ವಾಷಿಂಗ್ಟನ್ : (Road Accident , 3 died ) ಅಮೇರಿಕಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಯುನೈಟೆಡ್ ಸ್ಟೇಟ್ಸ್ ನ ವೆಸ್ಟರ್ನ್ ಮ್ಯಾಸಚೂಸೆಟ್ಸ್ ನಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರೊಂದಕ್ಕೆ ಬೇರೊಂದು ವಾಹನ ಢಿಕ್ಕಿ ಹೊಡೆದು ಈ ದುರಂತ (Road Accident , 3 died )ಸಂಭವಿಸಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಪ್ರೇಮ್ ಕುಮಾರ ರೆಡ್ಡಿ ಗೋಡಾ (27 ವರ್ಷ), ಪಾವನಿ ಗುಲ್ಲಪಲ್ಲಿ (22 ವರ್ಷ),ಹಾಗೂ ಸಾಯಿ ನರಸಿಂಹ ಪಟಂಶೆಟ್ಟಿ (22 ವರ್ಷ) ಎಂಬವರೇ ಮೃತ ವಿದ್ಯಾರ್ಥಿಗಳು. ಬೆಳಗಿನ ಜಾವದಲ್ಲಿ ವಿದ್ಯಾರ್ಥಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆಯಲ್ಲಿ ವಾಹನವೊಂದು ಮುಖಾಮುಖಿಯಾಗಿ ಕಾರಿಗೆ ಢಿಕ್ಕಿಯಾಗಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿ(Road Accident , 3 died)ದ್ದಾರೆ. ಅಲ್ಲದೇ ಎರಡು ವಾಹನಗಳಲ್ಲಿದ್ದ ಐದು ವಿದ್ಯಾರ್ಥಿಗಳು ಹಾಗೂ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ಮ್ಯಾಸಚುಸೆಟ್ಸ್ ಪೋಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : Surathkal toll Protest : ಸುರತ್ಕಲ್ ಟೋಲ್ ಸುತ್ತ ನಿಷೇಧಾಜ್ಞೆ ಜಾರಿ : ನಾಳೆಯಿಂದ ಅನಿರ್ಧಿಷ್ಟಾವಧಿ ಧರಣಿ
ಇದನ್ನೂ ಓದಿ : Horoscope Today : ಹೇಗಿದೆ ಶುಕ್ರವಾರದ ದಿನಭವಿಷ್ಯ (28.10.2022)
ಮೃತಪಟ್ಟಿರುವ ಇಬ್ಬರು ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇನ್ನೋರ್ವ ವಿದ್ಯಾರ್ಥಿ ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮನೋಜ್ ರೆಡ್ಡಿ ದೊಂಡ , ಶ್ರೀಧರ್ ರೆಡ್ಡಿ ಚಿಂತಕುಟಾ , ವಿಜಿತ್ ರೆಡ್ಡಿ ಗುಮ್ಮಲ ಮತ್ತು ಹಿಮಾ ಐಶ್ವರ್ಯ ರೆಡ್ಡಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬರ್ಕ್ ಶೈರ್ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ . ಇನ್ನೂ ವಾಹನ ಚಾಲಕ 46 ವರ್ಷ ಪ್ರಾಯದ ಅರ್ಮಾಂಡೋ ಬೌಟಿಸ್ಟಾ ಕ್ರೂಜರ್ ಅವರನ್ನು ಚಿಕಿತ್ಸೆಗಾಗಿ ಫೇರ್ ವ್ಯೂ ವೈದ್ಯಕೀಯ ಕೇಂದ್ರಕ್ಕೆ ಸಾಗಿಸಲಾಗಿದೆ.
ಇದನ್ನೂ ಓದಿ : Rajnath Singh: ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್: ಪಿಒಕೆಯನ್ನು ಮರಳಿ ವಶಕ್ಕೆ ಪಡೆಯುವ ಸುಳಿವು ನೀಡಿದ್ರಾ ರಾಜನಾಥ್ ಸಿಂಗ್
ಇದನ್ನೂ ಓದಿ : Bird flu outbreak confirmed : ಕೇರಳದ ವಿವಿಧೆಡೆ ಹಕ್ಕಿ ಜ್ವರದ ಪ್ರಕರಣಗಳು ದೃಢ : 20 ಸಾವಿರಕ್ಕೂ ಅಧಿಕ ಪಕ್ಷಿಗಳ ಮಾರಣಹೋಮ
ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಕಾರುಗಳ ಮುಖಾಮುಖಿ ಢಿಕ್ಕಿಯಿಂದಾಗಿ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಈಗಾಗಲೇ ಅಪಘಾತದ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಲ್ಲದೇ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.
(Road Accident, 3 died) Three Indian students died in a terrible road accident in America. This tragedy has occurred in Western Massachusetts of the United States when another vehicle collided with a car in which students were traveling. The police have registered a case and are investigating.