Taliban women : ತಾಲಿಬಾನ್ ಮಹಿಳೆಯರಿಗೆ ಹೊಸ‌ರೂಲ್ಸ್ : ರೆಸ್ಟೋರೆಂಟ್‌ನಲ್ಲಿ ಕುಳಿತು ತಿನ್ಮುವಂತಿಲ್ಲ !

ಕಾಬೂಲ್‌ : (Taliban women) ಅಫಘಾನಿಸ್ಥಾನದಲ್ಲಿ ತಾಲಿಬಾನ್‌ ಸರ್ಕಾರ ಬಂದ ನಂತರ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಸಾರ್ವಜನಿಕ ಜೀವನದಿಂದ ಮಹಿಳೆಯರನ್ನು ಸಂಪೂರ್ಣವಾಗಿ ಹೊರಗಿಟ್ಟ ತಾಲಿಬಾನ್‌ ಇದೀಗ ಮತ್ತೊಂದು ರೂಲ್ಸ್‌ ಅನ್ನು ಮಹಿಳೆಯರ ಮೇಲೆ ಹೇರಿದೆ. ಈ ಹೊಸ ಆದೇಶದ ಅಡಿಯಲ್ಲಿ ಮಹಿಳೆಯರು ಒಂಟಿಯಾಗಿ ಅಥವಾ ಕುಟುಂಬದೊಂದಿಗೆ ಉದ್ಯಾನವನಗಳು ಮತ್ತು ಹಸಿರು ಸ್ಥಳಗಳನ್ನು ಹೊಂದಿರುವ ರೆಸ್ಟೋರೆಂಟ್ಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ಬಂದ ನಂತರ ಮಾಡಿದ ಮೊದಲ ಕೆಲಸವೇ ಮಹಿಳೆಯನ್ನು ರಾಜಕೀಯ ಜೀವನದಿಂದ ಹೊರಗಿಡುವುದು. ನಂತರ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಒಂಟಿಯಾಗಿ ಓಡಾಡಬಾರದು, ಅವರು ಮಾಲ್‌, ಸೂಪರ್‌ ಮಾರ್ಕೆಟ್‌ ಹೀಗೆ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವಾಗ ಗಂಡ ಅಥವಾ ತಂದೆ ಜೊತೆಗಿರಬೇಕು ಎಂಬ ಆದೇಶ ಹೊರಡಿಸಲಾಯಿತು. ಇದಾದ ಬಳಿಕ ಮಹಿಳೆಯರನ್ನು ಕೆಲಸದಿಂದ ತೆಗೆದುಹಾಕಲಾಯಿತು. ನಂತರದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಅವಕಾಶವನ್ನು ಕಸಿದುಕೊಳ್ಳಲಾಯಿತು.

ಇವೆಲ್ಲಾ ಆದೇಶಗಳ ನಂತರ ಇದೀಗ ಮತ್ತೊಂದು ಹೊಸ ಆದೇಶ ಹೊರಡಿಸಿದ ತಾಲಿಬಾನ್‌ ಸರಕಾರ ಇಸ್ಲಾಮಿಕ್ ಗುರುಗಳು ಮತ್ತು ಜನರ ಸಲಹೆಯ ಮೇರೆಗೆ ಉದ್ಯಾನಗಳು ಅಥವಾ ಹಸಿರು ಸ್ಥಳಗಳನ್ನು ಹೊಂದಿರುವ ರೆಸ್ಟೋರೆಂಟ್‌ಗಳಿಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಾಲಿಬಾನ್ ಸರ್ಕಾರ ಹೇಳಿಕೆ ನೀಡಿದೆ. ಕೆಲವರ ದೂರಿನ ಮೇರೆಗೆ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲಿಬಾನ್ ತಿಳಿಸಿದೆ. ಅಂತಹ ಸ್ಥಳಗಳಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಇರುತ್ತಾರೆ ಮತ್ತು ಮಹಿಳೆಯರು ಹಿಜಾಬ್ ಧರಿಸುವುದಿಲ್ಲ ಎಂಬ ದೂರುಗಳು ಬಂದವು. ಹೀಗಾಗಿ ಅಂತಹ ಸ್ಥಳಗಳಲ್ಲಿ ಮಹಿಳೆಯರಿಗೆ ಅವಕಾಶವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ : Lava Blaze 2 : ಭಾರತದಲ್ಲಿ ಬಿಡುಗಡೆಯಾದ ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌; ಬೆಲೆ ಮತ್ತು ವೈಶಿಷ್ಟ್ಯ

ಇದನ್ನೂ ಓದಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: 14ನೇ ಕಂತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಮಾಹಿತಿ

ಹೆರಾತ್‌ನಲ್ಲಿರುವ ರೆಸ್ಟೋರೆಂಟ್‌ಗಳಿಗೆ ಮಾತ್ರ ಈ ನಿಷೇಧ ಅನ್ವಯಿಸುತ್ತದೆ ಎಂದು ಹೆರಾತ್‌ನಲ್ಲಿರುವ ಹಿರಿಯ ತಾಲಿಬಾನ್ ಅಧಿಕಾರಿ ಬಾಜ್ ಮೊಹಮ್ಮದ್ ನಜೀರ್ ಹೇಳಿದ್ದಾರೆ. ಪ್ರತಿಯೊಂದು ಆದೇಶದ ಮೂಲಕ ತಾಲಿಬಾನ್‌ ಸರಕಾರ ಮಹಿಳೆಯರನ್ನು ತಮ್ಮ ಸಾರ್ವಜನಿಕ ಜೀವನದಿಂದ ಸಂಪೂರ್ಣವಾಗಿ ಹೊರಗಿಟ್ಟಿದೆ.

Taliban women: New rules for Taliban women: Can’t sit and eat in the restaurant!

Comments are closed.