Kanhaiya Kumar: ಕೊನೆಗೂ ಕಾಂಗ್ರೆಸ್ ಕೈ ಹಿಡಿದ ಕನ್ನಯ್ಯ ಕುಮಾರ್ ಮತ್ತು ಜಿಗ್ನೇಶ್ ಮೇವಾನಿ

ನವದೆಹಲಿ: ಸದಾ ಕಾಂಗ್ರೆಸ್ ಪರ ಒಲವು ಹೊಂದಿದ್ದ ಸಿಪಿಐ ಯುವ ಮುಖಂಡ  ಹಾಗೂ ಜೆಎನ್ ಯೂ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ನಯ್ಯಕುಮಾರ್ ಹಾಗೂ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು  ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಇಬ್ಬರೂ ಯುವ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದೆ. ಕಳೆದ ಎರಡು ವಾರದಿಂದ  ಈ ಇಬ್ಬರೂ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವ ಸಂಗತಿ ಚರ್ಚೆಗೆ ಗ್ರಾಸವಾಗಿತ್ತು.

ಆದರೆ ಈ ಚರ್ಚೆ ಹಾಗೂ ಗಾಸಿಪ್ ಗಳಿಗೆ ಇಬ್ಬರು ನಾಯಕರು ಸ್ಪಷ್ಟನೆ ನೀಡಿರಲಿಲ್ಲ . ಕನ್ನಯ್ಯಕುಮಾರ್ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆ ದೆಹಲಿಯ ಜೆಎನ್ ಯೂ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷರಾಗಿದ್ದು, ವಿದ್ಯಾರ್ಥಿ ದೆಸೆಯಲ್ಲೇ ಸಂಘ ಪರಿವಾರ ಹಾಗೂ ಬಿಜೆಪಿಯನ್ನು ತೀವ್ರವಾಗಿ ವಿರೋಧಿಸುತ್ತ ಬಂದಿದ್ದಾರೆ.

2016 ರಲ್ಲಿ ಕನ್ನಯ್ಯ ಕುಮಾರ್ ವಿರುದ್ಧ ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣ ದಾಖಲಾಗಿದ್ದು, ಬಳಿಕ ಸೂಕ್ತಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ಖುಲಾಸೆಗೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಪಿಐ ಪಕ್ಷದಿಂದ ಬೇಸಗುರಾಯ ಪ್ರದೇಶದಿಂದ ಸ್ಪರ್ಧಿಸಿದ್ದ ಕನ್ನಯ್ಯಕುಮಾರ್ ಸೋತಿದ್ದರು.

ಇನ್ನು ಜಿಗ್ನೇಶ್ ಮೇವಾನಿ ದಲಿತ ಸಮುದಾಯದ  ದಲಿತ ಹೋರಾಟಗಳಿಂದಲೇ ಗುರುತಿಸಿಕೊಂಡ ಪ್ರಭಾವಿ ಯುವನಾಯಕರಾಗಿದ್ದು, ಗುಜರಾತ್ ನ ಉನ್ನಾವೋದಲ್ಲಿ ನಡೆದ ದಲಿತ ಹೋರಾಟದಲ್ಲಿ ಪಾಲ್ಗೊಳ್ಳುವ ಗುರುತಿಸಿಕೊಂಡಿದ್ದಾರೆ.  

(Today kanhaiya kumar and jignesh mevani Joining congress)

Comments are closed.