Miss England :ಮುಖಕ್ಕೆ ಒಂದಿಂಚೂ ಮೇಕಪ್​ ಧರಿಸದೇ ಮಿಸ್​ ಇಂಗ್ಲೆಂಡ್​ ಸ್ಫರ್ಧೆಯಲ್ಲಿ ಫೈನಲ್​ ಪ್ರವೇಶಿಸಿ ಇತಿಹಾಸ ಬರೆದಿದ್ದಾರೆ ಈ ಮಾಡೆಲ್​

Miss England :

ಫ್ಯಾಶನ್ ಲೋಕ ಅಂದರೆ ಅಲ್ಲಿ ಮೇಕಪ್​ ಇಲ್ಲ ಅಂದರೆ ಆಗೋದೇ ಇಲ್ಲ ಎಂಬ ಮಾತೊಂದಿತ್ತು. ಆದರೆ ಲಂಡನ್​​ನ ಮೆಲಿಸಾ ರವೂಫ್​​ ಎಂಬ 20 ವರ್ಷದ ಯುವತಿ ಮೇಕಪ್​ ಇಲ್ಲದೇ ರ್ಯಾಂಪ್​​ ವಾಕ್​ ಮಾಡಿದ ವಿಶ್ವದ ಮೊದಲ ಮಹಿಳೆಗೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮಿಸ್​ ಇಂಗ್ಲೆಂಡ್​ ಸೌಂದರ್ಯ ಸ್ಫರ್ಧೆಗೆ ಬರೋಬ್ಬರಿ 94 ವರ್ಷಗಳ ಸುದೀರ್ಘ ಇತಿಹಾಸವಿದ್ದು ಇಷ್ಟು ವರ್ಷಗಳಲ್ಲಿ ಮೇಕಪ್​ ಧರಿಸದೇ ರ್ಯಾಂಪ್​ ವಾಕ್​ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ನಾನು ಯಾವುದೇ ಮೇಕಪ್​ ಲುಕ್​ನ್ನು ತೋರಿಸದೇ ನೈಸರ್ಗಿಕ ಸೌಂದರ್ಯವನ್ನು ತೋರಿಸಲು ನಾನು ಇಚ್ಛಿಸಿದ್ದೆ ಎಂದು ಮೆಲಿಸಾ ಹೇಳಿದ್ದಾರೆ. ಮೇಕಪ್​ ಧರಿಸದೇ ಸೆಮಿಫೈನಲ್​​ವರೆಗೂ ಪ್ರವೇಶಿಸಿರುವ ಮೆಲಿಸಾ ರವೂಫ್​ ಇದೀಗ ಫೈನಲ್​ನಲ್ಲಿಯೂ ಅವಕಾಶವನ್ನು ಪಡೆದಿದ್ದಾರೆ.ಅಲ್ಲದೇ ಪ್ರತಿಯೊಬ್ಬ ಮಹಿಳೆಯೂ ಮೇಕಪ್​ ಧರಿಸದೇ ಆತ್ಮವಿಶ್ವಾಸದಿಂದ ಓಡಾಡಬೇಕು ಎಂದು ಹೇಳಿದ್ದಾರೆ .


