ಮಂಗಳವಾರ, ಏಪ್ರಿಲ್ 29, 2025
HomeWorldSuicide Machine : ಉಸಿರು ನಿಂತಿದ್ದೇ ಗೊತ್ತಾಗಲ್ಲ, ಬಂತು ಸುಸೈಡ್ ಮೆಶಿನ್: ಭಾರತದಲ್ಲಿ ಬಳಕೆ ಶಿಕ್ಷಾರ್ಹ...

Suicide Machine : ಉಸಿರು ನಿಂತಿದ್ದೇ ಗೊತ್ತಾಗಲ್ಲ, ಬಂತು ಸುಸೈಡ್ ಮೆಶಿನ್: ಭಾರತದಲ್ಲಿ ಬಳಕೆ ಶಿಕ್ಷಾರ್ಹ ಅಪರಾಧ !

- Advertisement -

ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಿದೆ ಎಂದು ದಾಖಲೆಗಳು ಹೇಳುತ್ತಿವೆ. ಆತ್ಮಹತ್ಯೆ ಮಹಾಪಾಪ ಎಂದು ಧರ್ಮಗ್ರಂಥಗಳು ಸಾರಿವೆ. ಅಲ್ಲದೇ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವೆಡೆ ಆತ್ಮಹತ್ಯೆಯನ್ನು ತಡೆಯುವಂತಹ ಕ್ರಮಗಳ ಬಗ್ಗೆ ಯುವಜನತೆಗೆ ತಿಳುವಳಿಕೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಜೀವ ಉಳಿಸಲು,ಆತ್ಮಹತ್ಯೆ ತಡೆಯಲು ಇಷ್ಟೆಲ್ಲ ಪ್ರಯತ್ನಗಳು‌ನಡೆಯುತ್ತಿದ್ದರೇ ದೂರದ ಸ್ಬಿಡ್ಜರ್ ಲ್ಯಾಂಡ್ ನಲ್ಲಿ( Switzerland legalise suicide machine ) ನೋವು ಇಲ್ಲದೇ ಆತ್ಮಹತ್ಯೆಗೆ ಸಹಾಯ ಮಾಡುವ ಯಂತ್ರ ( painless death in 1 minute ) ಸಿದ್ಧಪಡಿಸಲಾಗಿದೆ.

ಸಾರ್ಕೋ ಎಂಬ ಹೆಸರಿನ ಈ ಯಂತ್ರ ನಿಮ್ಮ ಆತ್ಮಹತ್ಯೆಯನ್ನು ಸರಳವಾಗಿಸುತ್ತದೆ. ಅಷ್ಟೇ ಅಲ್ಲ ಯಾತನಾಮಯ ಮರಣದಿಂದ ನಿಮಗೆ ಬಿಡುಗಡೆ ನೀಡುತ್ತದೆ. ಸ್ವಿಡ್ಜರ್ ಲ್ಯಾಂಡ್ ನ ಕಾನೂನಿನಲ್ಲಿ ದಯಾಮರಣಕ್ಕೆ ಅವಕಾಶವಿದೆ. ಮಾರಣಾಂತಿಕ ರೋಗಗಳು, ಮಾನಸಿಕ ಸಮಸ್ಯೆ,ಬದುಕಿನ ಜಂಜಾಟದಿಂದ ಬೇಸತ್ತವರು ಆತ್ಮಹತ್ಯೆ ಮೂಲಕ ಗೌರವಪೂರ್ವಕ ಸಾವು ಸ್ವೀಕರಿಸಲು ಸ್ವಿಡ್ಜರ್ ಲ್ಯಾಂಡ್ ನ ಕಾನೂನು ಅವಕಾಶ ನೀಡಿದೆ. ಹೀಗಾಗಿ ದಯಾಮರಣಕ್ಕೆ ಪೂರಕವಾಗುವಂತೆ ಅಲ್ಲಿನ ವಿಜ್ಞಾನಿಗಳು ಈ ಯಂತ್ರವನ್ನು ಉತ್ಪಾದಿಸಿದ್ದಾರೆ.

