ತಾಲಿಬಾನ್ ಕೈವಶವಾಯ್ತು ಪಂಜ್‍ಶೀರ್‌ : ಎದುರಾಯ್ತು ಜನರ ವಿರೋಧ

ಕಾಬೂಲ್- ಆಫ್ಘಾನಿಸ್ಥಾನವನ್ನು ಸಂಪೂರ್ಣ ಕೈವಶಮಾಡಿಕೊಂಡಿದೆವೆ ಎಂದು ತಾಲಿಬಾನಿಗಳು ಘೋಷಣೆ ಮಾಡಿದ್ದರು ಕೂಡ ಪಂಜ್‌ ಶೀರ್‌ ಇಷ್ಟು ದಿನ ತಾಲಿಬಾನ್‌ ಉಗ್ರರ ಕೈವಶವಾಗಿರಲಿಲ್ಲಾ. ಆದರೆ ಈಗ ಆಫ್ಘಾನ್ ರಾಜಧಾನಿ ಕಾಬೂಲ್ ಸೆರಗಿನಲ್ಲಿರುವ ಪಂಜ್‍ಶೀರ್ ಪ್ರಾಂತ್ಯವನ್ನು ವಶಪಡಿಸಿ ಕೊಂಡಿರುವು ದಾಗಿ ತಾಲಿಬಾನ್ ಘೋಷಿಸಿಕೊಂಡಿದೆ. ಆದರೆ ಆಫ್ಘಾನ್‍ನನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಪಂಜ್‍ಶೀರ್ ನಲ್ಲಿ ತಾಲಿಬಾನ್ ಆಡಳಿತಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

ಯಾವುದೇ ಕಾರಣಕ್ಕೂ ನಾವು ತಾಲಿಬಾನಿಗಳ ಕೈವಶವಾಗುವುದಿಲ್ಲ ಎಂದು ಘೋಷಿಸಿಕೊಂಡಿದ್ದ ಪಂಜ್‍ಶೀರ್ ನಿವಾಸಿಗಳು ತಾಲಿಬಾನಿಗಳನ್ನು ತಮ್ಮ ಪ್ರಾಂತ್ಯಕ್ಕೆ ಬಿಟ್ಟುಕೊಂಡಿರಲಿಲ್ಲ. ಹೀಗಾಗಿ ತಾಲಿಬಾನಿಗಳು ಮತ್ತು ಪಂಜ್‍ಶೀರ್ ರಕ್ಷಣಾ ಯೋಧರ ನಡುವೆ ಕದನ ನಡೆಯುತಿತ್ತು.

ಇದನ್ನೂ ಓದಿ: ತಾಲಿಬಾನ್ ಉಗ್ರರಿಂದ ಪೈಶಾಚಿಕ ಕೃತ್ಯ : ಕುಟುಂಬದವರ ಎದುರಲ್ಲೇ ಗರ್ಭಿಣಿ ಪೊಲೀಸ್ ಹತ್ಯೆ

ನಿನ್ನೆ ರಾತ್ರಿ ಪಂಜ್‍ಶೀರ್ ಪ್ರಾಂತ್ಯದ ಸಮೀಪಕ್ಕೆ ಆಗಮಿಸಿದ್ದ ತಾಲಿಬಾಲಿಗಳು ಎಂಟು ಜಿಲ್ಲೆಗಳಲ್ಲಿ ಪ್ರಾಬಲ್ಯ ಸಾಧಿಸಿದ್ದು, ಇಂದು ಮುಂಜಾನೆ ವೇಳೆಗೆ ಇಡೀ ಪಂಜ್‍ಶೀರ್ ಪ್ರಾಂತ್ಯವನ್ನು ವಶಪಡಿಸಿ ಕೊಂಡಿ ದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ತಾಲಿಬಾನಿಗಳಿಗೆ ಎದುರಾಯ್ತು ದೊಡ್ಡ ಸವಾಲು : ಆಫ್ಘಾನ್‍ನಲ್ಲಿ ಆಹಾರದ ಕೊರತೆ

(Panjsheer falls into Taliban hands: Opposition from the people)

Comments are closed.