BBK9 Grand Finale : ಬಿಗ್ ಬಾಸ್ ಸೀಸನ್ 9 ಅನ್ನು ಗೆದ್ದ ರೂಪೇಶ್ ಶೆಟ್ಟಿ ಗಳಿಸಿದ ಹಣವೆಷ್ಟು ಗೊತ್ತಾ ?

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್‌ 9 (BBK9 Grand Finale) ಯಶಸ್ವಿಯಾಗಿ ಮುಗಿದಿದೆ. 18 ಮಂದಿ ಸ್ಪರ್ಧಿಗಳ ನಡುವೆ ಪ್ರಬಲ ಪೈಪೋಟಿ ಕೊಟ್ಟು, ಬಿಗ್ ಬಾಸ್ ಮನೆಯಲ್ಲಿ ಕೊನೆಗೆ ಐದು ಮಂದಿ ಉಳಿದುಕೊಂಡಿದ್ದರು. ಕೊನೆಯ ಐವರು ಮಂದಿಯಲ್ಲಿ ಗೆಲ್ಲೋದ್ಯಾರು? ಅನ್ನೋದು ಎಲ್ಲರಲ್ಲೂ ಕುತೂಹಲ ಕೆರಳಿಸಿತ್ತು. ಆದರೆ ಇತ್ತೀಚೆಗೆ ರೂಪೇಶ್‌ ಶೆಟ್ಟಿ ಗೆಲುವು ಸಾಧಿಸುವ ಎಲ್ಲಾ ಸಾಧ್ಯತೆ ಎಂದು ಎಲ್ಲೆಡೆ ಊಹಾಪೋಹಗಳು ಹರಿದಾಡಿದ್ದವು. ಅದರಂತೆ ಕರಾವಳಿ ಹುಡುಗ ರೂಪೇಶ್‌ ಶೆಟ್ಟಿ ಕನ್ನಡ ಬಿಗ್ ಬಾಸ್ ಸೀಸನ್ 9ರ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ.

ಐವರು ಮಂದಿಯಲ್ಲಿ ಮೊದಲು ದಿವ್ಯಾ ಉರುಡುಗ ದೊಡ್ಮನೆಯಿಂದ ಹೊರ ನಡೆದ್ದರು. ಉಳಿದ ನಾಲ್ಕು ಮಂದಿಗಳಲ್ಲಿ ಕೊನೆಯಲ್ಲಿ ಉಳಿದುಕೊಂಡವರು ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ. ಇವರಿಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ರಾಕೇಶ್ ಅಡಿಗವನ್ನು ಹಿಂದಿಕ್ಕಿ ಬಿಗ್ ಬಾಸ್ ಕಿರೀಟವನ್ನು ರೂಪೇಶ್ ಶೆಟ್ಟಿ ಮುಡಿಗೇರಿಸಿಕೊಂಡಿದ್ದಾರೆ.

ರೂಪೇಶ್ ಶೆಟ್ಟಿ ಓಟಿಟಿಯಿಂದ ಇಲ್ಲಿವರೆಗೂ ಜರ್ನಿಯನ್ನು ಮುಂದುವರೆಸಿಕೊಂಡು ಬಂದಿದ್ದರು. ಆರಂಭದಿಂದಲೂ ರೂಪೇಶ್ ಶೆಟ್ಟಿ ಫುಲ್ ಆಕ್ಟಿವ್ ಹಾಗೂ ಟಫ್‌ ಕಾಂಪಿಟೇಷನ್‌ ಸ್ಪರ್ಧಿ ಆಗಿದ್ದರು. ಹಾಗೇ ಬಿಗ್ ಬಾಸ್ ಮನೆಯಲ್ಲಿ ಏರಿಳಿತಗಳನ್ನು ಕಂಡಿದ್ದು, ಒಮ್ಮೊಮ್ಮೆ ಟಾಸ್ಕ್‌ನಲ್ಲಿ ಗೆದ್ದು ಬೀಗಿದ್ದರು. ಅಷ್ಟೇ ಅಲ್ಲದೇ ಕೆಲವೊಮ್ಮೆ ಸೋತು ಸೆಪ್ಪೆಯಾಗಿದ್ದರು. ಏನೇ ಇದ್ದರೂ ಮತ್ತೆ ಚೇತರಿಸಿಕೊಂಡು ಆಟದಲ್ಲಿ ಭಾಗಿಯಾಗಿದ್ದರು. ಈಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಮನೆಯಿಂದ ಹೊರಬಂದಿದ್ದಾರೆ.

