Rajapaksa escapes : ಮಾಲ್ಡೀವ್ಸ್​ಗೆ ಪಲಾಯನ ಮಾಡಿದ ಶ್ರೀಲಂಕಾ ಅಧ್ಯಕ್ಷ ಗೊಟಬೋಯಾ ರಾಜಪಕ್ಸೆ

ಶ್ರೀಲಂಕಾ : Rajapaksa escapes : ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದ ವಿರುದ್ಧ ಸಿಡಿದೆದ್ದಿರುವ ಶ್ರೀಲಂಕಾದ ಜನತೆ ಕೊಲಂಬೋದಲ್ಲಿರುವ ಶ್ರೀ ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ಆರ್ಥಿಕತೆ ದುರುಪಯೋಗ ಆರೋಪವನ್ನು ಹೊರಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಶ್ರೀಲಂಕಾ ಅಧ್ಯಕ್ಷರ ನಿವಾಸದಲ್ಲಿ ಪ್ರತಿಭಟನಾಕಾರರು ದಾಂಧಲೆಯನ್ನು ನಡೆಸುತ್ತಿರುವ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್​ಗೆ ಎಸ್ಕೇಪ್​ ಆಗಿದ್ದಾರೆ ಎಂಬ ವರದಿ ಲಭ್ಯವಾಗಿದೆ.


ಇಂದು ಮುಂಜಾನೆ ಕೊಲಂಬೊದಿಂದ ಮಾಲ್ಡೀವ್ಸ್​​ಗೆ ಆಂಟೊನೊವ್​​ – 32 ಮಿಲಿಟರಿ ವಿಮಾನದಲ್ಲಿ ಗೋಟಬೋಯ ರಾಜಪಕ್ಸೆ ಹಾಗೂ ಅವರ ಪತ್ನಿ ಮತ್ತು ಅಂಗರಕ್ಷಕರು ಹಾರಿದ್ದಾರೆ ಎಂದು ವರದಿಯಾಗಿದೆ. ಮಾಲೆಯ ವೆಲೆನಾ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಅಧ್ಯಕ್ಷ ಗೊಟೊಬಯ ರಾಜಪಕ್ಸೆ ಹಾಗೂ ಅವರ ಪತ್ನಿ ಮತ್ತು ಅಂಗರಕ್ಷಕರನ್ನು ಮಾಲ್ಡೀವ್ಸ್​ನ ಸರ್ಕಾರಿ ಅಧಿಕಾರಿಗಳು ಬರ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಗೊಟೊಬೋಯ ರಾಜಪಕ್ಸೆ ಇಂದು ಶ್ರೀಲಂಕಾ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ನಿರೀಕ್ಷೆಯಿದೆ. ಈ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಶ್ರೀಲಂಕಾದ ಮೊದಲ ಹಾಲಿ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಗೊಟೊಬೊಯ ರಾಜಪಕ್ಸೆ ದೇಶ ತೊರೆಯದಂತೆ ನಿನ್ನೆ ವಲಸೆ ಅಧಿಕಾರಿಗಳು ತಡೆ ನೀಡಿದ್ದರು. ಅವರು ಪಾಸ್​ಪೋರ್ಟ್ ಸ್ಟ್ಯಾಂಪ್​ ಮಾಡಿಸಲು ವಿಐಪಿ ಸೂಟ್​ಗೆ ಹೋಗಲು ನಿರಾಕರಿಸಿದರು. ಆದರೆ ವಿಮಾನ ನಿಲ್ದಾಣದ ಬಳಕೆದಾರರಿಂದ ಪ್ರತೀಕಾರಕ್ಕೆ ಹೆದರಿ ಸಾರ್ವಜನಿಕ ಸೌಲಭ್ಯಗಳ ಮೂಲಕ ಹೋಗುವುದಿಲ್ಲ ಎಂದು ಅವರು ಒತ್ತಾಯಿಸಿದರು ಎನ್ನಲಾಗಿದೆ.


ಶ್ರೀಲಂಕಾ ಸೇನೆಯಲ್ಲಿ ಮಾಜಿ ಲೆಫ್ಟಿನೆಂಟ್-ಕರ್ನಲ್ ಆಗಿದ್ದ ಎಪ್ಪತ್ತಮೂರು ವರ್ಷದ ರಾಜಪಕ್ಸೆ, 2009 ರಲ್ಲಿ ರಕ್ತಸಿಕ್ತ ಅಂತರ್ಯುದ್ಧವು ಕೊನೆಗೊಂಡ ನಂತರ ಶ್ರೀಲಂಕಾದ ಮೇಲೆ ಅಪಾರ ರಾಜಕೀಯ ಅಧಿಕಾರವನ್ನು ಹೊಂದಿರುವ ನಾಲ್ವರು ರಾಜಪಕ್ಸೆ ಸಹೋದರರಲ್ಲಿ ಎರಡನೆಯವರು.ಗೋತಬಯ ರಾಜಪಕ್ಸೆ 21 ನೇ ವಯಸ್ಸಿನಲ್ಲಿ ಸೇನೆಗೆ ಸೇರಿದರು, ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದರು, ನಿವೃತ್ತರಾದರು ಮತ್ತು ಅಮೆರಿಕಕ್ಕೆ ತೆರಳಿದರು.


ಅವರ ಹಿರಿಯ ಸಹೋದರ, ಮಹಿಂದ ರಾಜಪಕ್ಸೆ, ಕುಟುಂಬದ ರಾಜಕೀಯ ಧ್ವಜಧಾರಿ, ಮೇ ತಿಂಗಳಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅವರು ಭದ್ರತಾ ಕಾರಣಗಳಿಗಾಗಿ ನೌಕಾನೆಲೆಗೆ ಓಡಿಹೋದರು. ಸಹೋದರರಲ್ಲಿ ಕಿರಿಯವರಾದ ಬಸಿಲ್ ರಾಜಪಕ್ಸೆ ಕಳೆದ ತಿಂಗಳು ಶ್ರೀಲಂಕಾದ ಹಣಕಾಸು ಸಚಿವ ಸ್ಥಾನವನ್ನು ತ್ಯಜಿಸಿದರು. ಅವರ ಹಿರಿಯ ಸಹೋದರ ಚಮಲ್ ರಾಜಪಕ್ಸೆ ಈ ವರ್ಷದ ಏಪ್ರಿಲ್‌ವರೆಗೆ ದೇಶದ ನೀರಾವರಿ ಸಚಿವರಾಗಿದ್ದರು.

ಇದನ್ನು ಓದಿ : Jasprit Bumrah : ಭೂಮ್ ಭೂಮ್ ಬುಮ್ರಾ, ಖತರ್ನಾಕ್ ವೇಗಿಯ ಬೆಂಕಿ ಬೌಲಿಂಗ್’ಗೆ ಇಂಗ್ಲೆಂಡ್ ಉಡೀಸ್.. ನೆಹ್ರಾ ದಾಖಲೆ ಪೀಸ್ ಪೀಸ್ !

ಇದನ್ನೂ ಓದಿ : KL Rahul Tattoo : ಕೈಗೆ “ಗೂಬೆ” ಚಿತ್ರವನ್ನು ಹಚ್ಚೆ ಹಾಕಿಸಿಕೊಂಡು ಅಚ್ಚರಿ ಮೂಡಿಸಿದ ರಾಹುಲ್, ಗೂಬೆಯ ಮಹತ್ವ ಏನ್ ಗೊತ್ತಾ..?

Sri Lankan president Gotabaya Rajapaksa escapes to the Maldives

Comments are closed.