Surathkal toll Protest : ಸುರತ್ಕಲ್ ಟೋಲ್ ಸುತ್ತ ನಿಷೇಧಾಜ್ಞೆ ಜಾರಿ : ನಾಳೆಯಿಂದ ಅನಿರ್ಧಿಷ್ಟಾವಧಿ ಧರಣಿ

ಮಂಗಳೂರು : Surathkal toll Protest : ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಹಾಗೂ ಸಮಾನ ಮನಸ್ಕ ಸಂಘಟನೆಯ ವತಿಯಿಂದ ಅಕ್ಟೋಬರ್ 29 ರಿಂದ ಟೋಲ್ ತೆರವಿಗಾಗಿ ಅನಿರ್ಧಿಷ್ಟಾವಧಿಯ ಧರಣಿಗೆ ಕರೆ ಕೊಟ್ಟಿವೆ. ಇದರ ಬೆನ್ನಲ್ಲೇ ಟೋಲ್ ಸುತ್ತಮುತ್ತಿನ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಯನ್ನು ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಇಂದು ಬೆಳಗ್ಗೆ ೬ ಗಂಟೆಯಿಂದ ನವೆಂಬರ್ ೩ರ ಸಂಜೆ ೬ ಗಂಟೆಯ ವರೆಗೆ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ನಿಷೇಧಾಜ್ಞೆ ಜಾರಿಯಲ್ಲಿರುವ ಸ್ಥಳದಲ್ಲಿ ಮೆರವಣಿಗೆ, ಜಾಥಾ ನಡೆಸಲು ಅವಕಾಶವಿಲ್ಲ. ಗುಂಪುಗೂಡುವುದಕ್ಕೆ ನಿಷೇಧ ಹೇರಲಾಗಿದೆ. ಬಿತ್ತಿಪತ್ರ, ಘೋಷಣೆ ಕೂಗುವುದಕ್ಕೂ ಅವಕಾಶವಿಲ್ಲ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ಸಾರ್ವಜನಿಕರ ಸುರಕ್ಷಿತೆಯ ದೃಷ್ಟಿಯಿಂದ ಹಾಗೂ ಟೋಲ್ ಗೆ ರಕ್ಷಣೆ ನೀಡುವ ದೃಷ್ಟಿಯಿಂದ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತರು ಮಾಹಿತಿ ನೀಡಿದ್ದಾರೆ.

ಕಳೆದ ಒಂದು ವಾರದ ಹಿಂದೆಯಷ್ಟೇ ಟೋಲ್ ತೆರವು ಮಾಡುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಆದರೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಕಾಲಾವಕಾಶ ಕೇಳಿದ್ರು. ಆದ್ರೆ ಭರವಸೆ ಈಡೇರಿಕೆಯಾಗದ ಹಿನ್ನೆಲೆಯಲ್ಲಿ ಮತ್ತೆ ಹೋರಾಟ ಸಮಿತಿ ಇದೀಗ ಅನಿರ್ಧಿಷ್ಟಾವಧಿ ಧರಣಿಗೆ ಮುಂದಾಗಿದೆ. ಧರಣಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೋರಾಟ ಸಮಿತಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಟೋಲ್ ತೆರವಿಗೆ ಇನ್ನೂ ಹತ್ತು ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ ಸಮಿತಿ ಈ ನಿರ್ಧಾರವನ್ನು ವಿರೋಧಿಸಿ, ಅನಿರ್ಧಿಷ್ಟಾವಧಿ ಹೋರಾಟಕ್ಕೆ ಸಜ್ಜಾಗಿದೆ.

ಇನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರು ನವೆಂಬರ್ 7ರ ಒಳಗಾಗಿ ಟೋಲ್ ತೆರವು ಮಾಡುವುದಾಗಿ ಭರವಸೆಯನ್ನು ನೀಡಿದ್ದರು. ಹೀಗಾಗಿ ಸುಮಾರು ಹತ್ತು ದಿನಗಳ ಮೊದಲೇ ಹೋರಾಟಗಾರರು ಧರಣಿ ನಡೆಸಲು ಮುಂದಾಗಿದ್ದಾರೆ. ನವೆಂಬರ್ 7ಕ್ಕೆ ಟೋಲ್ ಸಂಗ್ರಹ ಸ್ಥಗಿತಗೊಳಿಸುವುದು. ಅಲ್ಲದೇ ಟೋಲ್ ಗೇಟ್ ತೆರವು ಆಗುವವರೆಗೂ ಹೋರಾಟವನ್ನು ಹಗಲು ರಾತ್ರಿ ಮುಂದುವರಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ :Bird flu outbreak confirmed : ಕೇರಳದ ವಿವಿಧೆಡೆ ಹಕ್ಕಿ ಜ್ವರದ ಪ್ರಕರಣಗಳು ದೃಢ : 20 ಸಾವಿರಕ್ಕೂ ಅಧಿಕ ಪಕ್ಷಿಗಳ ಮಾರಣಹೋಮ

ಇದನ್ನೂ ಓದಿ :KR Puram inspector death : ಕೆ.ಆರ್.ಪುರಂ ಇನ್ಸ್ ಪೆಕ್ಟರ್ ನಂದೀಶ್ ಹೃದಯಾಘಾತದಿಂದ ಸಾವು

ಇದನ್ನೂ ಓದಿ :Karnataka Ratna: ಮರೆಯಾದ ಮಾಣಿಕ್ಯಗೆ ‘ಕರ್ನಾಟಕ ರತ್ನ’ ಪ್ರಶಸ್ತಿ: ಸರ್ಕಾರದಿಂದ ಈ ಸ್ಟಾರ್ ನಟರಿಗೆ ಆಹ್ವಾನ

Prohibitory orders imposed around Surathkal toll, Tomorrow Protest Demand to clear The Toll Gate

Comments are closed.