ಮೆಲಿಸಾ ರವೂಫ್​​ 2019ರಲ್ಲಿ Bare Face ರೌಂಡ್​ನಲ್ಲಿ ವಿಜೇತರಾಗಿದ್ದರು. ಮೆಲಿಸಾ ರವೂಫ್​ ಧೈರ್ಯದ ಬಗ್ಗೆ ಮಾತನಾಡಿದ ಸ್ಪರ್ಧೆ ಸಂಘಟಕರಾದ ಆಂಜಿ ಬೀಸ್ಲಿ, ಸೋಶಿಯಲ್​ ಮೀಡಿಯಾದಲ್ಲಿ ಮೇಕಪ್​ ಹಾಗೂ ಫಿಲ್ಟರ್​​ಗಳಿಂದ ಮಹಿಳೆಯರು ತಮ್ಮನ್ನು ತಾವು ಮರೆ ಮಾಡಿಕೊಳ್ಳದೇ ನಿಜವಾಗಿಯೂ ತಾವು ಹೇಗಿದ್ದೇವೆ ಎಂಬುದನ್ನು ಮಹಿಳೆಯರು ಧೈರ್ಯದಿಂದ ಪ್ರದರ್ಶಿಸಬೇಕು ಎಂಬುದನ್ನು ಮೆಲಿಸಾ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಹೇಳಿದರು.
ಮುಖಕ್ಕೆ ಒಂದಿಂಚೂ ಮೇಕಪ್​ ಹಚ್ಚದೇ ಸೆಮಿಫೈನಲ್​ ಪ್ರವೇಶಿಸಿದ ಸ್ಫರ್ಧಿಯನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನ ಎಂದು ಆಂಜಿ ಬೀಸ್ಲಿ ಹೇಳಿದ್ದಾರೆ.

ಮೆಲಿಸಾ ರವೂಫ್​ ಇದನ್ನು ಅದ್ಭುತ ಅನುಭವ ಎಂದು ಹೇಳಿದ್ದಾರೆ. ಫೈನಲ್​ ಎಂಟ್ರಿಯಾಗುತ್ತಿದ್ದಂತೆಯೇ ನನಗೆ ಇದನ್ನೇ ನಂಬಲು ಸಾಧ್ಯವಾಗಲಿಲ್ಲ. ನಾನು ಆಂತರಿಕ ಸೌಂದರ್ಯವನ್ನು ಉತ್ತೇಜಿಸಲು ಯತ್ನಿಸುತ್ತಿದ್ದೇನೆ. ನಿಮ್ಮ ತ್ವಚೆಯ ಮೇಲೆ ನಿಮಗೆ ಪ್ರೀತಿ ಇದ್ದರೆ ನೀವು ಅದನ್ನು ಮೇಕಪ್​ನಿಂದ ಮುಚ್ಚಿಕೊಳ್ಳಬೇಕಾದ ಅಗತ್ಯವಿಲ್ಲ.ಅಲ್ಲದೇ ನಿಮ್ಮ ಸರಳತೆಯಲ್ಲಿ ನಿಮ್ಮ ಸೌಂದರ್ಯ ಅಡಗಿದೆ ಎಂದು ಮೆಲಿಸಾ ಹೇಳಿದರು. ಅಕ್ಟೋಬರ್​ 17ರಂದು ಮೆಲಿಸಾ 40 ಉಳಿದ ಸ್ಪರ್ಧಿಗಳ ಜೊತೆಯಲ್ಲಿ ಮಿಸ್​ ಇಂಗ್ಲೆಂಡ್​ ಕಿರೀಟಕ್ಕಾಗಿ ಸೆಣಸಾಡಲಿದ್ದಾರೆ.

ಇದನ್ನು ಓದಿ : drone training to the police : ದೇಶದಲ್ಲೇ ಮೊದಲ ಬಾರಿಗೆ ಪೊಲೀಸರಿಗೆ ಡ್ರೋನ್​ ತರಬೇತಿ ನೀಡಿದೆ ಕರ್ನಾಟಕ

ಇದನ್ನೂ ಓದಿ : Condoms From Swiggy : ಸ್ವಿಗ್ಗಿಯಲ್ಲಿ ಐಸ್​ಕ್ರೀಂ, ಚಿಪ್ಸ್​ ಆರ್ಡರ್​ ಮಾಡಿದವನಿಗೆ ಸಿಕ್ಕಿದ್ದು ಕಾಂಡೋಮ್​​ : ವೈರಲ್​ ಆಯ್ತು ಟ್ವೀಟ್​

Miss England finalist Melisa Raouf creates history, is first woman in pageant’s history to compete without makeup

Comments are closed.