Shankaracharya : ಮೈಸೂರಿನಿಂದ ಕೇದಾರನಾಥ ದವರೆಗೆ : ಶಂಕರಾಚಾರ್ಯ ಪ್ರತಿಮೆ ಹಿಂದಿದೆ ಕನ್ನಡಿಗನ ಶ್ರಮ

ಕೇದಾರನಾಥದಲ್ಲಿ ಪ್ರಧಾನಿ ಮೋದಿ ಶಂಕರಾಚಾರ್ಯ ಪ್ರತಿಮೆ ಸ್ಥಾಪಿಸಿದ್ದು ಆಸ್ತಿಕರ ಸಂಭ್ರಮಕ್ಕೆ ಕಾರಣವಾಗಿದೆ. ಈ ಸುಂದರ ಪ್ರತಿಮೆ ಹಿಂದೆ ಕನ್ನಡಿಗನ ಶ್ರಮವಿದ್ದು ಮೈಸೂರಿನ ಶಿಲ್ಪಿ ಅರುಣ ಆಚಾರ್ಯ ಶಂಕರಾಚಾರ್ಯ ಮೂರ್ತಿ ರೂವಾರಿ.

ಮೈಸೂರಿನ ಶಿಲ್ಪಿ ಅರುಣ ಯೋಗರಾಜ ಆಚಾರ್ಯ 12 ಅಡಿ ಎತ್ತರದ ಶಂಕಾರಾಚಾರ್ಯ (Adi Shankaracharya) ಪ್ರತಿಮೆಯನ್ನು ಕೆತ್ತಿದ್ದುಎಚ್.ಡಿ.ಕೋಟೆಯಿಂದ ಮೂರ್ತಿಯನ್ನು ಕೇದಾರನಾಥಕ್ಕೆ ಕೊಂಡೊಯ್ದು ಪ್ರತಿಷ್ಟಾಪಿಸಲಾಗಿದೆ.

2020 ರ ಸಪ್ಟೆಂಬರ್ ನಲ್ಲಿ ಮೂರ್ತಿ ಕೆತ್ತನೆ ಆರಂಭಿಸಿದ್ದ ಅರುಣ ಆಚಾರ್ಯ ಕೆಲವೇ ತಿಂಗಳಲ್ಲಿ ಈ ಮೂರ್ತಿ ಕೆತ್ತನೆ ಪೊರೈಸಿದ್ದಾರೆ. 12 ಅಡಿ ಎತ್ತರದ ಕಪ್ಪು ಏಕ ಶಿಲೆಯಿಂದ ನಿರ್ಮಿಸಿದ ಪ್ರತಿಮೆ ಸುಂದರವಾಗಿ ರೂಪುಗೊಂಡಿದ್ದು ಶಿಲ್ಪಿಯ ಕೈಚಳಕಕ್ಕೆ ಆಸ್ತಿಕರು ಮನಸೋತಿದ್ದಾರೆ.

ಮೈಸೂರಿನಿಂದ ಈ ವಿಶೇಷ ಪ್ರತಿಮೆಯನ್ನು ಚಿಕೂನ್ ವಿಶೇಷ ವಿಮಾನದಲ್ಲಿ ಕೇದಾರನಾಥ ಕ್ಕೆ ಸಾಗಿಸಲಾಗಿದ್ದು ಪ್ರಧಾನಿ ಮೋದಿಯಿಂದ ಮೂರ್ತಿ ಅನಾವರಣ ಹಾಗೂ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡಿದೆ. ಕೇದಾರನಾಥ ದೇಗುಲದ ಗರ್ಭಗುಡಿಯಲ್ಲಿ ರುದ್ರಾಭಿಷೇಕವನ್ನು ಪ್ರಧಾನಿ ಮೋದಿ ನೆರವೇರಿಸಿದ್ದಾರೆ.

ಇನ್ನು ಮೈಸೂರಿನಲ್ಲಿ ಶಂಕರಾಚಾರ್ಯ ಪ್ರತಿಮೆ ನಿರ್ಮಾಣವಾದ ಸಂಗತಿ ಕನ್ನಡಿಗರ ಪಾಲಿಗೆ ಖುಷಿಯ ಸಂಗತಿಯಾಗಿದ್ದು, ಎಲ್ಲರೂ ಶಿಲ್ಪಿ ಅರುಣ ಯೋಗರಾಜ ಆಚಾರ್ಯ ಅವರನ್ನು ಅಭಿನಂದಿಸಿದ್ದಾರೆ.

Comments are closed.