Russia vs Ukraine : ಉಕ್ರೇನ್‌ನ 2 ಪ್ರತ್ಯೇಕವಾದಿ ಪ್ರದೇಶಗಳಿಗೆ ಬೆಂಬಲ ನೀಡಿದ ರಷ್ಯಾ; ಅಷ್ಟಕ್ಕೂ ಅಲ್ಲಿ ಆಗುತ್ತಿರುವುದೇನು?

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪೂರ್ವ ಉಕ್ರೇನ್‌ನಲ್ಲಿ (Russia vs Ukraine) ಎರಡು ಪ್ರದೇಶಗಳನ್ನು ಉಕ್ರೇನ್‌ನಿಂದ ಬೇರ್ಪಡಿಸಿ ಸ್ವತಂತ್ರವೆಂದು ಗುರುತಿಸುವ ಸುಗ್ರೀವಾಜ್ಞೆಗೆ ಸಹಿ ಹಾಕಲು ಯೋಜಿಸಿದ್ದಾಗಿ ಫ್ರೆಂಚ್ ಮತ್ತು ಜರ್ಮನ್ ನಾಯಕರಿಗೆ ತಿಳಿಸಿದ್ದಾರೆ. ಡೊನೆಟ್ಸ್ಕ್, ಲುಹಾನ್ಸ್ಕ್ ಎಂಬ ಎರಡು ಪ್ರದೇಶಗಳನ್ನು 2014 ದಂಗೆಯ ನಂತರ ಉಕ್ರೇನ್ ಕಡೆಗಣಿಸಿದೆ ಎಂಬ ಆರೋಪ ಮಾಡಿರುವ ಪುಟಿನ್ (Vladimir Putin)ಈ ಪ್ರದೇಶಗಳನ್ನು ಸ್ವತಂತ್ರವೆಂದು ಗುರುತಿಸಿರುವುದಾಗಿ ಘೋಷಿಸಿದೆ. ಈ ಮಧ್ಯೆ ರಷ್ಯಾ ತನ್ನ ನೆರೆಯ ಗಡಿಗಳ ಬಳಿ ಒಟ್ಟುಗೂಡಿಸಿರುವ 190,000 ಸೈನಿಕರ ಬಲದೊಂದಿಗೆ ಉಕ್ರೇನ್ ಮೇಲೆ ಆಕ್ರಮಣ ಮಾಡಲು ಸಿದ್ಧವಾಗಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದ್ದು ಭಾರತ ಸೇರಿ ಹಲವು ದೇಶಗಳ ಉಕ್ರೇನ್‌ನಲ್ಲಿ ವಾಸವಿರುವ ನಾಗರಿಕರಿಗೆ ಅಲ್ಲಿಂದ ಸ್ವದೇಶಕ್ಕೆ ಹಿಂತಿರುಗುವಂತೆ ಈಗಾಗಲೇ ಸೂಚನೆ ನೀಡಿದೆ.

ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳನ್ನು ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳು ಒಟ್ಟಾರೆಯಾಗಿ ಡಾನ್ಬಾಸ್ ಎಂದು ಕರೆಯುತ್ತಾರೆ. ಈ ಪ್ರದೇಶಗಳು 2014 ರಲ್ಲಿ ಉಕ್ರೇನಿಯನ್ ಸರ್ಕಾರದ ನಿಯಂತ್ರಣದಿಂದ ಬೇರ್ಪಟ್ಟ ತಮ್ಮನ್ನು ತಾವು ಸ್ವತಂತ್ರವೆಂದೂ “ಜನರ ಗಣರಾಜ್ಯಗಳು” ಎಂದು ಘೋಷಿಸಿಕೊಂಡರು. ಆದರೆ ಈವರೆಗೂ ಅಧಿಕೃತವಾಗಿ ಈ ಪ್ರದೇಶಗಳ ಸ್ವತಂತ್ರವನ್ನು ಇದುವರೆಗೂ ಗುರುತಿಸಲಾಗಿಲ್ಲ. ಅಂದಿನಿಂದ, ಉಕ್ರೇನ್ ಈ ಹೊರಾಟದಲ್ಲಿ ಸುಮಾರು 15,000 ಜನರು ಹೋರಾಟದಲ್ಲಿ ಕೊಲ್ಲಲ್ಪಟ್ಟರು ಎಂದು ಹೇಳುತ್ತದೆ. ಈ ಪ್ರತ್ಯೇಕತೆಯ ಹೊರಾಟಕ್ಕೆ ತನ್ನ ಬೆಂಬಲವಿಲ್ಲ ಎಂದೇ ರಷ್ಯಾ ಹೇಳುತ್ತದಾದರೂ ರಹಸ್ಯ ಮಿಲಿಟರಿ ಬೆಂಬಲ, ಹಣಕಾಸಿನ ನೆರವು, COVID-19 ಲಸಿಕೆಗಳ ಸರಬರಾಜು ಮತ್ತು ನಿವಾಸಿಗಳಿಗೆ ಕನಿಷ್ಠ 800,000 ರಷ್ಯಾದ ಪಾಸ್‌ಪೋರ್ಟ್‌ಗಳ ವಿತರಣೆ ಸೇರಿದಂತೆ ಹಲವಾರು ರೀತಿಯಲ್ಲಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಿದೆ.

