temple in the malali mosque : ಮಳಲಿ ಮಸೀದಿಯಲ್ಲಿತ್ತು ಹಿಂದೂ ಧಾರ್ಮಿಕ ಸ್ಥಳ : ತಾಂಬೂಲ ಪ್ರಶ್ನೆಯಲ್ಲಿ ಉತ್ತರ

ಮಂಗಳೂರು : temple in the malali mosque : ಮಂಗಳೂರು ಹೊರವಲಯದಲ್ಲಿರುವ ಮಳಲಿ ಮಸೀದಿ ವಿವಾವ ಸಂಬಂಧ ಹಿಂದೂ ಪರ ಸಂಘಟನೆಗಳು ನಡೆಸಿರುವ ತಾಂಬೂಲ ಪ್ರಶ್ನೆಯಲ್ಲಿ ಕೇರಳದ ಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್​​ ತಾಂಬೂಲಗಳನ್ನು ನೋಡಿ ಈ ಮಸೀದಿ ಜಾಗದಲ್ಲಿ ಹಿಂದೂ ದೈವಿ ಶಕ್ತಿಯಿತ್ತು ಎಂಬ ಉತ್ತರವನ್ನು ನೀಡಿದ್ದಾರೆ. ತಾಂಬೂಲಗಳನ್ನು ಲೆಕ್ಕ ಮಾಡಿ ಉತ್ತರ ನೀಡಿದ ತಂತ್ರಿಗಳು ಈ ಹಿಂದೆ ಈ ಸ್ಥಳದಲ್ಲಿ ಯಾವುದೋ ಗುರುಮಠವಿತ್ತು ಎಂಬ ಉತ್ತರವನ್ನು ನೀಡಿದ್ದಾರೆ.

ಶ್ರೀರಾಮಾಂಜನೇಯ ದೇಗುಲದಲ್ಲಿ ಆಯೋಜಿಸಲಾಗಿದ್ದ ತಾಂಬೂಲ ಪ್ರಶ್ನೆ ಕಾರ್ಯಕ್ರಮದಲ್ಲಿ ಭಜರಂಗದಳ ಮುಖಂಡ ಶರಣ್​ ಪಂಪ್​ವೆಲ್​ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಮೊದಲು ಪ್ರಾರ್ಥನೆ ಮೂಲಕ ತಾಂಬೂಲ ಹಸ್ತಾಂತರ ಮಾಡಿ ಬಳಿಕ ಜ್ಯೋತಿಷಿಗಳ ಬಳಿ ತಾಂಬೂಲದಲ್ಲಿ ತಿಳಿದುಬಂದ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲಾಯ್ತು.

ಒಂದೊಂದೇ ತಾಂಬೂಲಗಳ ವಿಶೇಷಣಗಳನ್ನು ಉಲ್ಲೇಖಿಸುತ್ತಾ ಹೋದ ಜ್ಯೋತಿಷಿ ಪೊದುವಾಳ್‌ ಗೋಪಾಲಕೃಷ್ಣ ಪಣಿಕ್ಕರ್​, ವಿವಾದಿತ ಸ್ಥಳದ ಉತ್ತರ ಧಿಕ್ಕಿನಲ್ಲಿ ಹಿಂದೆ ದೇವಸ್ಥಾನವಿರುವ ಕುರುಹು ಪತ್ತೆಯಾಗಿದೆ. ಈ ಮಸೀದಿ ಜಾಗದಲ್ಲಿ (temple in the malali mosque)ಹಿಂದೆ ಶಿವ ಸಾನಿಧ್ಯವಿತ್ತು. ಆದರೆ ವೈಷ್ಣವರು ಹಾಗೂ ಶೈವರ ನಡುವಿನ ಕಲಹದಿಂದ ಈ ದೇವಾಲಯ ನಾಶವಾಗಿರಬಹುದು. ಇಲ್ಲಿಂದ ದೇವರನ್ನು ತೆಗೆದುಕೊಂಡು ಹೋಗಿ ಬೇರೆಯ ಸ್ಥಳದಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಅಲ್ಲಿ ನಡೆದ ಪೂಜೆಯಿಂದ ಇಲ್ಲಿ ತನ್ನ ಸಾನಿಧ್ಯವನ್ನು ತೋರಿಸಿದೆ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು. ನಾವು ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ದೇವರಿದ್ದಾರೆ. ಮಳಲಿ ಮಸೀದಿಯಲ್ಲಿ ದೇವರು ಇರುವುದು ನಿಜ ಎಂದು ಹೇಳಿದ್ದಾರೆ.

