Navratri : ನವರಾತ್ರಿ : ಎರಡನೇ ದಿನ ಬ್ರಹ್ಮಚಾರಿಣಿ ಆರಾಧನೆ

ಮೈಸೂರು : ದೇಶದಾದ್ಯಂತ (Navratri Brahmacharini) ನವರಾತ್ರಿಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತಿದೆ. ಅರಮನೆ ನಗರಿ ಮೈಸೂರಿನಲ್ಲಿ ನಾಡಹಬ್ಬ ಅದ್ದೂರಿಯಾಗಿ ನಡೆಯುತ್ತಿದೆ. ದಸರಾ ಮಹೋತ್ಸವವು 10 ದಿನಗಳ ಕಾಲ ನಡೆಯಲಿದ್ದು, ನವರಾತ್ರಿಯೂ ವೈಭವಯುತವಾಗಿ ಕಾರ್ಯಕ್ರಮಗಳು ನಡೆಯಲಿದ್ದು, ವಿಜಯದಶಮಿಯ ದಿನದಂದು ಮುಕ್ತಾಯಗೊಳ್ಳಲಿದೆ. ಒಂಬತ್ತು ದಿನಗಳ ಕಾಲ ಆದಿಶಕ್ತಿಯನ್ನು ಒಂದೊಂದು ರೂಪದಲ್ಲಿ ಪೂಜಿಸಿ ಆರಾಧಿಸುತ್ತಾರೆ.

(Navratri) ನವರಾತ್ರಿಯ ಮೊದಲನೇ ದಿನ ಅಂದರೆ ಪಾಡ್ಯದ ದಿನವಾಗಿದ್ದು, ಆದಿಶಕ್ತಿಯನ್ನು ಯೋಗನಿದ್ರಾ ದುರ್ಗಾಪೂಜೆಯನ್ನು ಶೈಲಪುತ್ರಿ ರೂಪದಲ್ಲಿ ಆರಾಧಿಸಿ ಪೂಜಿಸಲಾಗಿತ್ತು. ಇಂದು ಎರಡನೇ ದಿನ ಅಂದರೆ ಬಿದಿಗೆ ದಿನ ದೇವಜಾತ ದುರ್ಗಾಪೂಜೆಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಆರಾಧಿಸುತ್ತಾರೆ. ಬ್ರಹ್ಮಚಾರಿಣಿ ರೂಪದಲ್ಲಿ ದೇವಿಯು ಬಿಳಿಬಟ್ಟೆಗಳನ್ನು ಧರಿಸಿ, ಒಂದು ಕೈಯಲ್ಲಿ ರುದ್ರಾಕ್ಷಿಮಾಲೆ ಹಾಗೂ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿರುತ್ತಾಳೆ. ಆದಿಶಕ್ತಿಯು ಬ್ರಹ್ಮಚಾರಿಣಿ ರೂಪದಲ್ಲಿ ಅಪಾರ ಜ್ಞಾನಶಕ್ತಿಯನ್ನು ಹೊಂದಿದ್ದು, ಕುವರಿಯಾಗಿರುತ್ತಾಳೆ. ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸುವುದ್ದರಿಂದ ಜ್ಞಾನಶಕ್ತಿ, ಮನಸ್ಸಿಗೆ ಶಾಂತಿ ಹಾಗೂ ಆತ್ಮವಿಶ್ವಾಸವು ದೊರಕುವುದು ಎನ್ನಲಾಗಿದೆ.

ಪುರಾಣಗಳ ಪ್ರಕಾರ, ಆದಿಶಕ್ತಿಯು ಶಿವನನ್ನು ಮದುವೆಯಾಗಲು ನಿರ್ಧರಿಸುತ್ತಾಳೆ. ಆದರೆ ಅವಳ ತಂದೆ – ತಾಯಿ ನಿರಾಕರಿಸಿ ಅವಳನ್ನು ನಿರುತ್ಸಾಹಗೊಳಿಸುತ್ತಾರೆ. ಆದರೆ ಅವಳು ಸುಮಾರು ಐದು ಸಾವಿರ ವರ್ಷಗಳ ಕಾಲ ತಪಸ್ಸುನ್ನು ಕೈಗೊಳ್ಳುತ್ತಾಳೆ. ಆವೇಳೆಯಲ್ಲಿ ಚಿಗುರು ಎಲೆ, ಹಣ್ಣು ಹಾಗೂ ಹೂಗಳನ್ನು ಮಾತ್ರ ಸೇವಿಸಿಕೊಂಡು ಇರುತ್ತಾಳೆ. ಪಾರ್ವತಿದೇವಿಯು ಕೈಗೊಂಡ ಈ ಕಠಿಣ ತಪ್ಪಸಿನಿಂದಲೇ ಬ್ರಹ್ಮಚಾರಿಣಿ ಎಂಬ ಹೆಸರನ್ನು ಪಡೆಯುತ್ತಾಳೆ. ಇದೆಲ್ಲದರ ಫಲವಾಗಿ ಶಿವನೂ ಪಾರ್ವತಿದೇವಿಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ.

ಇದನ್ನೂ ಓದಿ : ನಾಡಹಬ್ಬ ಮೈಸೂರು ದಸರಾ ಚಾಲನೆಗೆ ಕ್ಷಣಗಣನೆ

ಇದನ್ನೂ ಓದಿ : ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬರಲಿದ್ದಾರೆ ನಟ ಕಿಚ್ಚ ಸುದೀಪ್

ಇದನ್ನೂ ಓದಿ : ಮೈಸೂರು ದಸರಾಕ್ಕೆ ಸಕಲ ಸಿದ್ದತೆ : ಸಂಸದ ಪ್ರತಾಪ್‌ ಸಿಂಹ ಪರಿಶೀಲನೆ

ಇದನ್ನೂ ಓದಿ : ಮೈಸೂರು ದಸರಾ : ಅರಮನೆ ನಗರಿಯಲ್ಲಿ 124 ಕಿ.ಮೀ ದೀಪಾಲಂಕಾರ

ನವರಾತ್ರಿಯ ಎರಡನೇ ದಿನ ದೇವಿಯ ಪೂಜೆಯಲ್ಲಿ ಬಿಳಿಬಣ್ಣದ ಹೂ ಹಾಗೂ ಶ್ರೀಗಂಧಗಳಿಂದ ಅಲಂಕರಿಸುತ್ತಾರೆ. ನೈವೇದ್ಯಯಲ್ಲಿ ಹಾಲು, ಅನ್ನ , ಮೊಸರು ಹಾಗೂ ಜೇನುತುಪ್ಪವನ್ನು ಅರ್ಪಿಸುತ್ತಾರೆ. ಈ ದಿನ ದೇವಿಯನ್ನು ಆರಾಧಿಸುವುದ್ದರಿಂದ ಮನಸ್ಸಿಗೆ ಶಾಂತಿ ಮತ್ತು ಸಂತೋಷವನ್ನು ಪ್ರಾಪ್ತಿಯಾಗಲಿದೆ ಎನ್ನುವ ನಂಬಿಕೆಯಿದೆ.

Brahmacharini is worshiped on the second day of Navratri

Comments are closed.