21 killed in school : ಅಮೆರಿಕದ ಟೆಕ್ಸಾಸ್ನ ಪ್ರಾಥಮಿಕ ಶಾಲೆಯಲ್ಲಿ 18ರ ಹರೆಯದ ಯುವಕನೊಬ್ಬ ಅಮಾನವೀಯವಾಗಿ ಗುಂಡಿನ ದಾಳಿ ನಡೆಸಿದ್ದು ಈ ಗುಂಡಿನ ದಾಳಿಯಲ್ಲಿ 18 ಮಂದಿ ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕ ಸೇರಿದಂತೆ ಒಟ್ಟು 21 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ ಬಂದೂಕುಧಾರಿ ಯುವಕನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಟೆಕ್ಸಾಸ್ನ ಗವರ್ನರ್ ಗ್ರೆಗ್ ಅಬಾಟ್ ಈ ಘಟನೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.
2012ರಕ್ಕು ಕನೆಕ್ಟಿಕಟ್ನ ನ್ಯೂಟೌನ್ನಲ್ಲಿರುವ ಸ್ಯಾಂಡಿ ಹುಕ್ ಎಲಿಮಂಟರಿ ಶಾಲೆಯಲ್ಲಿ ಇದೇ ಮಾದರಿಯಲ್ಲಿ ಭೀಕರವಾದ ಗುಂಡಿನ ದಾಳಿ ನಡೆದಿತ್ತು. ಇದಾದ ಬಳಿಕ ನಡೆದ ಅತ್ಯಂತ ದೊಡ್ಡ ದುರ್ಘಟನೆ ಈ ಘಟನೆಯಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಟೆಕ್ಸಾಸ್ನ ಗವರ್ನರ್ ಗ್ರೆಗ್ ಅಬಾಟ್ಗೆ ಫೋನಾಯಿಸಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ದುರ್ಘಟನೆಯ ಬಗ್ಗೆ ಇಂಚಿಂಚೂ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಸಂದರ್ಭದಲ್ಲಿ ಟೆಕ್ಸಾಸ್ಗೆ ಬೇಕಾದ ಎಲ್ಲಾ ಅಗತ್ಯ ನೆರವನ್ನು ಸರ್ಕಾರ ನೀಡಲಿದೆ ಎಂದು ಜೋ ಬೈಡನ್ ಗ್ರೆಗ್ ಅಬಾಟ್ಗೆ ಅಭಯ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೆಲವು ಸಮಯದ ಹಿಂದೆ ನ್ಯೂಯಾರ್ಕ್ನ ಬಫೆಲೋ ನಗರದಲ್ಲಿರುವ ಸೂಪರ್ ಮಾರ್ಕೆಟ್ನಲ್ಲಿ ಬಂಧೂಕುದಾರಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ 10 ಮಂದಿ ನಾಗರಿಕರು ಸಾವನ್ನಪ್ಪಿದ್ದರು. ಈ ಘಟನೆ ನಡೆದು ಕೇವಲ ಎರಡು ವಾರಗಳ ಒಳಗಾಗಿ ಇದೀಗ ಮತ್ತೆ ಗುಂಡಿನ ದಾಳಿಯ ಪ್ರಕರಣ ನಡೆದಿರುವುದು ಅಮೆರಿಕದಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ. ಈ ಹಿಂದೆ ನ್ಯೂಯಾರ್ಕ್ನ ಭಫೆಲೋ ನಗರದಲ್ಲಿ ನಡೆದ ಗುಂಡಿನ ದಾಳಿಯನ್ನು ಜನಾಂಗೀಯ ಪ್ರೇರಿತ ಸಾಮೂಹಿಕ ಗುಂಡಿನ ದಾಳಿ ಎಂದು ವ್ಯಾಖ್ಯಾನಿಸಲಾಗಿತ್ತು.
ಇದನ್ನು ಓದಿ : KL Rahul Captain : IND vs SA ENG ಸರಣಿಗೆ ಟೀಂ ಇಂಡಿಯಾ ಆಯ್ಕೆ : T20 ಸರಣಿಗೆ ಕನ್ನಡಿಗ ರಾಹುಲ್ ನಾಯಕ
ಇದನ್ನೂ ಓದಿ : Harshal Patel injured : ಆರ್‌ಸಿಬಿ ತಂಡಕ್ಕೆ ಬಿಗ್ ಶಾಕ್ : ಖ್ಯಾತ ಬೌಲರ್ ಹರ್ಷಲ್ ಪಟೇಲ್‌ಗೆ ಗಾಯ
texas governor 21 killed in school shooting gunman dead