ಬಿಸಿಸಿಐ= ಬೋರ್ಡ್ ಆಫ್ ಚೇಂಜಿಂಗ್ ಕ್ಯಾಪ್ಟನ್ಸ್ ಇನ್ ಇಂಡಿಯಾ !

ಬೆಂಗಳೂರು: ಬಿಸಿಸಿಐ ಅಂದ್ರೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ. (BCCI) ಅಂದ್ರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ. ಆದರೆ ಅದೇ ಬಿಸಿಸಿಐ ಈಗ ಬೋರ್ಡ್ ಆಫ್ ಚೇಂಜಿಂಗ್ ಕ್ಯಾಪ್ಟನ್ಸ್ ಇನ್ ಇಂಡಿಯಾ (Board of Changing Captains in India) ಎಂಬಂತಾಗಿದೆ. ಬಿಸಿಸಿಐಗೆ ಕ್ರಿಕೆಟ್ ಅಭಿಮಾನಿಗಳು ಈ ಹೊಸ ನಾಮಕರಣ ಮಾಡಿದ್ದಾರೆ.

ಇದಕ್ಕೆ ಕಾರಣ ಕಳೆದ ಏಳು ತಿಂಗಳಲ್ಲಿ ಏಳು ನಾಯಕರು ಟೀಮ್ ಇಂಡಿಯಾವನ್ನು ಮುನ್ನಡೆಸಿರುವುದು. 2022ರಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ನಾಯಕರ ಸಂಖ್ಯೆ ಬರೋಬ್ಬರಿ 7. ಮತ್ತೊಂದು ಅಚ್ಚರಿಯ ಸಂಗತಿ ಏನಂದ್ರೆ ಕಳೆದ ಏಳು ತಿಂಗಳಲ್ಲಿ ಟೀಮ್ ಇಂಡಿಯಾಗೆ 6 ಮಂದಿ ಉಪನಾಯಕರು ಬಂದಿದ್ದಾರೆ. ಇದೇ ವರ್ಷದ ಜನವರಿಯಲ್ಲಿ ದಕ್ಷಿಣ ಆಫ್ರಿಕಾದ ಕೇಪ್’ಟೌನ್”ನಲ್ಲಿ ನಡೆದ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ವಿರಾಟ್ ಕೊಹ್ಲಿ (Virat Kohli) ಮುನ್ನಡೆಸಿದ್ದರು.

ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಕೆ.ಎಲ್ ರಾಹುಲ್ (Kl Rahul) ಮುನ್ನಡೆಸಿದ್ದರು. ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ತವರು ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು ರೋಹಿತ್ ಶರ್ಮಾ (Rohit Sharma). ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ನೇತತ್ವ ವಹಿಸಿದ್ದು ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant). ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ (Hardik Pandya)ಮುನ್ನಡೆಸಿದ್ದರು.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ನಡೆದ ಎರಡು ಟಿ20 ಅಭ್ಯಾಸ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಮುಂದಾಳತ್ವ ವಹಿಸಿದ್ದು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik). ಜುಲೈ ಮೊದಲ ವಾರದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಚುಕ್ಕಾಣಿ ಹಿಡಿದದ್ದು ವೇಗಿ ಜಸ್ಪ್ರೀತ್ ಬುಮ್ರಾ (jaspreet Bumrah). ಜುಲೈ 22ರಿಂದ ವೆಸ್ಟ್ ಇಂಡೀಸ್”ನಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವುದು ಓಪನರ್ ಶಿಖರ್ ಧವನ್ (Shikhar Dhawan).

2022ರಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಏಳು ನಾಯಕರು:

  • ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯ: ವಿರಾಟ್ ಕೊಹ್ಲಿ
  • ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ: ಕೆ.ಎಲ್ ರಾಹುಲ್
  • ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸರಣಿ: ರೋಹಿತ್ ಶರ್ಮಾ
  • ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ರಿಷಭ್ ಪಂತ್
  • ಐರ್ಲೆಂಡ್ ವಿರುದ್ಧದ ಟಿ20 ಸರಣಿ: ಹಾರ್ದಿಕ್ ಪಾಂಡ್ಯ
  • ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯ: ಜಸ್ಪ್ರೀತ್ ಬುಮ್ರಾ
  • ಇಂಗ್ಲೆಂಡ್’ನಲ್ಲಿ ನಡೆದ 2 ಟಿ20 ಅಭ್ಯಾಸ ಪಂದ್ಯ: ದಿನೇಶ್ ಕಾರ್ತಿಕ್
  • ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ (ಜುಲೈ 22ರಿಂದ ಆರಂಭ): ಶಿಖರ್ ಧವನ್

2022ರಲ್ಲಿ ಭಾರತ ತಂಡದ ಉಪನಾಯಕತ್ವ ವಹಿಸಿದರು:

  1. ಜಸ್ಪ್ರೀತ್ ಬುಮ್ರಾ, 2. ಕೆ.ಎಲ್ ರಾಹುಲ್, 3. ರಿಷಭ್ ಪಂತ್, 4. ಹಾರ್ದಿಕ್ ಪಾಂಡ್ಯ, 5. ಭುವನೇಶ್ವರ್ ಕುಮಾರ್, 6. ರವೀಂದ್ರ ಜಡೇಜಾ.

ಕೇವಲ ಏಳು ತಿಂಗಳುಗಳಲ್ಲಿ ಏಳು ನಾಯಕರು, ಆರು ಮಂದಿ ಉಪನಾಯಕರು. ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ ನಂತರ ಭಾರತ ತಂಡಕ್ಕೆ ಎದುರಾಗಿರುವ ಪರಿಸ್ಥಿತಿಯಿದು. ಇದೇ ಕಾರಣದಿಂದ ಕ್ರಿಕೆಟ್ ಪ್ರಿಯರು ಬಿಸಿಸಿಐಯನ್ನು ಬೋರ್ಡ್ ಆಫ್ ಚೇಂಜಿಂಗ್ ಕ್ಯಾಪ್ಟನ್ಸ್ ಇನ್ ಇಂಡಿಯಾ ಎಂದು ಸೋಷಿಯನ್ ಮೀಡಿಯಾದಲ್ಲಿ ಟ್ರೋಲ್ ಮಾಡ್ತಿದ್ದಾರೆ.

ಇದನ್ನೂ ಓದಿ : Exclusive : secret of Hardik Pandya’s Success : ಹಾರ್ದಿಕ್ ಪಾಂಡ್ಯ ಯಶೋಗಾಥೆಯ ಹಿಂದಿನ ಶಿಲ್ಪಿ ನಮ್ಮ ಕನ್ನಡಿಗ..!

ಇದನ್ನೂ ಓದಿ : Virat wrote emotional lines : ಧೋನಿ ಹುಟ್ಟುಹಬ್ಬಕ್ಕೆ 3 ಸಾಲುಗಳ ಭಾವನಾತ್ಮಕ ಸಂದೇಶ ಬರೆದ ಕಿಂಗ್ ಕೊಹ್ಲಿ

BCCI Board of Changing Captains in India

Comments are closed.