ಲಂಡನ್: (Video viral- 47M views) ವ್ಯಕ್ತಿಯೊಬ್ಬ ರೈಲಿನಿಂದ ಇಳಿದು ಮುಂದಿನ ನಿಲ್ದಾಣದಲ್ಲಿ ಅದೇ ರೈಲನ್ನು ಹತ್ತಲು ಓಡುವ ದೃಶ್ಯದ ಹಳೇ ವಿಡಿಯೋ ಇದೀಗ ವೈರಲ್ ಆಗಿದ್ದು, ಬರೋಬ್ಬರಿ 47 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸದ್ಯ ಐದು ವರ್ಷಗಳ ಹಿಂದಿನ ಹಳೆಯ ರೋಮಾಂಚನಕಾರಿ ವಿಡಿಯೋ ಇದೀಗ ಟ್ವಿಟರ್ ನಲ್ಲಿ ವೈರಲ್ ಆಗಿದ್ದು, 47 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದಲ್ಲದೇ, ವ್ಯಕ್ತಿಗೆ ಮೆಚ್ಚುಗೆಯ ಸಂದೇಶಗಳು ಕೂಡ ವ್ಯಕ್ತವಾಗುತ್ತಿವೆ.
ವೈರಲ್ ಆಗಿದ್ದ ಹಳೆಯ 1-ನಿಮಿಷದ ಈ ವಿಡಿಯೋ(Video viral- 47M views)ದಲ್ಲಿ, ಲಂಡನ್‌ನ ಮ್ಯಾನ್ಷನ್ ಹೌಸ್ ಮೆಟ್ರೋ ನಿಲ್ದಾಣದಲ್ಲಿ ಸುರಂಗಮಾರ್ಗದ ಮೂಲಕ ಹೋಗುವ ರೈಲಿನಿಂದ ಇಳಿದ ಓರ್ವ ವ್ಯಕ್ತಿ ಮುಂದಿನ ನಿಲ್ದಾಣದಲ್ಲಿ ಅದೇ ರೈಲನ್ನು ಹತ್ತಲು ಓಡುತ್ತಿದ್ದು, ವೇಗವಾಗಿ ಓಡಿ ಮುಂದಿನ ನಿಲ್ದಾಣವಾದ ಕ್ಯಾನ್ಸನ್ ಸ್ಟ್ರೀಟ್ ನಲ್ಲಿದ್ದ ಅದೇ ರೈಲನ್ನು ಹತ್ತುವ ಅದ್ಭುತ ಹಾಗೂ ರೋಮಾಂಚನಕಾರಿ ದೃಶ್ಯ ಸೆರೆಯಾಗಿದೆ. ಅವರ ಈ ರೀತಿಯ ಹುಚ್ಚು ಸಾಹಸವನ್ನು ಮೆಚ್ಚಿ ಪ್ರಯಾಣಿಕರು ಉತ್ಸಾಹ ಚಕಿತರಾಗಿ ಚಪ್ಪಾಳೆಯ ಸುರಿಮಳೆ ಸುರಿಸಿದ್ದು, ಇದೀಗ ಈ ಕ್ರೇಜಿ ವಿಡಿಯೋ ಎಲ್ಲಡೆ ವೈರಲ್ ಆಗಿದೆ. ಬಾಡಿ ಕ್ಯಾಮೆರಾದ ಮೂಲಕ ಓರ್ವ ವ್ಯಕ್ತಿ ತಾನು ಓಡುವ ದೃಶ್ಯವನ್ನು ಸೆರೆ ಹಿಡಿದಿದ್ದರೆ, ಇನ್ನೋರ್ವ ವ್ಯಕ್ತಿ ಆತ ಹಿಡಿಯಲು ಬಯಸಿದ್ದ ಅದೇ ರೈಲಿನ ಚಲನವಲನಗಳನ್ನು ಸೆರೆ ಹಿಡಿದಿದ್ದಾನೆ.
ವೈರಲ್ ಅಗಿರುವ ಈ ವಿಡಿಯೋ 2017 ರಲ್ಲಿ ಪೆಪೋ ಜಿಮೆನೆಜ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಐದು ವರ್ಷಗಳ ಹಳೆಯ ವಿಡಿಯೋ ಈಗ ವೈರಲ್ ಆಗಿದೆ. ಅಲ್ಲದೇ ರೋಬ್ಬರಿ 47 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡು, ಕಾಮೆಂಟ್ ವಿಭಾಗದಲ್ಲಿ ಟ್ವಿಟರ್ ಬಳಕೆದಾರರಿಂದ ಪ್ರತಿಕ್ರಿಯೆಗಳ ಸುರಿಮಳೆ ಸುರಿಯುತ್ತಿದೆ.
ಇದನ್ನೂ ಓದಿ : Human skulls in courier: ಕೊರಿಯರ್ ಬಾಕ್ಸ್ ನಲ್ಲಿ ಪತ್ತೆಯಾಯ್ತು ಮಾನವನ ನಾಲ್ಕು ತಲೆಬುರುಡೆ
ಇದನ್ನೂ ಓದಿ : Russian Missiles Strike: ಉಕ್ರೇನ್ ಮೇಲೆ ಮತ್ತೆ ಕ್ರೌರ್ಯ ಮೆರೆದ ರಷ್ಯಾ: ಏಕಕಾಲಕ್ಕೆ 120 ಕ್ಷಿಪಣಿಗಳ ದಾಳಿ
While one man captured the scene of himself running through a body camera, another captured the movements of the same train he wanted to capture.