Bernard Arnault : ಇಳಿ ವಯಸ್ಸಲ್ಲಿ ಬರ್ನಾರ್ಡ್ ಅರ್ನಾಲ್ಟ್ ಮುಡಿಗೇರಿತು ವಿಶ್ವದ ಶ್ರೀಮಂತ ವ್ಯಕ್ತಿ ಪಟ್ಟ

  • ಸುಶ್ಮಿತಾ ಸುಬ್ರಹ್ಮಣ್ಯ

ಎಲ್ಲರಿಂತ ನಾನು ಶ್ರೀಮಂತನಾಗಿರಬೇಕು ಅನ್ನೋ ಆಸೆ ಯಾರಿಗೆ ತಾನೆ ಇರೋದಿಲ್ಲಾ ಹೇಳಿ. ಅದರಲ್ಲೂ ಪ್ರಪಂಚದಲ್ಲೀರೋ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಬರೋದು ಅಂದ್ರೆ ಸುಮ್ನೇನಾ ? ಆ ಪಟ್ಟಿಯಲ್ಲಿ ಹೆಸರು ಬಂತು ಎಂದರೇ ಆತ ಕುಬೇರನ ವಂಶದವನೇ ಆಗಿರಬೇಕು. ಆದ್ರೀಗ ಇಳಿ ವಯಸ್ಸಿನ ಉದ್ಯಮಿಯೋರ್ವರು ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ತಂತ್ರಜ್ಞಾನ ದೈತ್ಯ ಸಂಸ್ಥೆ ಟೆಸ್ಲಾದ ಅಧ್ಯಕ್ಷ ಎಲಾನ್ ಮಸ್ಕ್ ಅವರಿಗಿಂತ ಮತ್ತೊಬ್ಬ ಶ್ರೀಮಂತ ಈಗ ಜಗತ್ತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಅವರು ತಮ್ಮ ಇಳಿ ವಯಸ್ಸಿನಲ್ಲಿ ಈ ಭಾರೀ ಶ್ರೀಮಂತಿಕೆಯ ಪಟ್ಟವನ್ನು ಹೊತ್ತಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಈಗ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿರುವವರು ಫ್ಯಾಷನ್ ಟೈಕೂನ್ ಆದ ಬರ್ನಾರ್ಡ್ ಅರ್ನಾಲ್ಟ್. ಫೋರ್ಬ್ಸ್ನ ರಿಯಾಲ್-ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ, ಅರ್ನಾಲ್ಟ್ ನಿವ್ವಳ ಆಸ್ತಿ ಮೌಲ್ಯ ಗುರುವಾರ 19,910 ಕೋಟಿ ಅಮೆರಿಕನ್ ಡಾಲರ್ ಇತ್ತು.

ಈ ಮಧ್ಯೆ ಬೆಜೋಸ್ ರಿಯಲ್ ಟೈಮ್ ನಿವ್ವಳ ಆಸ್ತಿ ಮೌಲ್ಯ 19,380 ಕೋಟಿ ಅಮೆರಿಕನ್ ಡಾಲರ್ ಎದ್ದರೆ, ಎಲಾನ್ ಮಸ್ಕ್ ನಿವ್ವಳ ಆಸ್ತಿ ಮೌಲ್ಯ 18,470 ಕೋಟಿ ಯುಎಸ್‌ಡಿ ಇದಿತ್ತು. ನಿವೃತ್ತಿ ವಯಸ್ಸನ್ನೂ ದಾಟಿದ ಮೇಲೂ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಜಗತ್ತಿನ ಕಣ್ಣುಗಳನ್ನು ತನ್ನತ್ತ ಸೆಳೆದು ಕೊಂಡಿದ್ದಾರೆ.

ಸದ್ಯ ಅರ್ನಾಲ್ಟ್ ವಿಶ್ವದ ಪ್ರಮುಖ ಫ್ಯಾಷನ್ ಕಂಪೆನಿಯೊಂದರ ಮುಖ್ಯಸ್ಥ ಹುದ್ದೆಯಲ್ಲಿದ್ದಾರೆ. ಎಲ್ ವಿ ಎಮ್ ಎಚ್ ಮೊಯೆಟ್ ಹೆನಿಸ್ಸಿ ಲೂಯಿಸ್ ವ್ಯೂಟನ್ ಎಂಬ ವಿಲಾಸಿ ವಸ್ತುಗಳ ಮಾರಾಟದ ಮುಂಚೂಣಿಯಲ್ಲಿರುವ ಕಂಪೆನಿಯನ್ನು 72 ವರ್ಷದ ಇಳಿ ವಯಸ್ಸಿನ ಬಿಲಿಯನೇರ್ ಮುನ್ನಡೆಸುತ್ತಿದ್ದಾರೆ ಎನ್ನುವುದೇ ಅಚ್ಚರಿ.

( Louis Vuitton’s Bernard Arnault is now world’s richest person)

Comments are closed.