ಕಾಬೂಲ್ : ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಾಗಿನಿಂದ ಅಲ್ಲಿನ ನಾಯಕತ್ವಗಾಗಿ ಉಗ್ರರ ನಡುವೆಯೇ ಜಟಾಪಟಿ ನಡೆದಿದೆ. ಕುರ್ಚಿಗಾಗಿ ನಡೆದ ಯುದ್ಧದಲ್ಲಿ ತಾಲಿಬಾನ್‌ನ ನಾಯಕ ಹಿಬತುಲ್ಲಾ ಅಖುಂಡ್ಜಾದನನ್ನು ಕೊಲ್ಲಲಾಗಿದೆ. ಇನ್ನು ಉಪಪ್ರಧಾನಿ ಮುಲ್ಲಾ ಬರದಾರನನ್ನ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಎಂದು ಬ್ರಿಟನ್‌ನ ನಿಯತಕಾಲಿಕೆ ದಿ ಸ್ಪೆಕ್ಟೇಟರ್ ವರದಿ ಮಾಡಿದೆ.
ಅಧಿಕಾರಕ್ಕಾಗಿ ತಾಲಿಬಾನ್‌ನ ಎರಡು ಬಣಗಳ ನಡುವೆ ಈ ಹೋರಾಟ ನಡೆಯಿತು. ಹಕ್ಕಾನಿ ಬಣದೊಂದಿಗಿನ ಈ ಜಗಳದಲ್ಲಿ ಮುಲ್ಲಾ ಬರದಾರ್ ಹೆಚ್ಚು ತೊಂದರೆ ಅನುಭವಿಸಿದ್ದಾನೆ ಎಂದು ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ಅಪ್ಘಾನಿಸ್ತಾನ ಮಹಿಳೆಯರ ದಿಟ್ಟ ಹೆಜ್ಜೆ: ವಸ್ತ್ರಸಂಹಿತೆ ವಿರುದ್ಧ ಆನ್ ಲೈನ್ ಅಭಿಯಾನ
ಕಾಬೂಲ್ ಅಫ್ಘಾನಿಸ್ತಾನದ ಉಪ ಪ್ರಧಾನಿ ಮುಲ್ಲಾ ಬರದಾರನ್ನ ಕಂದಹಾರ್‌ನಲ್ಲಿ ಒತ್ತೆಯಾಳಾಗಿ ಇರಿಸಲಾಗಿದೆಯೇ ? ತಾಲಿಬಾನ್ ನಾಯಕ ಹೈಬತುಲ್ಲಾ ಅಖುಂಡ್ಜಾದ ಸಾವನ್ನಪ್ಪಿದ್ದಾನೆಯೇ ? ತಾಲಿಬಾನ್ʼನ ಈ ಇಬ್ಬರು ನಾಯಕರ ಸುತ್ತ ಗೌಪ್ಯತೆಯ ವಾತಾವರಣವಿದೆ.
ಇದನ್ನೂ ಓದಿ: ತಾಲಿಬಾನ್ ಉಗ್ರರನ್ನು ಬೆಂಬಲಿಸಿ ರ‍್ಯಾಲಿ ನಡೆಸಿದ ವಿದ್ಯಾರ್ಥಿನಿಯರು…!
ಈಗ ಯುಕೆ ನಿಯತಕಾಲಿಕೆಯ ಈ ವರದಿ ತಾಲಿಬಾನ್‌ನಲ್ಲಿ ಸಂಖ್ಯೆ 1 ಮತ್ತು 2 ರ ನಾಯಕರ ಬಗ್ಗೆ ಊಹಾಪೋಹಗಳನ್ನ ಮತ್ತೆ ಬಿಸಿಯಾಗಿದೆ. ಆದ್ರೆ, ಈ ವರದಿಗಳನ್ನ ತಾಲಿಬಾನ್ ನಿರಾಕರಿಸಿದೆ. ಅವರ ಪ್ರಕಾರ, ಎಲ್ಲಾ ಉನ್ನತ ತಾಲಿಬಾನ್ ನಾಯಕರು ಜೀವಂತವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ.
(Taliban kill Supreme Leader Hibatullah Akhundza)