What is NoMoPhobia: ಏನಿದು NoMoPhobia ಖಾಯಿಲೆ; ನಾಲ್ವರಲ್ಲಿ ಮೂವರಿಗೆ ಈ ಖಾಯಿಲೆಯಿದೆ ಎಂದು ಹೇಳಿದ ವರದಿ

ಸ್ಮಾರ್ಟ್‌ಫೋನ್‌ (Smartphone) ಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅದಿಲ್ಲಿದೆ ಬದುಕುವುದು ಊಹಿಸಲೂ ಸಾಧ್ಯವಿಲ್ಲ. ಸ್ಮಾರ್ಟ್‌ಫೋನ್‌ ಗೆ ಸಂಬಂಧಿಸಿದ ವಿಶೇಷ ವರದಿಯೊಂದು ಹೊರಬಿದ್ದಿದೆ. Oppo ಮತ್ತು ಕೌಂಟರ್‌ಪಾಯಿಂಟ್ ರಿಸರ್ಚ್ ವರದಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರತಿ 4 ಭಾರತೀಯರಲ್ಲಿ 3 ಜನರಿಗೆ NOMOPHHOBIA ಎಂಬ ಕಾಯಿಲೆ ಇದೆ ಎಂದು ಹೇಳಲಾಗಿದೆ (What is NoMoPhobia). ಸುಮಾರು 72% ಭಾರತೀಯರು ತಮ್ಮ ಮೊಬೈಲ್ ಫೋನ್‌ನ ಬ್ಯಾಟರಿ 20% ತಲುಪಿದ ತಕ್ಷಣ ‘ಕಡಿಮೆ ಬ್ಯಾಟರಿ ಆತಂಕ’ಕ್ಕೆ ಒಳಗಾಗುತ್ತಾರೆ. ಮತ್ತೊಂದೆಡೆ, 65% ಜನರು ಈ ಕಾರಣದಿಂದಾಗಿ, ಆತಂಕ, ಸಂಪರ್ಕ ಕಡಿತ, ಅಸಹಾಯಕ ಭಾವನೆ, ಭಯ, ಹೆದರಿಕೆ ಮುಂತಾದ ಭಾವನಾತ್ಮಕ ಅಸ್ವಸ್ಥತೆಗಳು ಪ್ರಾರಂಭವಾಗುತ್ತವೆ. ನಿಮಗೂ ಇದೇ ರೀತಿ ಅನಿಸಿದರೆ ನೀವೂ ನೋಮೋಫೋಬಿಯಾದಿಂದ ಬಳಲುತ್ತಿದ್ದೀರಿ ಎಂದು ವರದಿ ಹೇಳುತ್ತಿದೆ.

ಏನಿದು NOMOPHHOBIA (ನೋಮೋಫೋಬಿಯಾ) ?
ನೋಮೋಫೋಬಿಯಾ ಅಂದರೆ ನೋ ಮೊಬೈಲ್ ಫೋನ್ ಫೋಬಿಯಾ ಎಂದರೆ ಮೊಬೈಲ್‌ನಿಂದ ದೂರವಿರುವಾಗ ಅಂದರೆ ಲೋ ಬ್ಯಾಟರಿ ಆದಾಗ ವ್ಯಕ್ತಿಯು ಮಾನಸಿಕವಾಗಿ ಆತಂಕವನ್ನು ಅನುಭವಿಸುತ್ತಾನೆ. ಸ್ಮಾರ್ಟ್‌ಫೋನ್‌ನ ಬಳಕೆಯಿಂದಾಗಿ ಇದು ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ.

