Covid -19 :ರೆಫ್ರಿಜರೇಟೆಡ್, ಫ್ರೋಜನ್ ಮಾಂಸದಲ್ಲಿ ಇರುತ್ತೆ ಕೋವಿಡ್ ವೈರಸ್; 30 ದಿನಗಳವರೆಗೆ ಬದುಕಬಹುದು ಅನ್ನುತ್ತದೆ ಅಧ್ಯಯನ

ಕೋವಿಡ್ -19 ಗೆ(Covid -19) ಕಾರಣವಾಗುವ ಸಾರ್ಸ್-ಕೋವ್-೨ ವೈರಸ್, ರೆಫ್ರಿಜರೇಟರ್ ಅಥವಾ ಫ್ರೀಜರ್‌ನಲ್ಲಿರುವ ಮಾಂಸ ಮತ್ತು ಮೀನು ಉತ್ಪನ್ನಗಳ ಮೇಲೆ 30 ದಿನಗಳವರೆಗೆ ಬದುಕಬಹುದು ಎಂದು ಅಧ್ಯಯನವೊಂದು ಸೂಚಿಸುತ್ತದೆ.ಅಪ್ಲೈಡ್ ಮತ್ತು ಎನ್ವಿರಾನ್ಮೆಂಟಲ್ ಮೈಕ್ರೋಬಯಾಲಜಿ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯು ಕೋಳಿ, ಗೋಮಾಂಸ, ಹಂದಿಮಾಂಸ ಮತ್ತು ಸಾಲ್ಮನ್ ನಲ್ಲಿ ಸಾರ್ಸ್-ಕೋವ್-೨(SARS-CoV-2) ವೈರಸ್‌ಗಳನ್ನು ಕಂಡುಹಿಡಿದಿದ್ದಾರೆ . ಸಂಶೋಧಕರು ಮಾಂಸ ಮತ್ತು ಮೀನು ಉತ್ಪನ್ನಗಳನ್ನು ರೆಫ್ರಿಜೆರೇಟನಲ್ಲಿ (4 ಡಿಗ್ರಿ ಸೆಲ್ಸಿಯಸ್) ಮತ್ತು ಫ್ರೀಜರ್ ತಾಪಮಾನದಲ್ಲಿ (ಮೈನಸ್ 20 ಡಿಗ್ರಿ ಸಿ) ಸಂಗ್ರಹಿಸಿದ್ದರು.

ಅಧ್ಯಯನದಲ್ಲಿ, ಸಂಶೋಧಕರು ಲಿಪಿಡ್ ಹೊದಿಕೆಯೊಂದಿಗೆ ಒಂದು ಆರ್ ಏನ್ ಎ ವೈರಸ್ ಮತ್ತು ಎರಡು ಪ್ರಾಣಿಗಳ ಕರೋನ ವೈರಸ್ಗಳು, ಮ್ಯೂರಿನ್ ಹೆಪಟೈಟಿಸ್ ವೈರಸ್ ಮತ್ತು ಟ್ರಾನ್ಸ್ಮಿಸಿಬಲ್ ಗ್ಯಾಸ್ಟ್ರೋಎಂಟರೈಟಿಸ್ ವೈರಸ್ಗಳನ್ನು ಬದಲಿಯಾಗಿ ಬಳಸಿದ್ದಾರೆ.”ಆಹಾರ ಮತ್ತು ಆಹಾರ ಸಂಸ್ಕರಣಾ ಮೇಲ್ಮೈಗಳು, ಕೆಲಸಗಾರರ ಕೈಗಳು ಮತ್ತು ಚಾಕುಗಳಂತಹ ಆಹಾರ ಸಂಸ್ಕರಣಾ ಪಾತ್ರೆಗಳ ಮಾಲಿನ್ಯವನ್ನು ತಡೆಗಟ್ಟಲು ನಿರಂತರ ಪ್ರಯತ್ನಗಳು ಅಗತ್ಯವಿದೆ” ಎಂದು ಸಂಶೋಧಕರು ಗಮನಿಸಿದರು.”ಪ್ಯಾಕೇಜಿಂಗ್‌ಗೆ ಮೊದಲು ಈ ಆಹಾರಗಳ ಸೋಂಕು ರಹಿತವಾಗಿರಬೇಕು ” ಎಂದು ಅವರು ಹೇಳಿದರು.

