UPI Payments without Internet : ಇಂಟರ್ನೆಟ್​ ಸೌಕರ್ಯವಿಲ್ಲದೇ ಮಾಡಬಹುದು ಯುಪಿಐ ಪಾವತಿ :ಫೀಚರ್​ ಫೋನ್​ಗಳಲ್ಲಿಯೂ ಡಿಜಿಟಲ್​ ಪಾವತಿ ಸೌಕರ್ಯಕ್ಕೆ ಮುಂದಾದ ಆರ್​ಬಿಐ

ಯುಪಿಐ ಪಾವತಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ರಿಸರ್ವ್ ಬ್ಯಾಂಕ್​ ಆಫ್​ ಇಂಡಿಯಾ ಈಗಾಗಲೇ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಯುಪಿಐ ಪಾವತಿ ಹೆಚ್ಚಾದಷ್ಟೂ ದೇಶದಲ್ಲಿ ಡಿಜಿಟಲ್​ ಪಾವತಿ ವ್ಯವಸ್ಥೆಯು ಅಭಿವೃದ್ಧಿ ಕಾಣಲಿದೆ. ಇಷ್ಟು ದಿನ ಯುಪಿಐ ಪಾವತಿಯನ್ನು ಸ್ಮಾರ್ಟ್​ ಫೋನ್​ ಹಾಗೂ ಇಂಟರ್ನೆಟ್​ ಸೌಕರ್ಯ ಹೊಂದಿದ್ದವರು ಮಾತ್ರ ಮಾಡಬಹುದಿತ್ತು. ಆದರೆ ಈ ನಿಯಮದಲ್ಲಿ ಮಹತ್ವದ ಬದಲಾವಣೆಯೊಂದನ್ನು ರಿಸರ್ವ್​ ಬ್ಯಾಂಕ್​ (UPI Payments without Internet) ಜಾರಿಗೊಳಿಸಿದೆ.

ದೇಶದಲ್ಲಿ ಪ್ರತಿಯೊಬ್ಬರೂ ಡಿಜಿಟಲ್​ ಪಾವತಿ ವ್ಯವಸ್ಥೆಯ ಲಾಭವನ್ನು ಪಡೆಯಬೇಕು ಎಂಬ ನಿಟ್ಟಿನಲ್ಲಿ ಶೀಘ್ರದಲ್ಲೇ ಯಾವುದೇ ಇಂಟರ್ನೆಟ್​ ಸೇವೆ ಇಲ್ಲದೆಯೂ ಕೂಡ ಯುಪಿಐ ಪಾವತಿ ಬಳಕೆ ಮಾಡಲು ಅವಕಾಶ ನೀಡಲು ಆರ್​ಬಿಐ ಮುಂದಾಗಿದೆ. ಅಂದರೆ ಇನ್ಮೇಲೆ ಫೀಚರ್​ ಫೋನ್​ಗಳಲ್ಲೂ ಯುಪಿಐ ಪಾವತಿ ವ್ಯವಸ್ಥೆ ಬಳಕೆ ಮಾಡಬಹುದು. ಶೀಘ್ರದಲ್ಲೇ ಈ ಸೌಕರ್ಯವನ್ನು ಜಾರಿಗೆ ತರಲಿದ್ದೇವೆ ಎಂದು ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಗವರ್ನರ್​ ಶಕ್ತಿಕಾಂತ್​ ದಾಸ್​ ಇಂದು ಘೋಷಣೆ ಮಾಡಿದ್ದಾರೆ.

ಈ ವಿಚಾರವಾಗಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಕ್ತಿಕಾಂತ್​ ದಾಸ್​​ ಅತೀ ಶೀಘ್ರದಲ್ಲಿ ಫೀಚರ್​ ಫೋನ್​ಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿದ್ರು. ಇತ್ತೀಚೆಗೆ ನಡೆದ ದ್ವೈಮಾಸಿಕ ಹಣಕಾಸು ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಮುಂದಿನ ವರ್ಷದ ಆರಂಭದಿಂದಲೇ ಹೆಚ್ಚಲಿದೆ ಎಟಿಎಂ ಸೇವಾ ಶುಲ್ಕ

ಎಟಿಎಂ ಸೇವೆಯ ಪ್ರಯೋಜನವನ್ನು ಪಡೆಯಲು ಶುಲ್ಕ ಪಾವತಿ ಮಾಡುತ್ತಿದ್ದ ಬ್ಯಾಂಕ್​ ಗ್ರಾಹಕರು ಮುಂದಿನ ವರ್ಷದ ಆರಂಭದಲ್ಲೇ ಅಂದರೆ ಜನವರಿ ಬಳಿಕ ಉಚಿತ ಎಟಿಎಂ ವ್ಯವಹಾರ ಮಿತಿಯನ್ನು ಮೀರಿದಲ್ಲಿ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಜೂನ್​ ತಿಂಗಳಲ್ಲಿ ರಿಸರ್ವ್​ ಬ್ಯಾಂಕ್​​ (RBI) ನಗದು ರಹಿತ ಎಟಿಎಂ ವ್ಯವಹಾರಗಳ ಶುಲ್ಕವನ್ನು (ATM Charges) ಹೆಚ್ಚಿಸಲು ಬ್ಯಾಂಕುಗಳಿಗೆ ಅನುಮತಿ ನೀಡಿತ್ತು. ಅದೇ ರೀತಿ ಈ ಪರಿಷ್ಕೃತ ಎಟಿಎಂ ಸೇವೆಯ ಶುಲ್ಕವು 2022ರ ಜನವರಿ 1 ರಿಂದಲೇ ಜಾರಿಗೆ ಬರಲಿದೆ.