ಈ ಸಾನಿಧ್ಯ ಈಗ ಪುನರ್​‌ ಪ್ರತಿಷ್ಠಾಪನೆಯಾಗಲೇಬೇಕು. ಇದಕ್ಕೆ ಈಗ ಈ ಸ್ಥಳ ಯಾರ ಬಳಿ ಇದೆ ಅವರು ಇದಕ್ಕೆ ಸಹಕಾರ ನೀಡಬೇಕು. ಇದು ಆ ಸ್ಥಳದಲ್ಲಿ ಇರುವವರ ಜವಾಬ್ದಾರಿಯಾಗಿದೆ. ಈ ಸ್ಥಳದಲ್ಲಿ ಇದೀಗ ದೈವಾನುಗ್ರಹ ಬಂದಿದೆ. ಆ ಸ್ಥಳದಲ್ಲಿ ಪುನರ್‌ ಪ್ರತಿಷ್ಠೆ ಕಾರ್ಯ ನಡೆಯದೇ ಇದ್ರೆ ಊರಿಗೆ ಅಪಾಯವಿದೆ ಎಂದಿದ್ದಾರೆ. ಈ ಸ್ಥಾನ ಹಿಂದೂಗಳಿಗೆ ಸಿಗುವ ಯೋಗವಿದೆ. ಈ ವಿಚಾರದಲ್ಲಿ ಎಲ್ಲರೂ ಸಮಾಧಾನದಿಂದ ಮುಂದುವರಿಯಬೇಕು. ಇಲ್ಲವಾದಲ್ಲಿ ಇಡೀ ಊರಿಗೆ ಕೆಡುಕು ಉಂಟಾಗಲಿದೆ. ಹಿಂದೂಗಳ ಪ್ರಯತ್ನಕ್ಕೆ ಖಂಡಿತವಾಗಿಯೂ ಫಲ ಸಿಗಲಿದೆ ಎಂದು ಹೇಳಿದ್ದಾರೆ.

temple in the malali mosque : ತಾಂಬೂಲ ಪ್ರಶ್ನೆಯಲ್ಲಿ ಪತ್ತೆಯಾಗಿದ್ದೇನು ?

ಮಳಲಿಯಲ್ಲಿರುವ ವಿವಾದಿತ ಮಸೀದಿಯ ಜಾಗದಲ್ಲಿ ಶಿವ ಸಾನಿಧ್ಯದ ಜೊತೆಗೆ ದೇವಿ ಸಾನಿಧ್ಯವೂ ಇದೆ ಅನ್ನೋ ಮಾಹಿತಿ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಿದೆ. ವಿವಾದಿತ ಸ್ಥಳದ ಉತ್ತರ ಧಿಕ್ಕಿನಲ್ಲಿರುವ ಎತ್ತರದ ಸ್ಥಳದಲ್ಲಿ ಮಹಾ ಪುರುಷನೋರ್ವ ತಪಸ್ಸನ್ನು ಮಾಡಿದ್ದಾರೆ. ಅಲ್ಲದೇ ಸಮೀಪದಲ್ಲಿರುವ ಲಿಂಗಾಯಿತ ಮಠಕ್ಕೂ ಹಾಗೂ ವಿವಾದಿತ ಜಾಗಕ್ಕೂ ಸಂಬಂಧವಿದೆ. ವಿವಾದಿತ ಸ್ಥಳದಲ್ಲಿ ದೇವಾರಾಧನೆ ನಡೆಯುತ್ತಲೇ ಇದೆ. ಶಿವ ಸಾನಿಧ್ಯ ಶೀಘ್ರದಲ್ಲಿಯೇ ಹಿಂದೂಗಳ ಕೈ ಸೇರಲಿದೆ. ವಿವಾದಿತ ಸ್ಥಳದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವ ಸಲುವಾಗಿ ಅಷ್ಟಮಂಗಲ ಪ್ರಶ್ನಾ ಚಿಂತನೆಯನ್ನು ಇರಿಸುವ ಕುರಿತು ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್‌ ಅವರು ಸೂಚನೆಯನ್ನು ನೀಡಿದ್ದಾರೆ.

ಇದನ್ನು ಓದಿ : tamboola prashne : ಮಳಲಿ ಮಸೀದಿಯಲ್ಲಿ ಹಿಂದೂ ದೇಗುಲ ಕುರುಹು ಪತ್ತೆ ವಿವಾದ : ತಾಂಬೂಲ ಪ್ರಶ್ನೆ

ಇದನ್ನೂ ಓದಿ : young woman raped : ತಲೆಗೆ ಗನ್​ಪಾಯಿಂಟ್​ ಇಟ್ಟು ಯುವತಿ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ

the famous astrologer said that there was a temple in the malali mosque

Comments are closed.