ಭಾನುವಾರ, ಏಪ್ರಿಲ್ 27, 2025
HomeWorldMiss Universe for Married Women: ವಿಶ್ವ ಸುಂದರಿ ಸ್ಪರ್ಧೆಗೆ ವಿವಾಹಿತ ಮಹಿಳೆಯರು, ತಾಯಂದಿರಿಗೂ ಅವಕಾಶ

Miss Universe for Married Women: ವಿಶ್ವ ಸುಂದರಿ ಸ್ಪರ್ಧೆಗೆ ವಿವಾಹಿತ ಮಹಿಳೆಯರು, ತಾಯಂದಿರಿಗೂ ಅವಕಾಶ

- Advertisement -

ಮುಂಬೈ : 2023ರಿಂದ ವಿವಾಹಿತ ಮಹಿಳೆಯರೂ ಹಾಗೂ ತಾಯಂದಿರೂ ಸಹ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು (Miss Universe for Married Women). ಇಂಥದ್ದೊಂದು ಐತಿಹಾಸಿಕ ನಿರ್ಧಾರವನ್ನ ಅಮೆರಿಕ ಮೂಲದ ವಿಶ್ವ ಸುಂದರಿ ಸ್ಪರ್ಧೆ ಆಯೋಜನೆ ಸಂಸ್ಥೆ ತೆಗೆದುಕೊಂಡಿದೆ.

ಇಲ್ಲಿಯವರೆಗೂ ವಿವಾಹವಾದ ಮಹಿಳೆಯರಿಗೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರಲಿಲ್ಲ. ಆದ್ರೀಗ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯು ತಾಯಂದಿರು ಮತ್ತು ವಿವಾಹಿತ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡ್ತಿದೆ. ಆ ಮೂಲಕ ತನ್ನ ಸ್ಪರ್ಧೆಯ ಅರ್ಹತೆಯನ್ನು ವಿಸ್ತರಿಸುತ್ತಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಈಗಿನ ನಿಯಮದ ಪ್ರಕಾರ 18 ರಿಂದ 27 ವರ್ಷದೊಳಗಿನವರು ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾಗವಹಿಸಬಹುದಾಗಿದೆ. ಆದ್ರೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುವವರು ಮದುವೆಯಾಗಿರಬಾರದು, ಮತ್ತು ಮಕ್ಕಳಿಗೆ ಜನ್ಮ ನೀಡಿರಬಾರದು ಅಂತಾ ಇತ್ತು. ಆದ್ರೆ 2023ರಲ್ಲಿ ನಡೆಯೋ 72 ನೇ ವಿಶ್ವ ಸುಂದರಿ ಸ್ಪರ್ಧೆಗೆ ನಿಯಮಗಳನ್ನ ಬದಲಾಯಿಸುತ್ತಿದೆ.

ಮಿಸ್ ಯೂನಿರ್ವಸ್ ಸ್ಪರ್ಧೆಯ ನಿಯಮಗಳು ಬದಲಾಗಿರೋದನ್ನ ಮಾಜಿ ವಿಶ್ವಸುಂದರಿಯರು ಸ್ವಾಗತಿಸಿದ್ದಾರೆ. 2021ರಲ್ಲಿ ಇರ್ಸೇಲ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಪಂಜಾಬ್ ಮೂಲದ ಮಾಡೆಲ್  ಹರ್ನಾಜ್ ಕೌರ್ ಸಂಧು ವಿಶ್ವ ಸುಂದರಿ ಕಿರೀಟವನ್ನ ಮುಡಿಗೇರಿಸಿಕೊಂಡಿದ್ರು. ಹರ್ನಾಜ್ ಕೌರ್ ಗೂ ಮೊದಲು ಕೇವಲ ಇಬ್ಬರು ಮಾತ್ರ ವಿಶ್ವಸುಂದರಿ ಪ್ರಶಸ್ತಿಯನ್ನ ಗೆದ್ದಿದ್ರು. 1994ರಲ್ಲಿ ಸುಶ್ಮಿತಾ ಸೇನ್ ವಿಶ್ವ ಸುಂದರಿ ವಿಜೇತೆಯಾದ್ರೆ, 2000ರಲ್ಲಿ ಲಾರಾ ದತ್ತಾ ಮಿಸ್ ಯೂನಿವರ್ಸ್ ಆಗಿದ್ರು.

ಇದೀಗ ಮಿಸ್ ಯೂನಿವರ್ಸ್ ಸ್ಪರ್ಧೆ ಆಯೋಜನೆ ಮಾಡ್ತಿರೋ ಸಂಸ್ಥೆ ನಿಯಮಗಳನ್ನ ಬದಲಾಯಿಸಿರೋದು ಮಿಸ್ ಯೂನಿವರ್ಸ್ ಆಗ್ಬೇಕೆಂದು ಕೊಂಡು ತಯಾರಿ ನಡೆಸ್ತಿದ್ದವರಿಗೆ ಮತ್ತಷ್ಟು ಖುಷಿ ನೀಡಿದೆ.

ಇದನ್ನೂ ಓದಿ : Ravichandran son Manoranjan wedding : ಕ್ರೇಜಿಸ್ಟಾರ್ ಮನೆಯಲ್ಲಿ ಮಂಗಳವಾದ್ಯ : ಮನೋರಂಜನ್ ಬದುಕಿನಲ್ಲಿ “ಸಂಗೀತ” ಸುಧೆ

ಇದನ್ನೂ ಓದಿ : Puneeth Rajkumar name : ಅಭಿಮಾನಿ ಮಗುಗೆ ಅಪ್ಪು ಹೆಸರು, ಸ್ಪೆಶಲ್ ಗಿಫ್ಟ್ : ಶಿವಣ್ಣ,ಆಶ್ವಿನಿ ಕಾರ್ಯಕ್ಕೆ ಶ್ಲಾಘನೆ

ಇದನ್ನೂ ಓದಿ : Ravichandran son Manoranjan wedding : ಕ್ರೇಜಿಸ್ಟಾರ್ ಮನೆಯಲ್ಲಿ ಮಂಗಳವಾದ್ಯ : ಮನೋರಂಜನ್ ಬದುಕಿನಲ್ಲಿ “ಸಂಗೀತ” ಸುಧೆ

miss universe for married women historic decision miss universe 2023

RELATED ARTICLES

Most Popular