ರಿಸರ್ವ್ ಬ್ಯಾಂಕ್​ ಮಾರ್ಗಸೂಚಿಯಂತೆ, ಉಚಿತ ಎಟಿಎಂ ಸೇವೆಯನ್ನು ನೀಡುವ ಮಿತಿಯನ್ನು ಮೀರಿ ನಡೆಸಲಾಗುವ ಎಟಿಎಂ ವ್ಯವಹಾರಗಳಿಗೆ ಆಕ್ಸಿಕ್​ ಬ್ಯಾಂಕ್​ ಸೇರಿದಂತೆ ವಿವಿಧ ಬ್ಯಾಂಕುಗಳು 21 ರೂಪಾಯಿಗೂ ಅಧಿಕ ಜಿಎಸ್​ಟಿ ವಿಧಿಸಲಿದೆ. ಇದು 2022ರ ಜನವರಿ 1 ರಿಂದಲೇ ಜಾರಿಗೆ ಬರಲಿದೆ ಎಂದು ಆ್ಯಕ್ಸಿಕ್​ ಬ್ಯಾಂಕ್ ಪ್ರಕಟಣೆ ಹೊರಡಿಸಿದೆ. ಜನವರಿ 1 ರಿಂದ ಅನ್ವಯವಾಗುವಂತೆ ಬ್ಯಾಂಕ್​ ಗ್ರಾಹಕರು ಉಚಿತ ಮಾಸಿಕ ಮಿತಿಯನ್ನು ಮೀರಿದ ಪ್ರತಿ ವ್ಯವಹಾರಗಳಿಗೆ ಈ ಹಿಂದೆ ನೀಡುತ್ತಿದ್ದ 20 ರೂಪಾಯಿಗಳ ಬದಲಾಗಿ 21 ರೂಪಾಯಿಗಳನ್ನು ಶುಲ್ಕದ ರೂಪದಲ್ಲಿ ಪಾವತಿಸಬೇಕು. ಈ ಹೆಚ್ಚುವರಿ ಮೊತ್ತವು ಜನವರಿಗೆ 1ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಂದಹಾಗೆ ಮುಂದಿನ ವರ್ಷ ಕೂಡ ಗ್ರಾಹಕರಿಗೆ ತಮ್ಮದೇ ಬ್ಯಾಂಕ್​ನ ಎಟಿಎಂಗಳಲ್ಲಿ ಐದು ಉಚಿತ ಟ್ರಾನ್ಸಾಕ್ಷನ್​ ಮಿತಿಯನ್ನು ಮುಂದುವರಿಸಲಾಗಿದೆ. ಇದರ ಜೊತೆಯಲ್ಲಿ ಬೇರೆ ಬ್ಯಾಂಕುಗಳ ಎಟಿಎಂಗಳಲ್ಲೂ ಸೀಮಿತ ಅವಧಿಗೆ ಉಚಿತ ವ್ಯವಹಾರ ನಡೆಸಬಹುದಾಗಿದೆ. ಇದು ಮೆಟ್ರೋ ನಗರಗಳಲ್ಲಿ ಮೂರು ಹಾಗೂ ನಾನ್​ ಮೆಟ್ರೋ ನಗರಗಳಲ್ಲಿ ಐದು ವ್ಯವಹಾರ ಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಇದರ ಜೊತೆಯಲ್ಲಿ ಆರ್​ಬಿಐ ಪ್ರತಿ ವ್ಯವಹಾರಕ್ಕೆ ಇಂಟರ್​ಚೇಂಜ್​ ಶುಲ್ಕವನ್ನು ಹಣಕಾಸು ವಹಿವಾಟುಗಳಿಗೆ 15 ರೂಪಾಯಿ ಯಿಂದ 17 ರೂಪಾಯಿಗಳವರೆಗೆ ಹಾಗೂ ಹಣಕಾಸೇತರ ವಹಿವಾಟುಗಳಿಗೆ 5 ರೂಪಾಯಿಗಳಿಂದ 6 ರೂಪಾಯಿಗಳವರೆಗೆ ಹೆಚ್ಚಿಸಲು ಬ್ಯಾಂಕುಗಳಿಗೆ ಅವಕಾಶ ನೀಡಿದೆ. ಇದು ಆಗಸ್ಟ್​ 1ರಿಂದಲೇ ಜಾರಿಗೆ ಬಂದಿದೆ.

ಇದನ್ನು ಓದಿ : Gold Smuggling : ಲಾಕ್‌ಡೌನ್‌ನಲ್ಲೂ ಕಳ್ಳ ಸಾಗಾಣಿಕೆ! ಹೊಸ ಮಾರ್ಗ ಕಂಡುಕೊಂಡ ಸ್ಮಗ್ಲರ್‌ಗಳು

ಇದನ್ನೂ ಓದಿ : ATM Charges : ಬ್ಯಾಂಕ್​ ಗ್ರಾಹಕರ ಗಮನಕ್ಕೆ: ಮುಂದಿನ ವರ್ಷದ ಆರಂಭದಿಂದಲೇ ಹೆಚ್ಚಲಿದೆ ಎಟಿಎಂ ಸೇವಾ ಶುಲ್ಕ..!

UPI Payments without Internet: RBI to Launch Digital Payments for Feature Phone Users

Comments are closed.