ಚೀನಾ : ಒತ್ತಡದ ಜೀವನ, ಆಧುನಿಕ ಜೀವನ ಶೈಲಿ. ರಾಸಾಯನಿಕಯುಕ್ತ ಆಹಾರ ಸೇವನೆ ಇಂದು ನಾನಾ ಕಾಯಿಲೆಗಳ ಹುಟ್ಟಿಗೆ ಕಾರಣವಾಗುತ್ತಿದೆ. ಅದ್ರಲ್ಲೂ ಕ್ಯಾನ್ಸರ್, ಹಾರ್ಟ್ ಅಟ್ಯಾಕ್, ಕಿಡ್ನಿ ವೈಫಲ್ಯಗಳು ಸಾಮಾನ್ಯವಾಗುತ್ತಿದೆ. ಅದ್ರಲ್ಲೂ ಚೀನಾದ ಜನರನ್ನುಅಲ್‌ಝೈಮರ್ಸ್ (ಮಹಾ ಮರೆವಿನ ಕಾಯಿಲೆ ) ಕಾಯಿಲೆ ಕಂಗೆಡಿಸಿದ್ದು, 2016 ರಿಂದ ಈಚೆಗೆ ಬರೋಬ್ಬರಿ 500 ಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ.
ಅಲ್‌ಝೈಮರ್ಸ್ (ಮಹಾ ಮರೆವಿನ ಕಾಯಿಲೆ ) ಕಾಯಿಲೆ ಹೆಚ್ಚಾಗಿ ವೃದ್ಧರಲ್ಲೇ ಕಂಡುಬರುತ್ತಿದೆ. ಈ ಕಾಯಿಲೆಗೆ ತುತ್ತಾದವರ ಕುಟುಂಬಸ್ಥರು ಒಂದೇ ಒಂದು ಕ್ಷ ಣ ಕೂಡ ಅವರನ್ನು ಬಿಟ್ಟು ಬೇರೆಡೆಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಸ್ವಂತ ಮಗಳು, ಮಗ, ಮೊಮ್ಮಕ್ಕಳೇ ಎದುರಿಗಿದ್ದರೂ ಕೂಡ ಗುರುತು ಹಿಡಿಯೋದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಹಲವರು ಮನೆಯಿಂದ ಹೊರ ನಡೆದ್ರೆ ಮತ್ತೆ ಮರಳಿ ಬರೋದು ಕೂಡ ಕಷ್ಟಸಾಧ್ಯ.
ಇದನ್ನೂ ಓದಿ: Heart Attack : ಈ ರಕ್ತದ ಗುಂಪಿನವೇ ಹೆಚ್ಚು ಹೃದಯಾಘಾತಕ್ಕೆ ತುತ್ತಾಗುತ್ತಾರಂತೆ !
ನೋಡಲು ಆರೋಗ್ಯವಂತರಾಗಿ ಕಾಣಿಸಿದ್ರೂ ಕೂಡ ಮೆದುಳು ಗಂಭೀರವಾದ ಅನಾರೋಗ್ಯಕ್ಕೆ ತುತ್ತಾಗಿರುತ್ತೆ. ಹೀಗಾಗಿ ಅಲ್‌ಝೈಮರ್ಸ್ (ಮಹಾ ಮರೆವಿನ ಕಾಯಿಲೆ ) ಕಾಯಿಲೆಯಿಂದ ಬಳಲುತ್ತಿರುವವರು ಯಾವುದನ್ನೂ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಇಂಥದ್ದೇ ಪ್ರಕರಣಗಳು ಸದ್ಯ ಚೀನಾದಲ್ಲಿ ಹೆಚ್ಚಾಗುತ್ತಿವೆ.
ವಿಶ್ವದಲ್ಲಿರುವ ಅಲ್‌ಝೈಮರ್ಸ್ ಪೀಡಿತರ ಪೈಕಿ ಶೇ.25ರಷ್ಟು ಮಂದಿ ಚೀನಾದಲ್ಲೇ ಇದ್ದಾರೆ. ಸುಮಾರು 1 ಕೋಟಿ ಜನರಿಗೆ ಈ ಮರೆವಿನ ಕಾಯಿಲೆ ಆವರಿಸಿದೆ. ಇಲ್ಲಿನ ಬಹುಪಾಲು ಜನರು ಮಧ್ಯವಯಸ್ಸಿನಿಂದ ವೃದ್ಧಾಪ್ಯದ ಕಡೆಗೆ ಸಾಗುತ್ತಿರುವುದೇ ಅಲ್‌ಝೈಮರ್ಸ್ ಸಂಖ್ಯೆ ಹೆಚ್ಚಲು ಮೂಲ ಕಾರಣ ಎನ್ನಲಾಗಿದೆ. 2050ರ ವೇಳೆ ಚೀನಾದಲ್ಲಿ4 ಕೋಟಿ ಮರೆವಿನ ಕಾಯಿಲೆಯುಳ್ಳ ಜನರು ಇರುತ್ತಾರಂತೆ.
ಇದನ್ನೂ ಓದಿ: ಮಾನಸಿಕ ಒತ್ತಡಗಳಿಂದ ಹೊರ ಬರಬೇಕಾ? ಹಾಗಾದರೆ ಈ ಟಿಪ್ಸ್ ನಿಮಗಾಗಿ…!
ಲಂಡನ್ ಸ್ಕೂಲ್ ಆಫ್ ಹೈಜೀನ್ ಆಯಂಡ್ ಟ್ರಾಪಿಕಲ್ ಮೆಡಿಸಿನ್ ನಡೆಸಿರುವ ಅಧ್ಯಯನದಲ್ಲಿ ಇದು ಬಹಿರಂಗಪಟ್ಟಿದೆ. 2016ರಿಂದ ಈಚೆಗೆ ಚೀನಾದಲ್ಲಿ ಸುಮಾರು 500 ಅಲ್‌ಝೈಮರ್ಸ್ ಪೀಡಿತರು ಮನೆಗಳಿಂದ ಕಾಣೆಯಾಗಿದ್ದಾರೆ. ಅಮೆರಿಕದಲ್ಲಿ ಸದ್ಯ 62 ಲಕ್ಷ ಅಲ್‌ಝೈಮರ್ಸ್ ಪೀಡಿತರಿದ್ದಾರಂತೆ.
(Alzheimer’s Disease: haunting China)