ಸತ್ತಿದ್ದಾನೆ ಎಂದು ಘೋಷಣೆ ಮಾಡಿದ ಕೈದಿಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು(Prisoner declared dead) ವೈದ್ಯರು ಆತನನ್ನು ಕತ್ತರಿಸಲು ಮುಂದಾಗುತ್ತಿದ್ದಂತೆಯೇ ಎದ್ದು ಕೂತ ಅತ್ಯಂತ ವಿಚಿತ್ರ ಘಟನೆಯೊಂದು ವರದಿಯಾಗಿದೆ.ಸ್ಪೇನ್ನ ವಿಲ್ಲಬೋನಾದಲ್ಲಿರುವ ಆಸ್ಟುರಿಯಾಸ್ ಸೆಂಟ್ರಲ್ ಪೆನಿಟೆನ್ಶಿಯರಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕೈದಿ ಗೊಂಜಾಲೊ ಮೊಂಟೊಯಾ ಜಿಮೆನೆಜ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಘೋಷಣೆ ಮಾಡಿದರು. ಬಳಿಕ ಇವರನ್ನು ಕೂಡಲೇ ಒವಿಡೋದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಮೆಡಿಸಿನ್ಗೆ ಕರೆದುಕೊಂಡು ಹೋಗಲಾಯ್ತು.
ಗೊಂಜಾಲೋ ಮೊಂಟೊಯಾ ಜಿಮೆನೆಜ್ ದೇಹವನ್ನು ಪರೀಕ್ಷಿಸಿದ ಇಬ್ಬರು ವೈದ್ಯರು ಕೂಡ ಈತ ಮೃತಪಟ್ಟಿದ್ದಾನೆ ಎಂದು ಹೇಳಿದ್ದರು. ವಿಧಿವಿಜ್ಞಾನ ತಜ್ಞರು ಕೂಡ ಇದನ್ನು ಅಧಿಕೃತಗೊಳಿಸಿದ್ದರು ಎಂದು ಆಸ್ಟುರಿಯಾಸ್ ಸೆಂಟ್ರಲ್ ಪೆನಿಟೆನ್ಶಿಯರಿಯ ವಕ್ತಾರ ಮಾಹಿತಿ ನೀಡಿದ್ದಾರೆ. ವೈದ್ಯರು ಅಧಿಕೃತ ಘೋಷಣೆ ಮಾಡುತ್ತಿದ್ದಂತೆಯೆ ಗೊಂಗಾಲೋ ಮೊಂಟೊಯಾ ಜಿಮೆನೆಜ್ ಕುಟುಂಬಸ್ಥರಿಗೂ ಮಾಹಿತಿಯನ್ನು ರವಾನಿಸಲಾಗಿತ್ತು.
ಜೈಲಿನಲ್ಲಿ ಅನಾರೋಗ್ಯಕ್ಕೀಡಾಗಿದ್ದ ಗೊಂಜಾಲೋ ಮೊಂಟೊಯಾ ಜಿಮೆನೆಜ್ ಮೃತಪಟ್ಟಿದ್ದಾನೆ ಎಂದು ಘೋಷಣೆ ಮಾಡಲಾಗಿತ್ತು. ಗೊಂಜಾಲೋ ಮೊಂಟೊಯಾ ಜಿಮೆನೆಜ್ ದೇಹದಲ್ಲಿ ಸೈನೋಸಿಸ್ ಲಕ್ಷಣಗಳು ಇದ್ದವು ಎಂದು ವೈದ್ಯರು ಹೇಳಿದ್ದರು. ಆಮ್ಲಜನಕದ ಕೊರತೆಯಿಂದಾಗಿ ಚರ್ಮದ ಬಣ್ಣವು ಬದಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಎಲ್ಲಾ ವರದಿಗಳು ಸಿದ್ಧಗೊಂಡ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಗೊಂಜಾಲೋ ಮೊಂಟಾಯೋ ಜಿಮೆನೆಜ್ರನ್ನು ಮರಣೋತ್ತರ ಪರೀಕ್ಷೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆಯಲ್ಲಿ ವೈದ್ಯರಿಗೆ ಗೊಂಜಾಲೋ ಮೊಂಟಾಯೋಜಿಮೆನೆಜ್ ಮಾತನಾಡುತ್ತಿರುವುದು ವೈದ್ಯರ ಗಮನಕ್ಕೆ ಬಂದಿದೆ. ಶವವೆಂದು ಚೀಲದ ಒಳಗಿದ್ದ ಗೊಂಜಾಲೋ ಬದುಕಿದ್ದಾರೆಂದು ವೈದ್ಯರಿಗೆ ತಿಳಿದುಬಂದಿದೆ.
ಇದನ್ನು ಓದಿ : ಕೇರಳ ಚಿನ್ನ ಸಾಗಣೆ ಪ್ರಕರಣದಲ್ಲಿ ಮತ್ತೊಂದು ತಿರುವು : ಶಿವಶಂಕರ್ ವಿರುದ್ಧ ಆಕ್ರೋಶ ಹೊರಹಾಕಿದ ಸ್ವಪ್ನಾ
ಇದನ್ನೂ ಓದಿ :ಲೈಂಗಿಕ ಕಾರ್ಯಕರ್ತೆಯಾದ ಶ್ರುತಿ ಹರಿಹರನ್ : ಏನಿದು ಕಹಾನಿ ಇಲ್ಲಿದೆ ಡಿಟೇಲ್ಸ್
Prisoner declared dead doctors wakes up shortly before post-mortem