ವರದಿ ಹೇಳಿದ್ದೇನು ?
ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ Oppo ಮತ್ತು ಕೌಂಟರ್‌ಪಾಯಿಂಟ್ ರಿಸರ್ಚ್ ಜನರ ಮೇಲೆ ಒಂದು ಅಧ್ಯಯನವನ್ನು ನಡೆಸಿದೆ. ಅದರ ಹೆಸರು ‘NoMoPhobia: Low Battery Anxiety Consumer Study’ ಎಂದು. ಈ ಅಧ್ಯಯನದಲ್ಲಿ, 47 ಪ್ರತಿಶತದಷ್ಟು ಜನರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ದಿನಕ್ಕೆ ಎರಡು ಬಾರಿ ಚಾರ್ಜ್ ಮಾಡುತ್ತಾರೆ ಮತ್ತು ಸುಮಾರು 87 ಪ್ರತಿಶತದಷ್ಟು ಜನರು ತಮ್ಮ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡುವಾಗ ಇದಕ್ಕೆ ಬಲಿಯಾಗುವುದು ಕಂಡುಬಂದಿದೆ. ವರದಿಯ ಪ್ರಕಾರ, ಸ್ಮಾರ್ಟ್‌ಫೋನ್‌ನ ಬ್ಯಾಟರಿ ಕಡಿಮೆಯಾದಾಗ 74 ಪ್ರತಿಶತ ಮಹಿಳೆಯರು ಚಿಂತಿತರಾಗಿದ್ದಾರೆ. ಆದರೆ ಪುರುಷರಲ್ಲಿ ಈ ಅಂಕಿ ಅಂಶವು 82 ಪ್ರತಿಶತದಷ್ಟಿದೆ. ಬ್ಯಾಟರಿ ಕಾರ್ಯಕ್ಷಮತೆ ಉತ್ತಮವಾಗಿರದಿದ್ದಾಗ ಸುಮಾರು 60% ಜನರು ತಮ್ಮ ಫೋನ್‌ಗಳನ್ನು ಬದಲಾಯಿಸುತ್ತಾರೆ ಎಂದು ವರದಿಯಲ್ಲಿ ಕಂಡುಬಂದಿದೆ. ಅಲ್ಲದೆ, 92.5 ಪ್ರತಿಶತ ಜನರು ಬ್ಯಾಟರಿ ಹೆಚ್ಚು ಕಾಲ ಉಳಿಯಲು ತಮ್ಮ ಫೋನ್‌ಗಳಲ್ಲಿ ಪಾವರ್‌ ಸೇವಿಂಗ್‌ ಮೋಡ್ ಅನ್ನು ಇರಿಸುತ್ತಾರೆ. 40 ರಷ್ಟು ಜನರು ತಮ್ಮ ಫೋನ್ ಅನ್ನು ದಿನದ ಮೊದಲನೇ ಕಾರ್ಯ ಮತ್ತು ಕೊನೆಯ ಕಾರ್ಯವನ್ನಾಗಿ ಬಳಸುತ್ತಾರೆ ಎಂದು ವರದಿ ಹೇಳುತ್ತದೆ.

ಒಪ್ಪೋ ಇಂಡಿಯಾ ಹೇಳುವುದೇನು ?
ಈ ವರದಿಯ ಬಿಡುಗಡೆಯ ಕುರಿತು Oppo ಇಂಡಿಯಾ ಸಿಎಂಒ ದಮಯಂತ್ ಸಿಂಗ್ ಖನೋರಿಯಾ ಅವರು ಈ ವರದಿಯ ಸಹಾಯದಿಂದ ನಾವು ಗ್ರಾಹಕರ ನಡವಳಿಕೆಯನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ, ಇದರಿಂದ ನಾವು ನಮ್ಮ ಉತ್ಪನ್ನಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬಹುದು. ಜನರಿಗೆ ಲಾಸ್ಟಿಂಗ್‌ ವೆಲ್ಯೂ ಮತ್ತು ಕೈಂಡ್‌ನೆಸ್‌ ನೀಡುವುದಾಗಿದೆ. ಇದೇ ಸಂದರ್ಭದಲ್ಲಿ ಕೌಂಟರ್‌ಪಾಯಿಂಟ್‌ ರಿಸರ್ಚ್‌ನ ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ಮಾತನಾಡಿ, ಇಂದು ಸ್ಮಾರ್ಟ್‌ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ ಮತ್ತು ಇದರಿಂದಾಗಿ ಜನರು ಫೋನ್ ಇಲ್ಲದೆ ಬದುಕುವುದಿಲ್ಲ ಎಂಬ ಫೋಬಿಯಾಕ್ಕೆ ಒಳಗಾಗಿದ್ದಾರೆ. ಸ್ಮಾರ್ಟ್ ಫೋನ್ ಬ್ಯಾಟರಿ ಬಾಳಿಕೆ ಕಡಿಮೆ ಇರುವುದರಿಂದ 31 ರಿಂದ 40 ವರ್ಷ ವಯೋಮಾನದ ಕಾರ್ಮಿಕರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ ಎಂದರು. ಇದಾದ ಬಳಿಕ 25ರಿಂದ 30 ವರ್ಷದ ಯುವಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : Protein Vegetables : ಬರೀ ಮೊಟ್ಟೆ ಅಷ್ಟೇ ಅಲ್ಲ, ಈ ಮೂರು ತರಕಾರಿಗಳೂ ಪ್ರೋಟೀನ್‌ ಕೊರತೆ ನೀಗಿಸಬಲ್ಲದು

ಇದನ್ನೂ ಓದಿ : LKG Age Limit : ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ವಯೋಮಿತಿ ಕಡ್ಡಾಯ

(What is NoMoPhobia? 3 out of 4 suffering from this mental disorder)

Comments are closed.