ಬ್ರಿಟನ್ : ಪ್ರಪಂಚದ ಎಲ್ಲಾ ದೇಶಗಳಲ್ಲಿಯು ಕೋವಿಡ್-19 ಸಂಕ್ರಾಮಿಕ ರೋಗಕ್ಕೆ ಚಿಕಿತ್ಸೆಯಾಗಿ ವಾಕ್ಸಿನ್ ( ಚುಚ್ಚು ಮದ್ದನ್ನು) ಉಪಯೋಗಿಸುತ್ತಿವೆ. ಆದರೆ ಬ್ರಿಟನ್ ದೇಶ ಮಾತ್ರ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಮೆರ್ಕ್ ನ ಆಂಟಿವೈರಲ್ ಮಾತ್ರೆಯನ್ನು ಸಂಶೋಧಿಸಿದೆ. ಅಲ್ಲದೇ ಬಳಕೆಗೆ UKಯಿಂದ ಅನುಮೋದನೆ ಪಡೆದುಕೊಂಡಿದೆ.
ಬ್ರಿಟನ್‌ನಲ್ಲಿ ಕೋವಿಡ್-19 ಸಂಕ್ರಾಮಿಕ ರೋಗಕ್ಕೆ ಚಿಕಿತ್ಸೆಯಾಗಿ ಮೆರ್ಕ್ ನ ಆಂಟಿವೈರಲ್ ಮಾತ್ರೆಯನ್ನು ತಯಾರಿಸಿತ್ತು. ಆದರೆ ಬಳಕೆಗೆ ಅನುಮೋದನೆ ದೊರೆತಿರಲಿಲ್ಲ. ಇದೀಗ ಬ್ರಿಟನ್ ಸರಕಾರ ಅನುಮೋದನೆಯನ್ನು ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬ್ರಿಟನ್ ಆರೋಗ್ಯ ಸಚಿವ ಸಾಜಿದ್ ಜಾವಿದ್ ಅವರು, ಇಂದು ನಮ್ಮ ದೇಶಕ್ಕೆ ಐತಿಹಾಸಿಕ ದಿನವಾಗಿದೆ,. ಬ್ರಿಟನ್ ಈಗ ಕೊರೊನಾ ವೈರಸ್ ಗೆ ಆಂಟಿವೈರಲ್ ಮಾತ್ರೆ ಅನುಮೋದಿಸಿದ ವಿಶ್ವದ ಮೊದಲ ದೇಶ ಎನಿಸಿಕೊಂಡಿದೆ ಎಂದಿದ್ದಾರೆ.
ಇದನ್ನೂ ಓದಿ: China Lockdown : ಚೀನಾಕ್ಕೆ ಕೊರೊನಾ ಶಾಕ್ : ಮನೆಯಿಂದ ಹೊರಬಂದ್ರೆ ಕ್ರಿಮಿನಲ್ ಕೇಸ್
ಈ ಆಂಟಿವೈರಲ್ ಅನ್ನು ಮೊಲ್ನುಪಿರಾವೀರ್ ಎಂದು ಕರೆಯಲಾಗುತ್ತದೆ. ಈ ಮಾತ್ರೆಯು ವೈರಸ್ ಗಳ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ, ಕೊರೊನಾ ವೈರಸ್ ನಿಂದ ರಕ್ಷಣೆಯನ್ನು ನೀಡುತ್ತದೆ. ಕೋವಿಡ್-19 ರ ವೈರಸ್ ನಿಂದ ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡುವಲ್ಲಿ ಈ ಮಾತ್ರೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಕೋವಿಡ್-19 ಚಿಕಿತ್ಸೆಗಾಗಿ ಇದನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ಕ್ಲಿನಿಕಲ್ ಟ್ರಯಲ್ ಡೇಟಾದ ಆಧಾರದ ಮೇಲೆ, ಈ ಔಷಧವು ಸೋಂಕಿನ ಆರಂಭಿಕ ಹಂತಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಆರಂಭಿಕ ರೋಗಲಕ್ಷಣಗಳ ಐದು ದಿನಗಳಲ್ಲಿ ಈ ಔಷಧಿಯನ್ನು ತೆಗೆದುಕೊಳ್ಳಲು ಎಂಎಚ್‌ಆರ್‌ಎ ಸಲಹೆ ನೀಡಿದೆ.
ಇದನ್ನೂ ಓದಿ: Al Qaeda Leader Killed : ಡ್ರೋನ್ ದಾಳಿಯಿಂದ ಅಲ್ ಖೈದಾ ಹಿರಿಯ ನಾಯಕನ ಹತ್ಯೆ
( ‘Antiviral pill’ for corona virus: Molnupiravir Pill)