“ನೀವು ಮಾಂಸವನ್ನು 30 ದಿನಗಳವರೆಗೆ ಫ್ರಿಜ್‌ನಲ್ಲಿ ಸಂಗ್ರಹಿಸದಿದ್ದರೂ, ನೀವು ಅದನ್ನು ದೀರ್ಘಕಾಲದವರೆಗೆ ಫ್ರೀಜರ್‌ನಲ್ಲಿ ಸಂಗ್ರಹಿಸಬಹುದು ಮತ್ತು ಇದು ಕೋವಿಡ್ 19 ಗೆ ಕಾರಣವಾಗುವ ಸಾರ್ಸ್-ಕೋವ್-೨ ವೈರಸ್‌ಗಳನ್ನು ಹೊಂದಿದ್ದರೆ ಅದು ಅಷ್ಟೂ ದಿನಗಳ ಕಾಲ ಬದುಕಬಹುದು ” ಎಂದು ಅಧ್ಯಯನದ ಪ್ರಮುಖ ಲೇಖಕಿ ಎಮಿಲಿ ಎಸ್. ಬೈಲಿ, ಯುಎಸ್‌ನ ಕ್ಯಾಂಪ್‌ಬೆಲ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಹೇಳಿದ್ದಾರೆ.
ಆಗ್ನೇಯ ಏಷ್ಯಾದ ಸಮುದಾಯದಲ್ಲಿ ಕೋವಿಡ್ -19 ಏಕಾಏಕಿ ಸಂಭವಿಸುತ್ತಿದೆ ಎಂದು ತಿಳಿದ ನಂತರ ಸಂಶೋಧಕರು ಅಧ್ಯಯನವನ್ನು ಕೈಗೊಂಡ ಕಾರಣದಿಂದಾಗಿ ಈ ವಿಷಯವು ಬೆಳಕಿಗೆ ಬಂದಿದೆ. ಆಗ್ನೇಯ ಏಷ್ಯಾದ ಕೆಲವು ಸಮುದಾಯಗಳ ವರದಿಗಳು ಸಾರ್ಸ್-ಕೋವ್-೨ ಚಲಾವಣೆಯಲ್ಲಿರುವ ಪ್ರದೇಶಗಳಲ್ಲಿ ಉತ್ಪಾದಿಸಲಾದ ಪ್ಯಾಕ್ ಮಾಡಲಾದ ಮಾಂಸ ಉತ್ಪನ್ನಗಳು ವೈರಸ್‌ನ ಮೂಲವಾಗಿರಬಹುದು ಎಂದು ಸೂಚಿಸಿದೆ.ಈ ಪರಿಸರದಲ್ಲಿ ಇದೇ ರೀತಿಯ ವೈರಸ್‌ಗಳು ಬದುಕುಳಿಯಬಹುದೇ ಅಥವಾ ಇಲ್ಲವೇ ಎಂಬುದನ್ನು ತನಿಖೆ ಮಾಡುವುದು ನಮ್ಮ ಗುರಿಯಾಗಿದೆ ” ಎಂದು ಬೈಲಿ ಹೇಳಿದರು.ಸಾರ್ಸ್-ಕೋವ್-೨ ಕರುಳಿನಲ್ಲಿ ಮತ್ತು ಶ್ವಾಸನಾಳದಲ್ಲಿ ಪುನಃ ಹುಟ್ಟಬಹುದು ಎಂದು ಈ ಸಂಶೋಧನೆ ಇಂದ ತಿಳಿದು ಬಂದಿದ್ದು ,ಇದು ಕೋವಿಡ್ ಹರಡಲು ದೊಡ್ಡ ಕಾರಣವಾಗಬಹುದು ಎಂದು ಬೈಲಿ ಅವರು ಹೇಳಿದರು.

ಇದನ್ನೂ ಓದಿ :Men’s Fashion: ಪುರುಷರಲ್ಲೂ ಇದೆ ಫ್ಯಾಷನ್ ಟ್ರೆಂಡ್! ಈಗಿನ ಹೊಸ ಟ್ರೆಂಡ್ ಏನು ಗೊತ್ತಾ

(Covid 19 may live 30 days in refrigerator)

Comments are closed.