ಟೋಕಿಯೋ : Suspect in Shinzo Abe shooting : ಸಂಸತ್ತಿನ ಚುನಾವಣೆ ಪ್ರಚಾರ ಕಾರ್ಯದ ಭಾಗವಾಗಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಗುಂಡೇಟಿನ ದಾಳಿಗೆ ಒಳಗಾಗಿದ್ದರು. ಈ ದಾಳಿಯ ಬಳಿಕ ಶಿಂಜೋ ಅಬೆಯನ್ನು ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಯ್ತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಪಾನ್ ಸರ್ಕಾರ ಅಧಿಕೃತ ಮಾಹಿತಿಯನ್ನು ನೀಡಿದೆ. ಈ ಘಟನೆ ಬಳಿಕ ಜಪಾನ್ನ ಪೊಲೀಸರು 41 ವರ್ಷದ ತೆತ್ಸುಯಾ ಯಮಗಾಮಿ ಎಂಬಾತನನ್ನು ಬಂಧಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಆರೋಪಿ ತೆತ್ಸುಯಾ ಯಮಗಾಗಿ ಶೂಟೌಟ್ ನಡೆದ ನಾರಾ ಪ್ರದೇಶದ ನಿವಾಸಿಯಾಗಿದ್ದು ಈತ ಜಪಾನ್ನ ನೌಕಾಪಡೆಯ ಭಾಗವಾಗಿರುವ ಕಡಲ ಸ್ವಯಂ ರಕ್ಷಣಾ ಪಡೆಯ ಮಾಜಿ ಸದಸ್ಯನಾಗಿದ್ದ ಎಂದು ತಿಳಿದು ಬಂದಿದೆ ಎಂದು ಜಪಾನ್ನ ಮಾಧ್ಯಮಗಳು ವರದಿ ಮಾಡಿವೆ. ಈತ ಹ್ಯಾಂಡ್ ಮೇಡ್ ಗನ್ನಿಂದ ಶಿಂಜೋ ಅಬೆ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಪೊಲೀಸರು ಈತನ ಬಳಿಯಿಂದ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.
ಪಶ್ಚಿಮ ನಗರ ನಾರಾದ ರೈಲು ನಿಲ್ದಾಣದ ಹೊರಗೆ ಶಿಂಜೋ ಅಬೆ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಶಂಕಿತ ಆರೋಪಿ ತೆತ್ಸುಯಾ ಯಮಗಾಮಿ ಹಿಂಬದಿಯಿಂದ ದಾಳಿ ನಡೆಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶಿಂಜೋ ಅಬೆ ಎದೆ ಹಾಗೂ ಕುತ್ತಿಗೆಗೆ ಗುಂಡಿನ ಏಟು ಬಿದ್ದಿದ್ದವು .ಎರಡನೇ ಗುಂಡು ಹಿಂಬದಿಯಿಂದ ಶಿಂಜೋ ಅಬೆ ಎದೆ ಸೀಳುತ್ತಿದ್ದಂತೆಯೇ ಅವರು ರಕ್ತಸ್ರಾವದಿಂದ ಕುಸಿದು ಬಿದ್ದಿದ್ದರು.
ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನದ ಗೌರವಾರ್ಥವಾಗಿ ನಾಳೆ ಭಾರತದಲ್ಲಿ ಶೋಕಾಚರಣೆಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಶಿಂಜೋ ಅಬೆ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಹಾಗೂ ಭಾರತ ಮತ್ತು ಜಪಾನ್ ನಡುವಿನ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಗಳನ್ನು ಮಾಡುತ್ತಿದ್ದರು ಎಂದು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
ಇದನ್ನು ಓದಿ : Uttar Pradesh : ಹಿಂದೂ ದೇವರ ಫೋಟೋ ಇರುವ ಕಾಗದದ ಮೇಲೆ ಮಾಂಸ ಮಾರಾಟ : ಆರೋಪಿ ಬಂಧನ
ಇದನ್ನೂ ಓದಿ : ಲಂಡನ್ನಲ್ಲಿ ದಾದಾ 50ನೇ ಹುಟ್ಟುಹಬ್ಬದ “ಪ್ರೀ ಬರ್ತ್’ಡೇ ಸೆಲೆಬ್ರೇಷನ್”.. ಗಂಗೂಲಿಗೆ ಕೇಕ್ ತಿನ್ನಿಸಿದ ತೆಂಡೂಲ್ಕರ್
Suspect in Shinzo Abe shooting ex-member of Japanese Navy, used handmade gun