Malavika mohanan : ಮಾಲ್ಡೀವ್ಸ್ ನಲ್ಲಿ ಮತ್ತೇರಿಸಿದ ಮಾಳವಿಕಾ : ಬೋಲ್ಡ್ ಬಿಕನಿ‌ ವಿಡಿಯೋ ವೈರಲ್

ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಚಿತ್ರರಂಗ ಯಾವುದೇ ಆದರೂ ನಟ – ನಟಿಯರ ಫೆವರಿಟ್ ವೆಕೇಶನ್ ಪ್ಲೇಸ್ ಒಂದೇ ಅದು ಮಾಲ್ಡೀವ್ಸ್. ಯಶ್ ರಾಧಿಕಾರಿಂದ ಆರಂಭಿಸಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತನಕ, ಬಾಲಿವುಡ್ ನ ದಿಶಾ ಪಟಾಣಿಯಿಂದ ಆರಂಭಿಸಿ ಕತ್ರಿನಾ ಕೈಫ್ ತನಕ ಎಲ್ಲರೂ ಮಾಲ್ಡೀವ್ಸ್ ಸೌಂದರ್ಯ ಕ್ಕೆ ಮರುಳಾದವರೇ. ಇದೀಗ ಈ ಸಾಲಿಗೆ‌ ಮಲಯಾಳಂ ನಟಿ ಮಾಳವಿಕಾ ಮೋಹನನ್ (Malavika mohanan) ಹೊಸ ಸೇರ್ಪಡೆ.

ಸದಾ ತಮ್ಮ ಹಾಟ್ ಪೋಟೋ, ವಿಡಿಯೋಗಳ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಮಾಳವಿಕಾ ಈಗ ಮಾಲ್ಡೀವ್ಸ್ ನ ನೀಲಿ ಆಕಾಶದಲ್ಲಿ ಬಿಕನಿ ಪೋಸ್ ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್ ನಿಂದ ಬ್ರೇಕ್ ಪಡೆದಿರುವ ಮಾಳವಿಕಾ ವೆಕೇಶನ್ ಗಾಗಿ ಮಾಲ್ಡೀವ್ಸ್ ಗೆ ಹಾರಿದ್ದಾರಂತೆ. ಶೂಟಿಂಗ್ ಸ್ಟ್ರೆಸ್ ಕಳೆದು ಕೊಳ್ಳೋದಿಕ್ಕೆ ನಂಬರ್ ಒನ್ ಪ್ಲೇಸ್ ಎನ್ನಿಸಿರೋ ಮಾಲ್ಡೀವ್ಸ್ ನಲ್ಲಿ ಮಾಳವಿಕಾ ಫುಲ್ ಎಂಜಾಯ್ ಮಾಡ್ತಿದ್ದಾರೆ.

ನೀಲಿ ನೀಲಿ ಆಕಾಶ, ಸ್ಪಟಿಕದಂತಹ ನೀರಿನ ನಡುವೆ ಬಿಕನಿ ತೊಟ್ಟು ಮಾಳವಿಕಾ ಮತ್ಸ್ಯ ಕನ್ಯೆಯಂತೆ ಮಿಂಚಿದ್ದಾರೆ. ಅದರಲ್ಲೂ ಬ್ಯಾಕ್ ಲೆಸ್ ಟಾಪ್ ಹಾಗೂ ಡೆನಿಮ್ ಕ್ರಾಪ್ ಬಾಟಮ್ ನಲ್ಲಿ ಮಾಳವಿಕಾ ಇನ್ ಸ್ಟಾಗ್ರಾಂನಲ್ಲಿ ನಲ್ಲಿ ಹಂಚಿಕೊಂಡಿರೋ ವಿಡಿಯೋಗೆ ಅಭಿಮಾನಿಗಳು ಮರುಳಾಗಿದ್ದಾರೆ. ಇನ್ನೊಂದು ಪೋಟೋದಲ್ಲಿ ಮಾಳವಿಕಾ ಯೆಲ್ಲೋ ಬಿಕನಿಯಲ್ಲಿ ಯೆಲ್ಲೋ ಟೊಪ್ಪಿ ತೊಟ್ಟು ನೀರಿನಲ್ಲಿ ಕಾಲಾಡಿಸುತ್ತಾ ಪೋಟೋ ತೆಗೆಸಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನ ನಾನು ಮತ್ತು ವರಲಕ್ಷ್ಮೀ ಸಿನಿಮಾದಲ್ಲಿ ನಟಿಸಿದ್ದ ಮಾಳವಿಕಾ, ಪ್ರಸ್ತುತ ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಮಾಳವಿಕಾ ನಟನೆಯ ಮಾರನ್ ಮತ್ತು ಯುದ್ಧ್ರ ಸಿನಿಮಾ ರಿಲೀಸ್ ಸಿದ್ಧತೆ ನಡೆದಿದೆ. ಬಹುಭಾಷಾ ನಟಿಯಾಗಿರೋದರ ಜೊತೆಗೆ ಸೋಷಿಯಲ್‌ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿದ್ದಾರೆ ಮಾಳವಿಕಾ.

ಸೋಷಿಯಲ್ ಮೀಡಿಯಾದಲ್ಲಿ ಮಾಳವಿಕಾ ಹಾಟ್ ಪೋಟೋಗಳು ಸಾಕಷ್ಟು ಭಾರಿ ಸುದ್ದಿಯಾಗಿದೆ. ಸದ್ಯ ಮಾಲ್ಡೀವ್ಸ್ ನಲ್ಲಿ ಮಾಳವಿಕಾ ಮನಸ್ಸು ರಿಲ್ಯಾಕ್ಸ್ ಮಾಡ್ತಿದ್ದು ಹೊಸ ಹೊಸ ವಿಡಿಯೋ ಜೊತೆಗೆ ಅಭಿಮಾನಿಗಳಿಗೆ ತಮ್ಮ ಟ್ರಿಪ್ ನ ಅಪ್ಡೇಟ್ ಮಾಹಿತಿ ನೀಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ನ್ಯೂಲೀ‌ ಮ್ಯಾರೀಡ್ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ವಿಕ್ಕಿ ಕೌಶಲ್ ಜೊತೆ ಮಾಲ್ಡೀವ್ಸ್ ನಲ್ಲಿ ಹನಿಮೂನ್ ಸೆಲಿಬ್ರೇಟ್ ಮಾಡಿದ್ದಾರೆ.

ಇದನ್ನೂ ಓದಿ : ನೀನಾಸಂ ಸತೀಶ್ – ರಚಿತಾ ರಾಮ್ ಹೊಸ ದಾಖಲೆ : 100 ಮಿಲಿಯನ್ ವೀವ್ಸ್ ಪಡೆದ ಏನಮ್ಮಿ ಯಾಕಮ್ಮಿ ಹಾಡು

ಇದನ್ನೂ ಓದಿ :  ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣದ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ಬಂಧನ

( Malavika mohanan bikini photo shoots in Maldives)

Comments are closed.