ಭಾನುವಾರ, ಜೂನ್ 15, 2025
HomeWorldಅಫ್ಘಾನಿಸ್ತಾನದಲ್ಲಿ ನಿಲ್ಲದ ತಾಲಿಬಾನ್‌ ಅಟ್ಟಹಾಸ : ಮಗುವನ್ನು ನೇಣಿಗೇರಿಸಿ ಕೊಂದ ತಾಲಿಬಾನಿಗಳು

ಅಫ್ಘಾನಿಸ್ತಾನದಲ್ಲಿ ನಿಲ್ಲದ ತಾಲಿಬಾನ್‌ ಅಟ್ಟಹಾಸ : ಮಗುವನ್ನು ನೇಣಿಗೇರಿಸಿ ಕೊಂದ ತಾಲಿಬಾನಿಗಳು

- Advertisement -

ಕಾಬೂಲ್‌ : ತಾಲಿಬಾನ್ ಹೆಸರು ಕೇಳಿದರೆ ಸಾಕು ಅಫ್ಘಾನಿಸ್ತಾನದ ನರಕದ ಹಿಂಸೆ, ಅತ್ಯಚಾರ, ಕೊಲೆಯ ದೃಷ್ಯಗಳು ಕಣ್ಣೆದುರು ಬರುತ್ತವೆ. ಈ ತಾಲಿಬಾನಿಗಳು ಅಫ್ಘಾನಿಸ್ತಾನದ ಟಾಖರ್‌ ಪ್ರಾಂತ್ಯದ ವ್ಯಕ್ತಿಯೊಬ್ಬರು ಅಫ್ಘನ್‌ ಪ್ರತಿರೋಧ ಪಡೆಯ ಸದಸ್ಯರಾಗಿದ್ದಾರೆ ಎಂಬ ಶಂಕೆಯ ಮೇಲೆ ಆತನ ಮಗುವನ್ನು ಬರ್ಬರವಾಗಿ ಕೊಲೆ ಮಾಡಿದೆ. ‘ಪಂಜ್‌ಶಿರ್‌ ಅಬ್ಸರ್ವರ್‌’ ಹೆಸರಿನ ಸ್ವತಂತ್ರ ಮಾಧ್ಯಮ ಈ ಕುರಿತು ವರದಿ ಮಾಡಿದೆ.

ಟಾಖರ್‌ ಪ್ರಾಂತ್ಯದಲ್ಲಿ ಕೊಲ್ಲಲಾದ ಮಗುವಿನ ತಂದೆ ತಾಲಿಬಾನೀ ಆಡಳಿತಕ್ಕೆ ಪ್ರತಿರೋಧ ಒಡ್ಡುತ್ತಿದ್ದ ಗುಂಪಿನ ಸದಸ್ಯರು ಎಂದು ಶಂಕಿಸಲಾಗಿದೆ,” ಎಂದು ಪಂಜ್‌ಶಿರ್‌ ಅಬ್ಸರ್ವರ್‌ ಟ್ವೀಟ್ ಒಂದರಲ್ಲಿ ತಿಳಿಸಿದೆ. ತನ್ನ ವಿರುದ್ಧ ದನಿ ಎತ್ತುವವರ ವಿರುದ್ಧ ಕ್ರೌರ್ಯ ಮೆರೆಯುತ್ತಿರುವ ತಾಲಿಬಾನ್‌ನ ಮತ್ತೊಂದು ಮುಖವನ್ನು ಈ ಘಟನೆ ತೋರಿದೆ.

ಇದನ್ನೂ ಓದಿ: Hibatullah Akhundzada : ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾದ ಕೊಲೆ !

ಜಾಗತಿಕ ಸಮುದಾಯದ ಎದುರು ತಾನು ಬದಲಾಗಿರುವುದಾಗಿ ತೋರಿಸಿಕೊಳ್ಳಲು ಯತ್ನಿಸುತ್ತಿರುವ ತಾಲಿಬಾನ್ ಇತ್ತ ಅಫ್ಘಾನಿಸ್ತಾನದಲ್ಲಿ ಸಾರ್ವಜನಿಕರನ್ನು ಯಾವ ಮಟ್ಟದಲ್ಲಿ ಭೀತಿಯಲ್ಲಿ ಇರಿಸಿದೆ ಎಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿನ ದೃಶ್ಯಗಳು ಸಾರಿ ಹೇಳುತ್ತಿದ್ದವು.

ಇದನ್ನೂ ಓದಿ: ತಾಲಿಬಾನ್‌ ಉಗ್ರರನ್ನು ಬೆಂಬಲಿಸಿ ರ‍್ಯಾಲಿ ನಡೆಸಿದ ವಿದ್ಯಾರ್ಥಿನಿಯರು…!

(Taliban incessantly in Afghanistan: Taliban killed by hanging child)

RELATED ARTICLES

Most Popular