ಸೋಮವಾರ, ಏಪ್ರಿಲ್ 28, 2025
HomeCinemaವಿಶ್ವ ಸುಂದರಿ ಸ್ಪರ್ಧಿ ಸಿಯೆನ್ನಾ ವೀರ್ ದುರಂತ ಸಾವು

ವಿಶ್ವ ಸುಂದರಿ ಸ್ಪರ್ಧಿ ಸಿಯೆನ್ನಾ ವೀರ್ ದುರಂತ ಸಾವು

- Advertisement -

ಅಸ್ಟ್ರೇಲಿಯಾ : ವಿಶ್ವ ಸುಂದರಿ ಫೈನಲಿಸ್ಟ್ ಸಿಯೆನ್ನಾ ವೀರ್ ( Miss Universe Finalist Sienna Weir) ದುರಂತ ಕುದುರೆ ಸವಾರಿ ನಡೆಸುತ್ತಿದ್ದ ವೇಳೆಯಲ್ಲಿ ನಡೆದ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಾಡೆಲ್‌ ಸಿಯೆನ್ನಾ ವೀರ್ ಅವರಿಗೆ 23 ವರ್ಷ ವಯಸ್ಸಾಗಿತ್ತು. ಸಾವಿನ ವಿಚಾರವನ್ನು ಆಕೆಯ ಕುಟುಂಬಸ್ಥರು ಹಂಚಿಕೊಂಡಿದ್ದಾರೆ.

2022 ರ ಮಿಸ್ ಯೂನಿವರ್ಸ್ ಫೈನಲಿಸ್ಟ್ ಆಗಿದ್ದು, ಆಸ್ಟ್ರೇಲಿಯನ್ ಫ್ಯಾಷನ್ ಮಾಡೆಲ್ ಆಗಿಯೂ ಸಿಯೆನ್ನಾ ವೀರ್ (Sienna Weir) ಸಾಕಷ್ಟು ಪ್ರಸಿದ್ದಿ ಪಡೆದುಕೊಂಡಿದ್ದರು. ಆಕೆ ಕುದುರೆ ಸವಾರಿ ಮಾಡುವ ವೇಳೆಯಲ್ಲಿ ನಡೆದ ಅಪಘಾತದಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಸಿಯೆನ್ನಾ ವೀರ್ ಅವರು ಏಪ್ರಿಲ್ 2 ರಂದು ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಮೈದಾನದಲ್ಲಿ ಸವಾರಿ ಮಾಡುತ್ತಿದ್ದಾಗ ಅವರ ಕುದುರೆ ಬಿದ್ದಿತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅಲ್ಲದೇ ಆಕೆಯ ಮಾಡೆಲಿಂಗ್‌ ಏಜೆನ್ಸಿ ಸ್ಕೂಪ್‌ ಮ್ಯಾನೇಜ್ಮೆಂಟ್‌ ಕೂಡ ಸಾವಿನ ಸುದ್ದಿಯನ್ನು ಖಚಿತ ಪಡಿಸಿದೆ. ಆಕೆಯ ಹಲವು ಪೋಟೋಗಳನ್ನು ಇನ್‌ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಮ್ಮ ಹೃದಯದಲ್ಲಿ ಎಂದೆಂದಿಗೂ ಎಂದು ಬರೆದು ಪೋಸ್ಟ್‌ ಗೆ ಶೀರ್ಷಿಕೆ ನೀಡಲಾಗಿದೆ.

2022 ರಲ್ಲಿ ನಡೆದ ಆಸ್ಟ್ರೇಲಿಯನ್ ಮಿಸ್ ಯೂನಿವರ್ಸ್ (Miss Universe Finalist Sienna Weir) ಸ್ಪರ್ಧೆಯಲ್ಲಿ 27 ಅಂತಿಮ ಸ್ಪರ್ಧಿಗಳಲ್ಲಿ ಸಿಯೆನ್ನಾ ವೀರ್ ಒಬ್ಬರು. ಅವರು ಸಿಡ್ನಿ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯ ಮತ್ತು ಮನೋವಿಜ್ಞಾನದಲ್ಲಿ ಡಬಲ್ ಪದವಿ ಪಡೆದಿದ್ದರು. ತನ್ನ ವೃತ್ತಿ ಜೀವನವನ್ನು ಮುಂದುವರಿಸಲು ಜೊತೆಗೆ ತನ್ನ ಸಹೋದರಿ, ಸೊಸೆ ಹಾಗೂ ಸೋದರಳಿಯನ ಜೊತೆಗೆ ಕಳೆಯಲು ಯುಕೆಗೆ ತೆರಳಲು ಸಿದ್ದತೆ ಮಾಡಿಕೊಂಡಿದ್ದರು. ಆದರೆ ಈ ನಡುವಲ್ಲೇ ದುರಂತ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿಯೆನ್ನಾ ವೀರ್ ಕುದುರೆ ಸವಾರಿಯನ್ನು ಹವ್ಯಾಸವನ್ನಾಗಿಸಿ ಕೊಂಡಿದ್ದರು. ಈ ಹಿಂದೆ ಗೋಲ್ಡ್‌ ಕೋಸ್ಟ್‌ ಮ್ಯಾಗಝಿನ್‌ಗೆ ನೀಡಿದ ಸಂದರ್ಶನದ ವೇಳೆಯಲ್ಲಿ ಕುದುರೆ ಸವಾರಿ ನನ್ನ ಅತ್ಯಂತ ಪ್ರೀತಿಯ ಕ್ರೀಡೆಗಳಲ್ಲೊಂದು. ನಾನು 3 ವರ್ಷ ವಯಸ್ಸಿನಿಂದಲೂ ಕುದುರೆ ಸವಾರಿ ಮಾಡುತ್ತಿದ್ದೇನೆ. ಕುದುರೆ ಸವಾರಿ ಇಲ್ಲದೇ ನನ್ನ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ಪ್ರತೀ ವೀಕೆಂಡ್‌ನಲ್ಲಿಯೂ ನ್ಯೂ ಸೌತ್ ವೇಲ್ಸ್ ನಲ್ಲಿ ತರಬೇತಿಯನ್ನು ಪಡೆಯುತ್ತಿದ್ದೇವೆ. ಅಲ್ಲದೇ ಸ್ಪರ್ಧೆಗಳಲ್ಲಿ ಭಾಗವಹಿಸುವ ಸಲುವಾಗಿ ವಾರಕ್ಕೆ 2-3 ಬಾರಿ ಗ್ರಾಮೀಣ ಸಿಡ್ನಿಗೆ ಪ್ರಯಾಣಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಮಾಡೆಲ್‌ ಸಿಯೆನ್ನಾ ವೀರ್ ನಿಧನಕ್ಕೆ ಸ್ನೇಹಿತರು, ಕುಟುಂಬ ಮತ್ತು ಮಾಡೆಲಿಂಗ್ ಉದ್ಯಮದಲ್ಲಿನ ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ : ನಟಿ ಮೇಘನಾರಾಜ್‌ ಸರ್ಜಾಗೆ ಹುಟ್ಟುಹಬ್ಬದ ಸಂಭ್ರಮ

ಇದನ್ನೂ ಓದಿ : ಮೌನವಾಗಿದ್ಯಾಕೇ ಮೋಹಕ ತಾರೆ ! ಕೊನೆಗೂ ಅಜ್ಞಾತವಾಸಕ್ಕೆ ಕಾರಣ ಕೊಟ್ಟ ರಮ್ಯ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular