ಅಮೆರಿಕ : us shootout : ಅಮೆರಿಕದಲ್ಲಿ ಮೇ ತಿಂಗಳಲ್ಲಿ ಬಂದೂಕುಧಾರಿಯೊಬ್ಬ ಟೆಕ್ಸಾಸ್ನ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆಸಿ 21 ಮಂದಿ ಸಾವಿಗೆ ಕಾರಣನಾದ ಘಟನೆಯು ಇನ್ನು ಮಾಸುವ ಮುನ್ನವೇ ಇದೀಗ ಮತ್ತೊಂದು ಗುಂಡಿನ ದಾಳಿ ಸಂಭವಿಸಿದೆ. ಅಮೆರಿಕದ ಇಂಡಿಯಾನದ ಗ್ರೀನ್ವುಡ್ ಪಾರ್ಕ್ನ ಮಾಲ್ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು ಬಂದೂಕು ಧಾರಿ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಮೆರಿಕದ ಪ್ರಮುಖ ನಗರಗಳಲ್ಲಿ ಈ ರೀತಿ ಪದೇ ಪದೇ ಗುಂಡಿನ ದಾಳಿ ನಡೆಯುತ್ತಿರುವುದು ಇಲ್ಲಿ ಭದ್ರತೆಯನ್ನು ಪ್ರಶ್ನಿಸುವಂತಾಗಿದೆ.
ಭಾನುವಾರ ರಾತ್ರಿ ಬಂದೂಕು ಹಾಗೂ ಮದ್ದುಗುಂಡುಗಳು ಮ್ಯಾಗ್ಜಿನ್ ಹೊಂದಿದ್ದ ವ್ಯಕ್ತಿಯು ಗ್ರೀನ್ವುಡ್ನ ಪಾರ್ಕ್ ಮಾಲ್ನ ಫುಡ್ ಕೋರ್ಟ್ಗೆ ನುಗ್ಗಿ ಗುಂಡು ಹಾರಿಸಿದ್ದಾನೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರೆ ಮೂವರು ಗಾಯಗೊಂಡಿದ್ದಾರೆ. ಈ ವೇಳೆ ನಾಗರಿಕ ಬಂದೂಕು ಧಾರಿಯ ಮೇಲೆ ಗುಂಡು ಹಾರಿಸಿದ್ದು ಆತ ಕೂಡ ಸಾವನ್ನಪ್ಪಿದ್ದಾನೆ ಎಂದು ಗ್ರೀನ್ವುಡ್ ಪಾರ್ಕ್ ಮಾಲ್ನ ಆಡಳಿತ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಗ್ರೀನ್ವುಡ್ ಪಾರ್ಕ್ ಮಾಲ್ನ ರೆಸ್ಟ್ ರೂಮ್ನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಈ ಬಗ್ಗೆ ಇಂಡಿಯಾನಾ ಪೊಲೀಸ್ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ತನಿಖೆ ಕೈಗೆತ್ತಿಕೊಂಡಿದೆ. ಈವರೆಗೆ ಯಾರೂ ಈ ಗುಂಡಿನ ದಾಳಿಯ ಹೊಣೆ ಹೊತ್ತಿಲ್ಲ. ಹೀಗಾಗಿ ಗುಂಡಿನ ದಾಳಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಅಮೆರಿಕದಲ್ಲಿ ಪದೇ ಪದೇ ಗುಂಡಿನ ದಾಳಿಯ ಘಟನೆಗಳು ವರದಿಯಾಗುತ್ತಿದೆ. ಮೇ ತಿಂಗಳಲ್ಲಿ ಟೆಕ್ಸಾಸ್ನ ಉವಾಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ 18 ಮಕ್ಕಳು ಹಾಗೂ ಮೂವರು ಸಿಬ್ಬಂದಿ ಸೇರಿ 21 ಮಂದಿ ಸಾವನ್ನಪ್ಪಿದ್ದರು ಹಾಗೂ 17 ಮಂದಿ ಗಾಯಗೊಂಡಿದ್ದರು.
ಇದನ್ನು ಓದಿ : Suryakumar Yadav Success :ಸೂರ್ಯಕುಮಾರ್ ಯಾದವ್ ಯಶಸ್ಸಿನ ಹಿಂದೆ ರೋಹಿತ್ ಶರ್ಮಾ ಪಾತ್ರ ; ರಹಸ್ಯ ಬಿಚ್ಚಿಟ್ಟ SKY !
ಇದನ್ನೂ ಓದಿ : Virat Kohli England tour : 6 ಇನ್ನಿಂಗ್ಸ್ 76 ರನ್, ಕೊಹ್ಲಿ ಇಂಗ್ಲೆಂಡ್ ಟೂರ್ ನಿರಾಶಾದಾಯಕ ಅಂತ್ಯ
us shootout four dead three injured in indianas greenwood park mall