ಕಾಬೂಲ್: ಅಪ್ಘಾನಿಸ್ತಾನ ವಶಪಡಿಸಿಕೊಂಡಿರುವ ತಾಲಿಬಾನಿಗಳು ತಮ್ಮದೇ ಆಡಳಿತ ಯಂತ್ರ ಸ್ಥಾಪಿಸಿದ್ದು, ಮಹಿಳೆಯರ ಎಲ್ಲ ಹಕ್ಕು ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿದ್ದಾರೆ. ಮಧ್ಯೆ ತಾಲಿಬಾನಿಗಳು ವಿಧಿಸಿರುವ ವಸ್ತ್ರಸಂಹಿತೆ ವಿರುದ್ಧ ಅಪ್ಘಾನಿಸ್ತಾನ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದು, #DoNotTouchMyCloths (ಡೂನಾಟ್ ಟಚ್ ಮೈ ಕ್ಲಾಥ್) ಎಂಬ ಆನಲೈನ್ ಅಭಿಯಾನ ಆರಂಭಿಸಿದ್ದಾರೆ.

ಕಪ್ಪು ಬುರ್ಖಾ ಬದಲಿಗೆ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಟ್ಟ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುವ ಅಪ್ಘಾನಿಸ್ತಾನ್ ದ ಮಹಿಳೆಯರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ಇದು ಅಪ್ಘಾನಿಸ್ತಾನದ ಸಂಸ್ಕೃತಿ. ನಾನು ಅಪ್ಘಾನಿಸ್ತಾನದ ಸಾಂಪ್ರದಾಯಿಕ ದಿರಿಸು ಧರಿಸಿದ್ದೇನೆ ಎಂದು ಅಪ್ಘಾನಿಸ್ತಾನದ ಇತಿಹಾಸ ತಜ್ಞೆ ಡಾ.ಬಹಾರ್ ಜಲೀಲ ಟ್ವೀಟ್ ಮಾಡಿದ್ದಾರೆ. ಅಲ್ಲದೇ ತಮ್ಮ ಹಳೆದ ಪೋಟೋ ಜೊತೆ ಮತ್ತೊಂದು ಟ್ವಿಟ್ ಮಾಡಿರುವ ಬಹಾರ್, ನಮ್ಮ ಸಂಸ್ಕೃತಿ ಅಳಿಸಿ ಹಾಕಲು ಬಿಡುವುದಿಲ್ಲ ಎಂದಿದ್ದಾರೆ.
ಅಪ್ಘಾನಿಸ್ತಾನದ ಮಹಿಳೆಯರ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿದ್ದು, ವಿಶ್ವದಾದ್ಯಂತ ಹಲವರು ಟ್ವೀಟ್ ಮೂಲಕ ಬೆಂಬಲ ಸೂಚಿಸಿದ್ದಾರೆ.
afghan women Started do not touch my clothes campaign.