Siddaramaiah Private Security : ಮೊಟ್ಟೆ ಪ್ರಕರಣದ ಬಳಿಕ ಫುಲ್ ಅಲರ್ಟ್: ಖಾಸಗಿ ಭದ್ರತೆ ಪಡೆಯಲು ಸಿದ್ದರಾಮಯ್ಯ ಪ್ಲ್ಯಾನ್

ಬೆಂಗಳೂರು : ( Siddaramaiah Private Security ) ನೆರೆ ಹಾಗೂ ಅತಿವೃಷ್ಠಿ ಹಾನಿ ಪರಿಶೀಲನೆಗೆ ತೆರಳಿದ ವೇಳೆ ಮಡಿಕೇರಿಯಲ್ಲಿ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮೇಲೆ ನಡೆದ ಮೊಟ್ಟೆ ಎಸೆತ ಪ್ರಕರಣ ರಾಜ್ಯದಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಘಟನೆ ಹಾಗೂ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಈ ಮಧ್ಯೆಯೇ ಮಾಜಿಸಿಎಂ ಸಿದ್ಧರಾಮಯ್ಯ ಭದ್ರತೆ ಸಂಗತಿ ಮುನ್ನಲೆಗೆ ಬಂದಿದ್ದು ಸಿದ್ಧು ಹೆಚ್ಚುವರಿ ಭದ್ರತೆ ಪಡೆಯಲು ಚಿಂತನೆ ನಡೆಸಿದ್ದಾರೆ ಎನ್ನಲಾಗ್ತಿದೆ.

ವಿಪಕ್ಷ ನಾಯಕ ಸಿದ್ಧರಾಮಯ್ಯನವರ ಮೇಲೆ ಮಡಿಕೇರಿಯಲ್ಲಿ ಮೊಟ್ಟೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಮೊಟ್ಟೆ ಸಿದ್ಧರಾಮಯ್ಯನವರ ಮೇಲೆ ಬಿದ್ದಿಲ್ಲವಾದರೂ ಘಟನೆ ಮಾತ್ರ ವಿಪಕ್ಷ ನಾಯಕರ ಸೆಕ್ಯೂರಿಟಿ ಬ್ರಿಜ್ ಎಂಬ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ ದಾವಣಗೆರೆಯಲ್ಲಿ ನಡೆದ ಸಿದ್ಧರಾಮೋತ್ಸವದ ಯಶಸ್ಸು ಸಿದ್ಧರಾಮಯ್ಯನವರಿಗೆ ಮತ್ತಷ್ಟು ಹುಮ್ಮಸ್ಸು ತಂದಿದ್ದು, ಅದೇ ವಿಶ್ವಾಸ ಹಾಗೂ ತಮ್ಮ ಜನಪ್ರಿಯತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸಿದ್ಧರಾಮಯ್ಯ ಈ ಸರ್ಕಾರಿ ಭದ್ರತಾ ಲೋಪ ವನ್ನೇ ಮುಂದಿಟ್ಟುಕೊಂಡು ಖಾಸಗಿ ಭದ್ರತೆಯ ಮೊರೆ ಹೋಗಲು ನಿರ್ಧರಿಸಿದ್ದಾರಂತೆ.

