ಬ್ರಿಟನ್ : rishi sunak tops : ಸಾಕಷ್ಟು ಹಗರಣಗಳನ್ನು ಎದುರಿಸುತ್ತಿದ್ದ ಬೋರಿಸ್ ಜಾನ್ಸನ್ ಅನಿವಾರ್ಯವಾಗಿ ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಈ ಅತ್ಯುನ್ನತ ಹುದ್ದೆಯನ್ನು ಯಾರು ಅಲಂಕರಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ. ಬ್ರಿಟನ್ನಲ್ಲಿ ನೂತನ ಪ್ರಧಾನ ಮಂತ್ರಿ ಆಯ್ಕೆಗೆ ಕಸರತ್ತುಗಳು ನಡೆಯುತ್ತಿದೆ. ಸಂತೋಷಕರ ವಿಚಾರ ಅಂದರೆ ಬ್ರಿಟನ್ ಪ್ರಧಾನಿ ರೇಸ್ನಲ್ಲಿ ಕೇವಲ ನಾಲ್ಕುಮಂದಿ ಮಾತ್ರ ಉಳಿದುಕೊಂಡಿದ್ದು ಇವರಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಮೊದಲ ಸ್ಥಾನದಲ್ಲಿದ್ದಾರೆ.
ಬ್ರಿಟಿಷ್ ಇಂಡಿಯನ್ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಮೂರನೇ ಸುತ್ತಿನ ಮತದಾನದ ಸಂದರ್ಭದಲ್ಲಿ ಒಟ್ಟು 155 ಮತಗಳನ್ನು ಗಳಿಸುವಲ್ಲಿ ಯಶಸ್ಚಿಯಾಗಿದ್ದಾರೆ. ರಿಷಿ ಸುನಕ್ ಬೋರಿಸ್ ಜಾನ್ಸನ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನಾ ದಿನ ರಿಷಿ ಸುನಕ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇನ್ನು ಪ್ರಧಾನಿ ಸ್ಥಾನದ ಆಕಾಂಕ್ಷಿಯಾಗಿರುವ ಬ್ರಿಟನ್ನ ಮಾಜಿ ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ 82 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 71 ಮತಗಳು ಹಾಗೂ ಮಾಜಿ ಸಮಾನತೆ ಸಚಿವ ಕೆಮಿ ಬಡೆನೋಚ್ 58 ಮತಗಳನ್ನು ಪಡೆಯುವ ಮೂಲಕ ನಂತರದ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಈ ಪ್ರಧಾನಿ ರೇಸ್ನಲ್ಲಿದ್ದ ಟಾಮ್ ತುಗೆಂಧತ್ ಕಡಿಮೆ ಮತಗಳನ್ನು ಪಡೆದು ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ. ಮಾಜಿ ಚಾನ್ಸಲರ್ ರಿಷಿ ಸುನಕ್ ಮಾತ್ರ ಸೋಮವಾರಂದು ಸಂಸತ್ತಿನ ಕನ್ಸರ್ವೇಟಿವ್ ಪಕ್ಷದ ಸದಸ್ಯರ ನಡುವಿನ ಮೂರನೇ ಸುತ್ತಿನ ಮತದಾನದಲ್ಲಿ ಟಾಪರ್ ಎನಿಸಿದ್ದಾರೆ.
ಇದನ್ನು ಓದಿ : Ben stokes: ಏಕದಿನ ಕ್ರಿಕೆಟ್ಗೆ ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ದಿಢೀರ್ ವಿದಾಯ
ಇದನ್ನೂ ಓದಿ : ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲಿಸಿಕೊಟ್ಟ ‘’ಪಾಂಡು’’ಗೆ ವಿಶೇಷ ಅಭಿನಂದನೆ ತಿಳಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಇದನ್ನೂ ಓದಿ : BJP MLAs will fall to 60 : ಹಗರಣ, ವಿವಾದದ ಸೈಡ್ ಎಫೆಕ್ಟ್ : ಮುಂದಿನ ಚುನಾವಣೆಯಲ್ಲಿ 60 ಕ್ಕೆ ಕುಸಿಯಲಿದೆ ಬಿಜೆಪಿ ಶಾಸಕರ ಸಂಖ್ಯೆ
rishi sunak tops new uk prime minister vote as only 4 remain in race