಖಂಡಿಸಿವೆ. ನೂಪುರ್ ಶರ್ಮಾರ ಹೇಳಿಕೆಯ ವಿರುದ್ಧ ಮುಸ್ಲಿಂ ಪ್ರಾಬಲ್ಯ ರಾಷ್ಟ್ರಗಳಿಂದ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಕುವೈತ್ನ ಹೊರ ಭಾಗದಲ್ಲಿರುವ ಸೂಪರ್ ಮಾರ್ಕೆಟ್ಗಳಲ್ಲಿ ಅಕ್ಕಿ ಚೀಲಗಳು, ಮಸಾಲೆ ಪದಾರ್ಥಗಳು ಹಾಗೂ ಕಾರದಪುಡಿಗಳ ಮೇಲೆ ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗಿದೆ ಹಾಗೂ ನಾವು ಭಾರತೀಯ ಉತ್ಪನ್ನಗಳನ್ನು ತೆಗೆದು ಹಾಕಿದ್ದೇವೆ ಎಂದು ಅರೆಬಿಕ್ ಭಾಷೆಗಳಲ್ಲಿ ಬರೆದ ಬೋರ್ಡ್ಗಳನ್ನು ನೇತು ಹಾಕಿದ್ದಾರೆ. ಅಲ್ಲದೇ ಕುವೈತ್ನ ಮುಸ್ಲಿಂ ಜನರು ಪ್ರವಾದಿಯನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ ಎಂದು ಸ್ಟೋರ್ನ ಸಿಇಒ ನಾಸರ್ ಅಲ್ ಮುತೈರಿ ಹೇಳಿದ್ದಾರೆ.
ಏನಿದು ವಿವಾದ ?
ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗಳು ದೇಶ ಹಾಗೂ ವಿದೇಶದಾದ್ಯಂತ ಮುಸ್ಲಿಮರಲ್ಲಿ ಆಕ್ರೋಶವನ್ನು ಹುಟ್ಟು ಹಾಕಿದೆ. ಕಳೆದ ವಾರ ಟಿವಿ ಸಂದರ್ಶನವೊಂದರಲ್ಲಿ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಯು ಉತ್ತರ ಪ್ರದೇಶದ ಕಾನ್ಪುರ ಸೇರಿದಂತೆ ವಿವಿಧೆಡೆಗಳಲ್ಲಿ ಘರ್ಷಣೆಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿ : Chiranjeevi Sarja : ಚಂದನವನದಿಂದ ಮರೆಯಾದ ಸ್ಮೈಲ್ ಪ್ರಿನ್ಸ್ : ಚಿರಂಜೀವಿ ಸರ್ಜಾ ಅಗಲಿಕೆ ಎರಡು ವರ್ಷ
ಇದನ್ನೂ ಓದಿ : Nigeria church : ಚರ್ಚ್‌ನಲ್ಲಿ ಗುಂಡಿನ ಚಕಮಕಿ : 50 ಮಂದಿ ಸಾವು, ಹಲವರಿಗೆ
Kuwait Supermarket Removes Indian Products From Shelves Over Prophet Mohammed Remarks Row