ಈಗಾಲಗೇ ಸಿದ್ಧರಾಮಯ್ಯನವರಿಗೆ ಮೂರು ಭಾರಿ ಜೀವ ಬೆದರಿಕೆ ಪತ್ರ ಬಂದಿದೆ. ಈಗ ಸರ್ಕಾರಿ ಭದ್ರತೆ ಹಾಗೂ ಪೊಲೀಸರ ಸಮ್ಮುಖದಲ್ಲೇ ಸಿದ್ಧರಾಮಯ್ಯನವರ ಮೇಲೆ ಕೋಳಿ ಮೊಟ್ಟೆ ಎಸೆಯೋ ಪ್ರಯತ್ನ ನಡೆದಿದೆ. ಹೀಗಾಗಿ ಇನ್ಮುಂದೇ ಸಿದ್ಧರಾಮಯ್ಯನವರ ಭದ್ರತೆಗಾಗಿ ಸರ್ಕಾರಿ ಭದ್ರತಾ ವ್ಯವಸ್ಥೆಯನ್ನು ನಂಬಿಕೊಳ್ಳುವುದು ಕಷ್ಟ. ಹೀಗಾಗಿ ಖಾಸಗಿ ಭದ್ರತೆ ಪಡೆಯೋದು ಸೂಕ್ತ ಎಂದು ಸಿದ್ಧು ಆಪ್ತರು ಹಾಗೂ ಕುಟುಂಬಸ್ಥರು ಅಭಿಪ್ರಾಯಿಸಿದ್ದಾರಂತೆ.

ಈ ಬಗ್ಗೆ ಮಾಜಿಸಿಎಂ ಸಿದ್ಧರಾಮಯ್ಯ ಕೂಡ ಗಂಭೀರ ಚಿಂತನೆ ನಡೆಸಿದ್ದು, ಸರ್ಕಾರಿ ಭದ್ರತೆಗಿಂತ ಖಾಸಗಿಯಾಗಿ ಭದ್ರತೆ ಪಡೆಯೋ ಕುರಿತು ಆಪ್ತರ ಜೊತೆ ಚರ್ಚಿಸಿದ್ದಾರಂತೆ. ಇನ್ನೊಂದೆಡೆ ಮಾಜಿಸಿಎಂ ಸಿದ್ಧರಾಮಯ್ಯ ಪುತ್ರ ಯತೀಂದ್ರ್ ಕೂಡ ತಂದೆಯ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಭದ್ರತೆಗಾಗಿ‌ ಸರ್ಕಾರವನ್ನು ನಂಬೋದಿಕ್ಕೆ ಸಾಧ್ಯವಿಲ್ಲ. ಹೀಗಾಗಿ ಖಾಸಗಿ ಭದ್ರತೆ ಪಡೆಯೋದು ಸೂಕ್ತ ಎಂಬ ತೀರ್ಮಾನ ಕೈಗೊಂಡಿದ್ದಾರಂತೆ.

ಈ‌ಮಧ್ಯೆ ಸಿಎಂ ಬಸವರಾಜ್ ಬೊಮ್ಮಾಯಿ ಸಿದ್ಧರಾಮಯ್ಯನವರಿಗೆ ಅಗತ್ಯ ಭದ್ರತೆ ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ‌. ಆದರೆ ಸರ್ಕಾರದ ವೈಫಲ್ಯದತ್ತ ಜನರನ್ನು ಸೆಳೆಯುವ ದೃಷ್ಟಿಯಿಂದ ಮಾಜಿಸಿಎಂ ಸಿದ್ಧರಾಮಯ್ಯನವರು ಖಾಸಗಿ ಭದ್ರತೆ ಮೊರೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Govinda Karajola : ‘ಮುಪ್ಪಿನಲ್ಲಿ ಸಿದ್ದರಾಮಯ್ಯಗೆ ಮಠ-ಮಾನ್ಯಗಳ ಬಗ್ಗೆ ಜ್ಞಾನೋದವಾಗಿದೆ’ : ಗೋವಿಂದ ಕಾರಜೋಳ ವ್ಯಂಗ್ಯ

ಇದನ್ನೂ ಓದಿ : ಜನೋತ್ಸವ Vs ಕಾರ್ಯಕಾರಿಣಿ : ಮತ್ತೆ ಸಂಕಷ್ಟಕ್ಕೆ ಸಿಲುಕಿದ ಸಿಎಂ ಬೊಮ್ಮಾಯಿ

Full alert after Egg case Ex CM Siddaramaiah plan to get private security

Comments are closed.