Cylinder Blast : ಸಿಲಿಂಡರ್‌ ಸ್ಪೋಟ : ಬೆಂಗಳೂರಲ್ಲಿ ಹೊತ್ತಿ ಉರಿದ ಅಪಾರ್ಟ್‌ಮೆಂಟ್‌

ಬೆಂಗಳೂರು : ಸಿಲಿಂಡರ್‌ ಸ್ಪೋಟಗೊಂಡು ಅಪಾರ್ಟ್‌ಮೆಂಟ್‌ವೊಂದು ಹೊತ್ತಿ ಉರಿದ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನ ದೇವರಚಿಕ್ಕನಹಳ್ಳಿಯಲ್ಲಿ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಬೆಂಗಳೂರು ನಗರದ ದೇವರ ಚಿಕ್ಕಹಳ್ಳಿಯಲ್ಲಿರುವ ಆಶ್ರಿತ್‌ ಅಪಾರ್ಟ್‌ಮೆಂಟ್‌ನಲ್ಲಿ ಈ ಅವಘಡ ಸಂಭವಿಸಿದೆ. ಸಿಲಿಂಡರ್‌ ಸ್ಪೋಟದಿಂದ ಒಂದು ಫ್ಲ್ಯಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಗೆ ಇತರ ಫ್ಲ್ಯಾಟ್‌ಗೂ ವ್ಯಾಪಿಸಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಎಷ್ಟು ಮಂದಿ ಸಿಲುಕಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮನೆಯೊಳಗೆ ಸಿಲುಕಿದ್ದು, ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ. ಬೆಂಕಿ ಇತರ ಫ್ಲ್ಯಾಟ್‌ಗಳಿಗೂ ವ್ಯಾಪಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಸೈಳಕ್ಕೆ ಬೇಗೂರು ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ : ಆತ್ಮ ಬಿಡಿಸುವ ನೆಪದಲ್ಲಿ ಅತ್ಯಾಚಾರ: 16 ಬಾಲಕಿ ಮೇಲೆ ದೌರ್ಜನ್ಯ ನಡೆಸಿದ ಬಾಬಾ

ಇದನ್ನೂ ಓದಿ : ಕೋಲಿನಲ್ಲಿ ಹೊಡೆದು ಮಗಳ ಹತ್ಯೆ ಮಾಡಿದ ತಂದೆ ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

(In an Ashrith apartment where cylinder blast caught fire in Devara Chikkanahalli Bengaluru )

Comments are closed.