HDFC Bank Interest Rate: ಎಚ್​ಡಿಎಫ್​ಸಿ ಬ್ಯಾಂಕ್ ಗ್ರಾಹಕರಿಗೆ ಒಳ್ಳೆ ಸುದ್ದಿ; ಉಳಿತಾಯ ಖಾತೆ ಬಡ್ಡಿ ದರ ಪರಿಷ್ಕರಣೆ

ಖಾಸಗಿ ವಲಯದಲ್ಲಿನ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವ ಎಚ್​ಡಿಎಫ್​ಸಿ ಬ್ಯಾಂಕ್ (HDFC Bank) ಗ್ರಾಹಕರ ಉಳಿತಾಯ ಖಾತೆಗಳ ಬಡ್ಡಿ ದರಗಳನ್ನು ಪರಿಷ್ಕರಣೆ ಮಾಡಿದೆ. 50 ಲಕ್ಷಕ್ಕಿಂತ ಕಡಿಮೆ ಬ್ಯಾಲೆನ್ಸ್ ಇರುವ ಉಳಿತಾಯ ಖಾತೆಗಳಿಗೆ ಶೇ 3ರ ವಾರ್ಷಿಕ ಬಡ್ಡಿದರವನ್ನು ವಿಧಿಸಲಾಗಿದೆ. ಇನ್ನು 50 ಲಕ್ಷ ರೂಪಾಯಿಯ ಮೇಲಿನ ಮತ್ತು 1000 ಕೋಟಿಗಿಂತ ಕಡಿಮೆ ಹಣಕ್ಕೆ ಶೇ 3.50ರಷ್ಟು ಬಡ್ಡಿದರವನ್ನು (HDFC Bank Interest Rate) ವಿಧಿಸಲಾಗಿದೆ. ಅಷ್ಟೇ ಅಲ್ಲದೇ 1000 ಕೋಟಿ ರೂಪಾಯಿ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ಉಳಿತಾಯ ಖಾತೆ ಬಾಕಿಗೆ ಶೇಕಡಾ 4.50ರ ಬಡ್ಡಿದರವನ್ನು ವಿಧಿಸಲಾಗಿದೆ.

ಈಕುರಿತು ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಈಕುರಿತು ಅಧಿಕೃತ ಮಾಹಿತಿಯನ್ನು ಪ್ರಕಟಿಸಿದೆ. ಫೆಬ್ರವರಿ 2, 2022ರಿಂದ ಅನ್ವಯ ಆಗುವಂತೆ ಈ ಪರಿಷ್ಕರಣೆ ದರಗಳು ಜಾರಿಗೆ ಬಂದಿವೆ ಎಂದು ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ.

ಪರಿಷ್ಕೃತ ಬಡ್ಡಿದರಗಳ ಸಂಪೂರ್ಣ ಮಾಹಿತಿ

ಉಳಿತಾಯ ಖಾತೆ ಬ್ಯಾಲೆನ್ಸ್ 50 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ- ಶೇ 3ರ ವಾರ್ಷಿಕ ಬಡ್ಡಿ ದರ
ಉಳಿತಾಯ ಖಾತೆ ಬ್ಯಾಲೆನ್ಸ್ 50 ಲಕ್ಷ ಮೇಲ್ಪಟ್ಟು 1000 ಕೋಟಿ ರೂಪಾಯಿಯೊಳಗೆ ಇದ್ದಲ್ಲಿ- ಶೇ 3.50ರ ವಾರ್ಷಿಕ ಬಡ್ಡಿ ದರಉಳಿತಾಯ ಖಾತೆ ಬ್ಯಾಲೆನ್ಸ್ 1000 ಕೋಟಿ ರೂಪಾಯಿ ಮೇಲ್ಪಟ್ಟು- ಶೇ 4ರ ವಾರ್ಷಿಕ ಬಡ್ಡಿ ದರ

ಎಚ್‌ಡಿಎಫ್‌ಸಿ ವೆಬ್‌ಸೈಟ್ ಒದಗಿಸಿರುವ ಮಾಹಿತಿಯ ಪ್ರಕಾರ ಬ್ಯಾಂಕ್‌ನಲ್ಲಿ ಇರುವ ಠೇವಣಿಯ ಅವಧಿ 7ರಿಂದ 14 ದಿನಗಳಿಗೆ ಮಾಮೂಲಿ ಬಡ್ಡಿ ದರ ವಾರ್ಷಿಕ ಶೇ 2.50 ಇದ್ದರೆ, ಹಿರಿಯ ನಾಗರಿಕರಿಗೆ ಶೇ 3ರ ಬಡ್ಡಿ ದರ ದೊರೆಯುತ್ತದೆ.

15ರಿಂದ 29 ದಿನದ ಅವಧಿಯಲ್ಲೂ ಸಹ ರೀತಿಯ ಇದೇ ಬಡ್ಡಿದರ ದೊರೆಯುತ್ತದೆ. ಠೇವಣಿದಾರರಿಗೆ ಬಹುತೇಕ ಬ್ಯಾಂಕ್​ಗಳ ಬಡ್ಡಿ ದರದ ಏರಿಕೆಯು ಉತ್ತಮ ಸುದ್ದಿಯಾಗಿದೆ. ಈಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಅತ್ಯುತ್ತಮ ಸುದ್ದಿಯೊಂದನ್ನು ನೀಡಿದೆ. ಇತ್ತೀಚಿಗೆ ಕುಸಿಯುತ್ತಿರುವ ಬ್ಯಾಂಕ್‌ ಬಡ್ಡಿದರಗಳ ಸುದ್ದಿ ಗ್ರಾಹಕರಲ್ಲಿ, ಅದರಲ್ಲೂ ಹಣವನ್ನು ಉಳಿತಾಯ ಮಾಡಬಯಸುವವರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಸಖತ್ ಒಳ್ಲೆಯ ಸುದ್ದಿಯನ್ನು ನೀಡಿದೆ.

ಇದನ್ನೂ ಓದಿ: SEBI App Saa₹thi: ಹೂಡಿಕೆಯ ಅರಿವು ಮೂಡಿಸಲು ಸೆಬಿಯಿಂದ Saa₹thi ಮೊಬೈಲ್ ಆ್ಯಪ್

(HDFC Bank Savings Account Interest Rate Revised check details here)

Comments are closed.