ಶವಪೆಟ್ಟಿಗೆಯಂತೆ ಭಾಸವಾಗುವ ಈ ಯಂತ್ರದಲ್ಲಿ ಕುಳಿತುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬಹುದು. ಇದು ತ್ರಿಡಿ ಯಂತ್ರವಾಗಿದ್ದು ಇದರಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಮಾಡುವ ಟ್ಯಾಬ್ಲೆಟ್ ಗಳನ್ನು ಅಳವಡಿಸಲಾಗಿರುತ್ತದೆ. ಸಾಯಲು ಬಯಸುವ ವ್ಯಕ್ತಿ ಇದರೊಳಗೆ ಕುಳಿತುಕೊಂಡು ಯಂತ್ರ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಎಲ್ಲ ಪ್ರಶ್ನೆ ಗಳಾದ ಮೇಲೆ ಕೊನೆಯಲ್ಲಿ ಒಂದು ಬಟನ್ ಒತ್ತಿದಾಗ ಯಂತ್ರದ ಒಳಗೆ ಸಾರಜನಕ ಭರ್ತಿಯಾಗುತ್ತದೆ. ಬಳಿಕ ಒಳಗಿರುವ ವ್ಯಕ್ತಿಗೆ ಆಮ್ಲಜನಕದ ಕೊರತೆ ಯಾಗಿ ಮೊದಲಿಗೆ ಪ್ರಜ್ಞೆ ತಪ್ಪುತ್ತಾನೆ.

ಬಳಿಕ ಅಲ್ಲಿಯೇ ಆತನ ಸಾವು ಸಂಭವಿಸುತ್ತದೆ. ಈ ಸಾಯುವ ಪ್ರಕ್ರಿಯೆ ಕೇವಲ ಒಂದು ನಿಮಿಷದ್ದಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗೆ ಯಾವುದೇ ನೋವಿನ ಅಥವಾ ಹಿಂಸೆಯ ಅನುಭವವಾಗುವುದಿಲ್ಲ ಎಂದು ಅಲ್ಲಿನ ವೈದ್ಯರಾದ ಡಾ.ಫಿಲಪ್ ನಿಟ್ಕ್ಸೆ ವಿವರಣೆ ನೀಡಿದ್ದಾರೆ. ಈಗಾಗಲೇ ಅಲ್ಲಿ ಈ ಯಂತ್ರವನ್ನು ಬಳಸಿ 1500 ಕ್ಕೂ ಹೆಚ್ಚು ಜನರು ಸಾವಿಗೆ ಶರಣಾಗಿದ್ದಾರಂತೆ. ಅಲ್ಲಿ ದಯಾಮರಣದ ಅವಕಾಶವಿರುವುದರಿಂದ ಸಾರ್ಕೋ ಯಂತ್ರದ ಬಳಕೆ ಕಾನೂನುಬದ್ಧವಾಗಿದೆ. ಆದರೆ ಭಾರತದಲ್ಲಿ ಆತ್ಮಹತ್ಯೆ ಕಾನೂನು ಪ್ರಕಾರ ಅಪರಾಧವಾಗಿದ್ದು ಈ ರೀತಿಯ ಯಂತ್ರಗಳ ಉತ್ಪಾದನೆ, ಬಳಕೆ ಕೂಡ ಭಾರತದಲ್ಲಿ ಶಿಕ್ಷಾರ್ಹ ಅಪರಾಧ ಎನಿಸಿದೆ.

ಇದನ್ನೂ ಓದಿ : 4 Members Suicide : ಮಂಗಳೂರಲ್ಲಿ ಘೋರ ದುರಂತ : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಇದನ್ನೂ ಓದಿ : Sunny Leone Photoshoot : ಮತ್ತೆ‌ ಮತ್ತೇರಿಸಿದ ಮಾದಕ ಚೆಲುವೆ : ಶ್ವೇತವಸ್ತ್ರದಲ್ಲಿ ಸನ್ನಿ ಸ್ಟನ್ನಿಂಗ್ ಲುಕ್

Switzerland legalise suicide machine sarco painless death in 1 minute

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular