ಇರಾನ್ : Iranian security forces : ಇರಾನ್ನಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಉಗ್ರ ಪ್ರತಿಭಟನೆಗಳು ನಡೆಯುತ್ತಿದ್ದು ಇರಾನ್ನ ಭದ್ರತಾ ಪಡೆಗಳು 20 ವರ್ಷದ ಯುವತಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೃತಪಟ್ಟ ಹಾಡಿಸ್ ನಜಾಫಿ- ಗಾಯನ ಹಾಗೂ ನೃತ್ಯವನ್ನು ತುಂಬಾನೇ ಇಷ್ಟಪಡುತ್ತಿದ್ದ ಯುವತಿ ಎಂದು ಆಕೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಹಾಡಿಸ್ ನಜಾಫಿ ದೇಶದಲ್ಲಿ ಜಾರಿಯಾಗಿರುವ ಕಟ್ಟು ನಿಟ್ಟಿನ ಹಿಜಾಬ್ ಕಾನೂನಿನ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ಬೀದಿಗಿಳಿದಿದ್ದಳು.
ಕರಾಜಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ತಯಾರಾಗುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಬುಲೆಟ್ನಿಂದ ಹೊರಬಂದ ಆರು ಗುಂಡುಗಳು ಹಾಡಿಸ್ ನಜಾಫಿ ದೇಹವನ್ನು ಸೀಳಿದ್ದು ತೀವ್ರ ರಕ್ತಸ್ರಾವದಿಂದ ಆಕೆ ಸಾವನ್ನಪ್ಪಿದ್ದಾಳೆ . ಟಿಕ್ಟಾಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಫೇಮಸ್ ಆಗಿರುವ ಹಾಡಿಸ್ ನಜಾಫಿಯ ಎದೆ, ಮುಖ, ಕೈ ಹಾಗೂ ಕುತ್ತಿಗೆ ಭಾಗಕ್ಕೆ ಭದ್ರತಾ ಅಧಿಕಾರಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ಹಡಿಸ್ ಯಾವುದೇ ಹಿಜಾಬ್ ಧರಿಸದೇ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇರಾನ್ನ ಪೊಲೀಸರು ಹಾಗೂ ಭದ್ರತಾ ಪಡೆಗಳು ಹಿಜಾಬ್ ಸಂಬಂಧಿ ಕಾನೂನಿನ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರ ಮೇಲೆ ಕ್ರೂರ ದಬ್ಬಾಳಿಕೆ ನಡೆಸುತ್ತಿದೆ. ಗಂಭೀರವಾಗಿ ಗಾಯಗೊಂಡಿದ್ದ ಘೇಮ್ರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಲಾಗಿದೆ.
ಇದನ್ನು ಓದಿ : Team India arrives in Thiruvananthapuram: ಸಂಜು ಸ್ಯಾಮ್ಸನ್ ನಾಡಿಗೆ ಬಂದಿಳಿದ ಟೀಮ್ ಇಂಡಿಯಾಗೆ ಭರ್ಜರಿ ವೆಲ್ ಕಮ್
ಇದನ್ನೂ ಓದಿ : Kamal Nath:‘ಕಾಂಗ್ರೆಸ್ ಅಧ್ಯಕ್ಷನಾಗಲು ನನಗೆ ಯಾವುದೇ ಆಸಕ್ತಿಯಿಲ್ಲ’ : ಮಾಜಿ ಸಿಎಂ ಕಮಲನಾಥ್ ಸ್ಪಷ್ಟನೆ
Woman, 20, dies after being shot six times by Iranian security forces during protest