PUBG Addiction: ಆನ್ಲೈನ್ ಗೇಮ್ ಪಬ್ಜಿ ದಾಸನಾಗಿದ್ದ 14 ವರ್ಷದ ಬಾಲಕನೊಬ್ಬ ತನ್ನ ತಾಯಿ, ಇಬ್ಬರು ಸಹೋದರಿಯರು ಸೇರಿದಂತೆ ಸಂಪೂರ್ಣ ಕುಟುಂಬವನ್ನು ಗುಂಡುಹಾರಿಸಿ ಕೊಲೆಮಾಡಿದಂತಹ ಬೆಚ್ಚಿ ಬೀಳಿಸುವ ಘಟನೆಯು ಪಾಕಿಸ್ತಾನದಲ್ಲಿ ವರದಿಯಾಗಿದೆ.
ಕಳೆದ ವಾರ ಲಾಹೋರ್ನ ಕನ್ನಾ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ 45 ವರ್ಷದ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್ ತನ್ನ 22 ವರ್ಷದ ಪುತ್ರ ತೈಮೂರ್ ಹಾಗೂ 17 & 11 ವರ್ಷದ ಇಬ್ಬರು ಹೆಣ್ಣು ಮಕ್ಕಳ ಜೊತೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇಡೀ ಕುಟುಂಬದಲ್ಲಿ 14 ವರ್ಷದ ಬಾಲಕ ಮಾತ್ರ ಗಾಯಗೊಳ್ಳದೇ ಉಳಿದಿದ್ದ ಎನ್ನಲಾಗಿದೆ.ಹಾಗೂ ಈತನೇ ಕೊಲೆಗಾರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಬ್ ಜಿ ಗೇಮ್ ದಾಸನಾಗಿದ್ದ ಬಾಲಕ ಆಟದಿಂದ ಪ್ರಭಾವಕ್ಕೊಳಗಾಗಿ ತನ್ನ ತಾಯಿ ಹಾಗೂ ಒಡಹುಟ್ಟಿದವರನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈತ ದಿನದಲ್ಲಿ ಹೆಚ್ಚಿನ ಸಮಯವನ್ನು ಆನ್ಲೈನ್ ಆಟದಲ್ಲಿಯೇ ಕಳೆಯುತ್ತಿದ್ದ. ಹೀಗಾಗಿ ಈತನಿಗೆ ಮಾನಸಿಕವಾಗಿ ಅರೋಗ್ಯ ಕೂಡ ಸ್ಥಿಮಿತದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ನಹೀದ್ ಮುಬಾರಕ್ ವಿಚ್ಚೇದಿತ ಮಹಿಳೆಯಾಗಿದ್ದು ಓದಿನ ಕಡೆಗೆ ಗಮನ ಹರಿಸದೇ ಇಡೀ ದಿನ ಪಬ್ ಜಿ ಆಡುತ್ತಿದ್ದ ಪುತ್ರನಿಗೆ ಅನೇಕ ಬಾರಿ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಈ ಕೃತ್ಯ ನಡೆಯುವ ದಿನದಂದೂ ಪಬ್ ಜಿ ಆಡುತ್ತಿದ್ದ ಮಗನಿಗೆ ನಹೀದ್ ಮುಬಾರಕ್ ಗದರಿದ್ದರು. ಇದಕ್ಕೆ ಕೋಪಗೊಂಡ ಬಾಲಕ ಕಬೋರ್ಡ್ನಲ್ಲಿದ್ದ ತಾಯಿಯ ಪಿಸ್ತೂಲ್ನ್ನು ತೆಗೆದು ತನ್ನ ತಾಯಿ ಹಾಗೂ ಮೂವರು ಒಡಹುಟ್ಟಿದವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಮಲಗಿದ್ದ ವೇಳೆಯಲ್ಲಿ ನಾಲ್ವರನ್ನು ಕೊಲೆ ಮಾಡಿದ್ದ ಬಾಲಕ ಬೆಳಗ್ಗೆ ಅಕ್ಕಪಕ್ಕದ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅಲ್ಲದೇ ನಾನು ಮನೆಯ ಮಹಡಿಯಲ್ಲಿದ್ದೆ. ಈ ಕೃತ್ಯ ಎಸಗಿದವರು ಯಾರೆಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದ . ನಹೀದ್ ತಮ್ಮ ಕುಟುಂಬದ ಭದ್ರತೆಗಾಗಿ ಪರವಾನಿಗಿ ಹೊಂದಿದ ಪಿಸ್ತೂಲ್ ಖರೀದಿಸಿದ್ದರು. ಆದರೆ ಈ ಕೃತ್ಯದ ಬಳಿಕ ಬಾಲಕ ಪಿಸ್ತೂಲ್ನ್ನು ಚರಂಡಿಗೆ ಎಸದಿದ್ದ ಎನ್ನಲಾಗಿದೆ. ಇಲ್ಲಿಯವರೆಗೂ ಆ ಪಿಸ್ತೂಲ್ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
PUBG Addiction: 14-year-old Boy Shoots Entire Family Dead
ಇದನ್ನು ಓದಿ : no night curfew : ಜನವರಿ 31ರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ರದ್ದು : ಶಾಲೆಗಳು ಪುನಾರಂಭ