ಮಂಗಳವಾರ, ಏಪ್ರಿಲ್ 29, 2025
HomeSpecial Storyಮಹಿಳೆಯ ಕಿವಿಯಲ್ಲಿ ಜೀವಂತ ಜೇಡ : ವೈದ್ಯ ಕಂಗಾಲು

ಮಹಿಳೆಯ ಕಿವಿಯಲ್ಲಿ ಜೀವಂತ ಜೇಡ : ವೈದ್ಯ ಕಂಗಾಲು

- Advertisement -

ಚೀನಾ : ಚಿಕ್ಕ ಇರುವೆ ಕಿವಿಯೊಳಗೆ ಹೋದರು ದೊಡ್ಡದೇನೋ ಕಿವಿಯೋಳಗೆ ಸರಿದಾಡುತ್ತಿದೆ ಎಂದೆನಿಸುತ್ತದೆ, ನೋವಾಗುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಕಿವಿಯೊಳಗೆ ಜೀವಂತ ಜೇಡ ಹೋಗಿದ್ದು, ಒಂದಿಡಿ ದಿನ ಮಹಿಳೆಯ ಕಿವಿಯೊಳಗಿದ್ದ ಜೇಡವನ್ನು ವೈದ್ಯರು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಿವಿಯೊಳಗೆ ಅಡಚಣೆ ಯಾಗುತ್ತಿದೆ ಎಂದು ಆಸ್ಪತ್ರೆಗೆ ದಾಖಲಾದ ಮಹಿಳೆಯ ಕಿವಿಯನ್ನುವೈದ್ಯರು ಪರೀಕ್ಷಿಸಿ, ಸ್ಕ್ಯಾನಿಂಗ್‌ ಮಾಡಿಸಿ ರಿಪೋರ್ಟ್‌ ನೋಡಿದ ವೈದ್ಯರು ದಂಗಾಗಿದ್ದಾರೆ. ಕಾರಣ ಆ ಮಹಿಳೆಯ ಕಿವಿಯೊಳಗೆ ಜೀವಂತ ಜೇಡರ ಹುಳು ಹರಿದಾಡುತ್ತಿತ್ತು. ಅಲ್ಲದೇ ಕಳೆದ ಒಂದು ದಿನ ದಿಂದ ಜೇಡರ ಹುಳು ಕಿವಿಯೊಳಗೆ ವಾಸವಾಗಿತ್ತು ಎಂಬ ವಿಷಯ ಕೇಳಿದ ವೈದ್ಯರು ಬೆರಗಾಗುವಂತೆ ಮಾಡಿದೆ.

ಇದನ್ನೂ ಓದಿ: Kiss murder : ʼಮುತ್ತುʼ ಕೊಡಲು ಒಪ್ಪದ ಹುಡುಗನನ್ನು ಗುಂಡಿಟ್ಟು ಕೊಂದ ಮಹಿಳೆ

ಚೀನಾದ ಈ ಮಹಿಳೆಯ ಹೆಸರು ಯೀ. ಇವರಿಗೆ ಕಿವಿಯೊಳಗೆ ಏನೋ ಇರುವಂತೆ ಭಾಸವಾಗಿದೆ. ಇತರರು ಮಾತನಾಡುವಾಗ ಸರಿಯಾಗಿ ಕೇಳಿಸುತ್ತಿರಲಿಲ್ಲಾ. ಕಿರಿ ಕಿರಿ ಎನ್ನಿಸುತ್ತಿತ್ತು. ಒಂದು ದಿನದಿಂದ ಇದೇ ರೀತಿಯ ಸಮಸ್ಯೆ ಈ ಮಹಿಳೆಯನ್ನು ಕಾಡುತ್ತಿತ್ತು. ನಂತರ ಈ ಮಹಿಳೆ ಪರೀಕ್ಷಿಸಲು ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಕಿವಿಯಲ್ಲಿ ಜೇಡರ ಹುಳು ಇರುವ ವಿಷಯ ಬೆಳಕಿಗೆ ಬಂದಿದೆ.

ಇಡೀ ಒಂದು ದಿನ ಜೇಡರ ಹುಳು ತನ್ನ ಕಿವಿಯೊಳಗೆ ವಾಸವಾಗಿತ್ತು ಎಂಬ ವಿಷಯ ಕೇಳಿ ಆ ಮಹಿಳೆಗೂ ಆಘಾತವನ್ನುಂಟು ಮಾಡಿದೆ. ನಂತರ ವೈದ್ಯರು ಚಿಕ್ಕದಾದ ವೈದ್ಯಕೀಯ ಕ್ಯಾಮರಾವನ್ನು ಬಳಸಿ ಜೊತೆಗೆ ಎಲೆಕ್ಟ್ರಿಕ್‌ ಒಟೋಸ್ಕೋಪ್‌ ಬಳಸಿ ಆ ಮಹಿಳೆಯ ಕಿವಿಯಿಂದ ಜೇಡರ ಹುಳುವನ್ನು ಹೊರ ಎಗೆದಿದ್ದಾರೆ. ಹೊರ ತೆಗೆದ ಜೇಡರ ಹುಳು ಬಹಳ ದೊಡ್ಡ ಗಾತ್ರದಲ್ಲಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಮನುಷ್ಯನ ದೇಹಕ್ಕೆ ಹಂದಿ ಕಿಡ್ನಿ ಯಶಸ್ವಿ ಕಸಿ : ವೈದ್ಯಲೋಕದ ಸಾಹಸಕ್ಕೆ ನಿಬ್ಬೆರಗಾಯ್ತು ಜಗತ್ತು

(Live spider in woman’s ear )

RELATED ARTICLES

Most Popular