ಈ ಮಧ್ಯೆ, ರಷ್ಯಾ- ಉಕ್ರೇನ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇಂದು ತುರ್ತು ಸಭೆ ನಡೆಸಲಿದೆ. ಇಂಥ ಸಭೆ ನಡೆಸುವಂತೆ ಉಕ್ರೇನ್‌, ಅಮೆರಿಕ, ಮೆಕ್ಸಿಕೊ ಹಾಗೂ ಯುರೋಪ್‌ನ ಐದು ರಾಷ್ಟ್ರಗಳು ಒತ್ತಾಯಿಸಿದ್ದವು. ಯಾವುದೇ ರಾಷ್ಟ್ರದಿಂದಲೂ ಶಾಂತಿಗೆ ಭಂಗ ಆಗಬಾರದು. ಉದ್ವಿಗ್ನ ಸ್ಥಿತಿಯನ್ನು ಹೋಗಲಾಡಿಸುವ ರಾಜತಾಂತ್ರಿಕ ಮಾರ್ಗದಲ್ಲಿ ನಡೆಯುವ ಯಾವುದೇ ಪ್ರಯತ್ನವನ್ನು ಭಾರತ ಬೆಂಬಲಿಸುತ್ತದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಹೇಳಿದ್ದಾರೆ.

ಏತನ್ಮಧ್ಯೆ, ಅಮೆರಿಕ ಜತೆಗೆ ನಡೆಸಲು ಉದ್ದೇಶಿಸಿದ್ದ ಶಾಂತಿ ಶೃಂಗಸಭೆಯ ಬಗ್ಗೆ ರಷ್ಯಾ ಉಲ್ಟಾ ಹೊಡೆದಿದೆ. ಫ್ರಾನ್ಯನ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರಾನ್ ಮಧ್ಯಸ್ಥಿಕೆಯಿಂದ ಅಮೆರಿಕ ಅಧ್ಯಕ್ಷೆ ಜೋ ಬೈಡೆನ್‌ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ಮಾತುಕತೆಗೆ ತಾತ್ವಿಕ ಒಪ್ಪಿಗೆ ನೀಡಿದ್ದರು. ಇದಾದ ಕೆಲವು ತಾಸಿನ ಬಳಿಕೆ ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿದ ರಷ್ಯಾದ ಕ್ರೆಮ್ಲಿನ್‌ (ರಷ್ಯಾ ಅಧ್ಯಕ್ಷರ ನಿವಾಸ) ‘ಈ ಮಾತುಕತೆಗೆ ಮಹತ್ವವೇನೂ ಇಲ್ಲ ಮತ್ತು ಇದು ತೀರ ಮುಂಚಿತವಾಯಿತು’ ಎಂದು ಹೇಳುವ ಮೂಲಕ ಶಾಂತಿ ಮಾತುಕತೆಗೆ ತಣ್ಣೀರು ಎರಚಿದೆ. ಈ ನಡುವೆ, ತನ್ನ ಗಡಿ ಉಲ್ಲಂಘನೆ ಮಾಡಿದರೆಂಬ ಆರೋಪದ ಮೇಲೆ ಉಕ್ರೇನ್‌ನ ಐವರನ್ನು ರಷ್ಯಾ ಕೊಂದುಹಾಕಿದೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಇದನ್ನೂ ಓದಿ : Lassa Fever: ಯುಕೆ ಜನರಲ್ಲಿ ಆತಂಕ ಮೂಡಿಸಿದ ಲಸ್ಸಾ ಜ್ವರ

(Russia vs Ukraine Vladimir Putin says recognition of 2 regions of Ukraine what it means)

Comments are closed.