Severe Heatwave Warning : ರಾಷ್ಟ್ರ ರಾಜಧಾನಿ ಸೇರಿದಂತೆ ಹಲವು ರಾಜ್ಯಗಳಲ್ಲಿ ತೀವ್ರ ಉಷ್ಣ ಅಲೆಯ ಎಚ್ಚರಿಕೆ

Severe Heatwave Warning : ದೆಹಲಿ , ಪಂಜಾಬ್​ ಹರಿಯಾಣ ಹಾಗೂ ಉತ್ತರ ಪ್ರದೇಶಗಳಲ್ಲಿ ತೀವ್ರವಾದ ಉಷ್ಣದ ಅಲೆಗಳಿಂದಾಗಿ ಭಾರತೀಯ ಹವಾಮಾನ ಇಲಾಖೆಯು ಸೋಮವಾರ ಆರೆಂಜ್​ ಅಲರ್ಟ್​ ಘೋಷಣೆ ಮಾಡಿದೆ. ಭಾರತೀಯ ಹವಾಮಾನ ಇಲಾಖೆ ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿತ್ತು .

ದೆಹಲಿಯಲ್ಲಿ ಆರೆಂಜ್​ ಅಲರ್ಟ್ ಘೋಷಣೆ ಮಾಡಲಾಗಿದೆ. ಹರಿಯಾಣ, ಪಂಜಾಬ್​, ದೆಹಲಿ , ಉತ್ತರ ಪ್ರದೇಶ , ಮಧ್ಯ ಪ್ರದೇಶ ಹಾಗೂ ರಾಜಸ್ಥಾನದ ಕೆಲವು ಭಾಗಗಳಲ್ಲಿ ಜೂನ್​ 4ರಿಂದ ತೀವ್ರ ಶಾಖದ ಅಲೆ 44°-47°C ನಡುವಿನ ತಾಪಮಾನ ಇನ್ನೂ ನಾಲ್ಕು ದಿನಗಳವರೆಗೆ ಇರಲಿದೆ. ಈ ಸಮಯದಲ್ಲಿ ಶಾಖವು ಅತಿಯಾಗಿ ಇರುವದರಿಂದ ಜನರು ಮನೆಯಿಂದ ಹೊರಬರುವಾಗ ಎಚ್ಚರಿಕೆಯಿಂದ ಇರುವಂತೆ ನಾವು ಸಲಹೆ ನೀಡುತ್ತೇವೆ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಆರ್​.ಕೆ ಜೆನಮಣಿ ಹೇಳಿದರು.

ಇದನ್ನು ಓದಿ : Nigeria church : ಚರ್ಚ್‌ನಲ್ಲಿ ಗುಂಡಿನ ಚಕಮಕಿ : 50 ಮಂದಿ ಸಾವು, ಹಲವರಿಗೆ

ಉತ್ತರ ಭಾರತದಲ್ಲಿ ಎಲ್ಲಿಯೂ ಮುಂಗಾರು ಆರಂಭವಾಗಿಲ್ಲ ಎಂದು ಆರ್.ಕೆ ಜೆನಮಣಿ ಹೇಳಿದ್ದಾರೆ. ನಾವು ಈ ಸಂಬಂಧ ಮೇಲ್ವಿಚಾರಣೆ ನಡೆಸುತ್ತಿದ್ದೇವೆ. ದೆಹಲಿಯಲ್ಲಿ ಮಾನ್ಸೂನ್​ ಆರಂಭಕ್ಕೆ ಇನ್ನೂ ಸಮಯವಿದೆ ಎಂದು ಹೇಳಿದ್ದಾರೆ. ಕಳೆದೆರಡು ದಿನಗಳಿಂದ ದೆಹಲಿಯು ತೀವ್ರವಾದ ಬಿಸಿಲಿನ್​ ಝಳಕ್ಕೆ ತತ್ತರಿಸಿ ಹೋಗಿದೆ. ಭಾನುವಾರ ದೆಹಲಿಯಲ್ಲಿ ಗರಿಷ್ಟ 44.8 ಡಿಗ್ರಿ ತಾಪಮಾನ ದಾಖಲಾಗಿದೆ. ಮುಂಗೇಶ್​ಪುರದಲ್ಲಿ ಭಾನುವಾರ 47.8 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದ್ದರೆ, ಅಕ್ಷರ ಧಾಮದಲ್ಲಿ 46.6 ಡಿಗ್ರಿ ಸೆಲ್ಸಿಯಸ್​​, ನಜಫ್​​ಗಡ್​​ 46.3 ಡಿಗ್ರಿ ಸೆಲ್ಸಿಯಸ್​, ಪಿತಾಂಪುರದಲ್ಲಿ 46.2 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.

ಇದನ್ನೂ ಓದಿ : kerala girl commits suicide : ಅತಿಯಾದ ಮೊಬೈಲ್​ ಚಟದಿಂದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಇದನ್ನೂ ಓದಿ : Kuwait Supermarket : ಪ್ರವಾದಿ ಮೊಹಮ್ಮದ್​​ ವಿರುದ್ಧ ಹೇಳಿಕೆಗೆ ಹೆಚ್ಚಿದ ಆಕ್ರೋಶ : ಕುವೈತ್​ನಲ್ಲಿ ಭಾರತೀಯ ಉತ್ಪನ್ನಗಳಿಗೆ ಗೇಟ್​ಪಾಸ್​

ಇದನ್ನೂ ಓದಿ : British Tourist Raped : ಮಸಾಜ್​ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಗೋವಾದಲ್ಲಿ ಅತ್ಯಾಚಾರ : ಆರೋಪಿ ಬಂಧನ

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Severe Heatwave Warning For Delhi And Neighboring Areas, IMD Issues Orange Alert

Comments are closed.