Ecuador Prison Blast : ಈಕ್ವೇಡಾರ್‌ ಜೈಲಿನಲ್ಲಿ ಸ್ಪೋಟ, 24 ಮಂದಿ ಸಾವು, 48 ಖೈದಿಗಳಿಗೆ ಗಾಯ

ಕ್ವಿಟೋ : ಈಕ್ವೆಡಾರ್‌ನ ಗಯಾಕ್ವಿಲ್‌ನ ಜೈಲಿನಲ್ಲಿ ಗ್ರೇನೆಡ್‌ ಸ್ಪೋಟಗೊಂಡು ಜೈಲಿನಲ್ಲಿದ್ದ 24ಖೈದಿಗಳು ಮೃತಪಟ್ಟಿದ್ದು, ೪೮ ಮಂದಿ ಗಾಯಗೊಂಡಿರುವ ಕುರಿತು ರಾಷ್ಟ್ರೀಯ ಕಾರಾಗೃಹಗಳ ಬ್ಯುರೋ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರೇನೆಡ್‌ ದಾಳಿಯಲ್ಲಿ ಮೃತಪಟ್ಟವರಲ್ಲಿ ಬಹುತೇಕರು ಮಾದಕ ವಸ್ತು ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂದಿತರಾಗಿದ್ದ ಆರೋಪಿಗಳು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಕಾರಾಗೃಹದಲ್ಲಿದ್ದ ಆರೋಪಿಗಳ ಕೈಯಲ್ಲಿದ್ದ ಬಂದೂಕು, ರಿವಾಲ್ವಾರ್‌ ಹಾಗೂ ೫೦೦ಕ್ಕೂ ಅಧಿಕ ಮದ್ದುಗುಂಡುಗಳನ್ನು ಜೈಲಿನ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಆದ್ರೆ ಜೈಲಿನಲ್ಲಿ ಗ್ರೇನೆಡ್‌ ಸ್ಪೋಟ ನಡೆಸಲಾಗಿದೆ. ಜೈಲಿನಿಂದ ಪರಾರಿಯಾಗುವ ಸಲುವಾಗಿ ಖೈದಿಗಳು ಈ ಸ್ಪೋಟ ನಡೆಸಿದ್ದಾರೆಯೇ ಅನ್ನೋ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಇನ್ನೊಂದೆಡೆಯಲ್ಲಿ ಈಕ್ವೇಡಾರ್‌ ಅಧ್ಯಕ್ಷ ಗಿಲ್ಲೆರ್ಮೊ ಲಾಸೋ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಿದ್ದಾರೆ.

ಇದನ್ನೂ ಓದಿ : ಕೊರೊನಾದಿಂದ ಇಳಿಕೆಯಾಗುತ್ತೆ ಆಯುಷ್ಯ ! ವಿಶ್ವಕ್ಕೇ ಶಾಕ್ ಕೊಟ್ಟ ಆಕ್ಸ್ ಫರ್ಡ್ ವಿವಿ ವರದಿ

ಇದನ್ನೂ ಓದಿ : ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ : ಸುಳ್ಳು ಹೇಳಿ ಸಿಕ್ಕಿ ಬಿದ್ದ ಪ್ರಧಾನಿ ಇಮ್ರಾನ್ ಖಾನ್

(At Least 24 dead in Ecuador Prison Ritos )

Comments are closed.