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಜೋಡಿ ಓಟಿಟಿ ಹಾಗೂ ಸೀಸನ್ 9 ಎರಡರಲ್ಲೂ ಗಮನ ಸೆಳೆದಿತ್ತು. ಸಾನ್ಯಾ ಹೊರ ಹೋಗುತ್ತಿದ್ದಂತೆ ರೂಪೇಶ್ ಶೆಟ್ಟಿ ಡಲ್ ಆಗಬಹುದು ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ ಆ ಎಲ್ಲಾ ಊಹೆಗಳನ್ನೂ ತಪ್ಪು ಎಂದು ಸಾಬೀತು ಮಾಡಿದ್ದರು. ರಾಕೇಶ್ ಅಡಿಗಗೆ ಓಟಿಟಿ ಹಾಗೂ ಸೀಸನ್ 9 ಎರಡರಲ್ಲೂ ರೂಪೇಶ್ ಶೆಟ್ಟಿ ಪೈಪೋಟಿ ನೀಡಿರೋದು ಬಹಳ ವಿಶೇಷವಾಗಿದೆ. ಕರಾವಳಿ ಭಾಗದ ಪ್ರತಿಭೆ ಎರಡೂ ಪ್ರಕಾರಗಳಲ್ಲೂ ಗೆದ್ದು ಬೀಗಿದ್ದಾರೆ.

ರೂಪೇಶ್ ಶೆಟ್ಟಿ ಬಿಗ್ ಬಾಸ್ ಗೆದ್ದಿದ್ದಕ್ಕೆ 60 ಲಕ್ಷ ರೂಪಾಯಿ ಅವರ ಪಾಲಾಗಿದೆ. 50 ಲಕ್ಷ ರೂಪಾಯಿ ಬಿಗ್ ಬಾಸ್ ಕಡೆಯಿಂದ ಹಾಗೂ 10 ಲಕ್ಷ ರೂಪಾಯಿ ವಿಶೇಷ ಸ್ಪಾನ್ಸರ್ಸ್‌ನಿಂದ ಸಿಕ್ಕಿರುತ್ತದೆ. ಆದರೆ ಶೇ.30ರಷ್ಟು ತೆರಿಗೆ ಹಣ ಕಡಿತಗೊಂಡು 42 ಲಕ್ಷ ರೂಪಾಯಿ ರೂಪೇಶ್ ಶೆಟ್ಟಿ ಜೇಬು ಸೇರಲಿದೆ. ಇದು ಕೂಡ ದೊಡ್ಡ ಮೊತ್ತವವೇ ಆಗಿದ್ದು, ಸೀಸನ್ ಉದ್ದಕ್ಕೂ ತಾಳ್ಮೆಯನ್ನೇ ಪ್ರದರ್ಶಿಸಿದ್ದ ರಾಕೇಶ್‌ ಅಡಿಗಗೆ ಕೊಂಚ ಹಿನ್ನೆಡೆಯಾಗಿದೆ.

ಇದನ್ನೂ ಓದಿ : Kannada Bigg Boss Season 9 : ಕನ್ನಡ ಬಿಗ್‌ಬಾಸ್‌ ಸೀಸನ್‌ 9 ಗ್ಯ್ರಾಂಡ್‌ ಫಿನಾಲೆ : ಯಾರಾಗ್ತಾರೆ ವಿನ್ನರ್‌ ?

ಇದನ್ನೂ ಓದಿ : Tunisha Sharma death case : ಶೀಜಾನ್ ಖಾನ್ 14 ದಿನಗಳ ನ್ಯಾಯಾಂಗ ಬಂಧನ : ಖಾನ್‌ ಷರತ್ತುಗಳು ಏನು ಗೊತ್ತಾ ?

ಬಿಗ್ ಬಾಸ್ ಕನ್ನಡ ಓಟಿಟಿಯಿಂದಲೂ ರೂಪೇಶ್ ಶೆಟ್ಟಿ ಗಮನ ಸೆಳೆದಿದ್ದರು. ರೂಪೇಶ್ ಶೆಟ್ಟಿ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಮಾಡುವುದಕ್ಕೂ ಮುನ್ನ ಸಿನಿಮಾವೊಂದರಲ್ಲಿ ನಟಿಸಿದ್ದರು. ಅದೇ ‘ಮಂಕು ಭಾಯ್ ಫಾಕ್ಸಿ ರಾಣಿ’. ಈ ಸಿನಿಮಾ ರೂಪೇಶ್ ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಪ್ರಚಾರವನ್ನು ಶುರುಮಾಡಿದ್ದು, ಬಿಗ್‌ಬಾಸ್ ಪ್ರವೇಶ ಮಾಡಿದ ಬಳಿಕ ಜನಪ್ರಿಯತೆ ಸಿಕ್ಕಿದ್ದು, ಸಿನಿಮಾ ಬಿಡುಗಡೆಯಲ್ಲಿ ಭಾಗಿಯಾಗಲಿದ್ದಾರೆ.

BBK9 Grand Finale: Do you know how much money Rupesh Shetty earned after winning Bigg Boss season 9?

Comments are closed.