ಜಿನೆವಾ : ಭಾರತದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಗ್ಗಿದೆ. ಜನರು ನೆಮ್ಮದಿಯ ನಿಟ್ಟುಸಿರು ಬಿಡುವ ಹೊತ್ತಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಆಘಾತಕಾರಿ ಮಾಹಿತಿಯನ್ನು ನೀಡಿದೆ. ಡೆಲ್ಟಾ ರೂಪಾಂತರಿ ತಳಿ ಅತ್ಯಂತ ಅಪಾಯಕಾರಿ ಘಟ್ಟದಲ್ಲಿದೆ ಎಂದಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನೋಮ್ ಘೇಬ್ರಿಯೇಸಸ್ ಅವರು ಡೆಲ್ಟಾ ವೈರಸ್ ಕುರಿತು ಮಾಹಿತಿಯನ್ನು ನೀಡಿದ್ದಾರೆ. ದಿನೇದಿನೇ ಡೆಲ್ಟಾ ವೈರಸ್ ಸೋಂಕು ರೂಪಾಂತರ ಹೊಂದುತ್ತಿದೆ. ಕಡಿಮೆ ಲಸಿಕೆ ನೀಡಿದ ದೇಶಗಳಲ್ಲಿ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಡೆಲ್ಟಾ ವೈರಸ್ ರೂಪಾಂತರಿ ತಳಿಯ ಹೊಡೆತದಿಂದ ಇನ್ನೂ ಯಾವುದೇ ದೇಶ ಹೊರಬಂದಿಲ್ಲ. ವಿಶ್ವದ 98 ದೇಶಗಳಲ್ಲಿ ಡೆಲ್ಟ್ ಶರವೇಗದಲ್ಲಿ ಹರಡುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಡೆಲ್ಟಾ ವೈರಸ್ ಕುರಿತು ಹೆಚ್ಚು ಸುರಕ್ಷತೆಯನ್ನು ದೇಶಗಳು ಅಳವಡಿಸಿ ಕೊಳ್ಳಬೇಕು. ಡೆಲ್ಟಾ ಸೋಂಕು ಪತ್ತೆ, ಸಂಪರ್ಕ ಪತ್ತೆ, ಐಸೋಲೇಶನ್ ಜೊತೆಗೆ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕು. ಅಲ್ಲದೇ ಕಡ್ಡಾಯವಾಗಿ ಜನರು ಮಾಸ್ಕ್ ಧರಿಸಬೇಕು ಅಲ್ಲದೇ ಸಾಮಾಜಿಕ ಅಂತರವನ್ನು ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕು ಹಾಗೂ ಡೆಲ್ಟಾ ವೈರಸ್ ಸೋಂಕಿನ ನಿಯಂತ್ರಣಕ್ಕಾಗಿ ಶೀಘ್ರವಾಗಿ ದೇಶಗಳು ಶೇ.70ರಷ್ಟು ಜನರಿಗೆ ಲಸಿಕೆಯನ್ನು ನೀಡುವ ಕಾರ್ಯ ಮಾಡಬೇಕು. ಅಲ್ಲದೇ ಕಡ್ಡಾಯ ವಾಗಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.