Metro : ಮೆಟ್ರೋ ಕಾಮಗಾರಿ ವೇಳೆ‌ ದುರಂತ : ಆಯತಪ್ಪಿ ಕೆಳಗೆ ಬಿದ್ದ ಕ್ರೇನ್‌

ಬೆಂಗಳೂರು : ನಮ್ಮ‌ ಮೆಟ್ರೋ ಯೋಜನೆಯ ಕಾಮಗಾರಿಯ ವೇಳೆಯಲ್ಲಿ ಕ್ರೇನ್ ವೊಂದು ಆಯತಪ್ಪಿ ಕೆಳಗೆ‌ಬಿದ್ದಿದೆ. ಆದರೆ ಅದೃಷ್ಡವಶಾತ್ ಭಾರೀ ದುರಂತವೊಂದು ತಪ್ಪಿದಂತಾಗಿದೆ.

ಸಿಲ್ಕ್‌ ಬೋರ್ಡ್‌ ಮಹಾಗೂ ಕೆ,ಆರ್‌, ಪುರಂ ಮಾರ್ಗ ಮಧ್ಯೆ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ನಡೆಯುತ್ತಿರುವಾಗ ಬೆಳ್ಳಿಗ್ಗೆ 6.30 ರ ವೇಳೆಗೆ ಲಾಂಚಿಂಗ್‌ ಗಾರ್ಡ್‌  ಎನ್ನುವ ಬೃಹತ್‌ ಕ್ರೇನ್‌ ಒಂದು ಅರ್ಧಕ್ಕೆ ದಿಢೀರ್‌ ಕೆಳಗೆ ಬಿದ್ದಿದೆ. ಅದೃಷ್ಟವಶಾತ್‌ ಯಾವ ಕಾರ್ಮಿಕರಿಗೂ ಏನು ತೊಂದರೆ ಆಗಿಲ್ಲಾ.

ಇದನ್ನೂ ಓದಿ: Namma Metro : ನಮ್ಮ ಮೆಟ್ರೋಗೆ ದಶಕದ ಸಂಭ್ರಮ : 60 ಕೋಟಿ ಜನರ ಪ್ರಯಾಣ, 1286.6 ಕೋಟಿ ರೂ. ಆದಾಯ

ಬೃಹತ್‌ ಕ್ರೇನ್‌ ಆಯತಪ್ಪಿ ಬಿದ್ದಿದ್ದರಿಂದ ಅದನ್ನು ಪುನಃ ಅದೇ ಸ್ಥಳಕ್ಕೆ ವರ್ಗಾಯಿಸಲು ಮೆಟ್ರೋ ಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ. ಆದರೆ ಇಂತಹ ದೊಡ್ಡ ಅವಘಡ ಸಂಭವಿಸಿದರು ಯಾವ ಮೆಟ್ರೋ ಅಧಿಕಾರಿಯೂ ಸ್ಥಳಕ್ಕೆ ಆಗಮಿಸಲಿಲ್ಲಾ. ಮೆಟ್ರೋ ಕಾರ್ಮಿಕರೆ ಕ್ರೇನ್‌ ಮೇಲಿಡಲು ಕಷ್ಟ ಪಡುತ್ತಿದ್ದಾರೆ

ಮೆಟ್ರೋ ಕಾಮಗಾರಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದೆ. ಆದರೆ ಇಂದು ಈ ಮೆಟ್ರೋ ಕಾಮಗಾರಿ ನಡೆಯುವ ವೇಳೆ ಅವಘಡ ಒಂದು ಸಂಭವಿಸಿದದೆ. ಮೆಟ್ರೋ ಕಾಮಗಾರಿ ಎಂದರೆ ಅದು ಎಷ್ಟು ಎತ್ತರದಲ್ಲಿ ನಡೆಯುತ್ತದೆ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಅಷ್ಟು ಎತ್ತರದಿಂದ ಕ್ರೇನ್‌ ಒಂದು ಆಯ ತಪ್ಪಿ ಕೆಳಗೆ ಬಿದ್ದಿದೆ.

ಇದನ್ನೂ ಓದಿ:ಬಿರಿಯಾನಿ ಆಸೆಗೆ 2 ಲಕ್ಷ ರೂಪಾಯಿ ಕಳೆದುಕೊಂಡ ಆಟೋ ಚಾಲಕ !

ನಮ್ಮ ಮೆಟ್ರೋ ಬೆಂಗಳೂರಿನ ಅನೇಕ  ಜನರ ಪಾಲಿನ ಇದಿ ನಿತ್ಯದ ಅವಶ್ಯಕತೆಗಳಲ್ಲಿ ಒಂದು. ಹೆಚ್ಚು ದುಬಾರಿ ಇಲ್ಲದೇ ತಲುಪ ಬೇಕಾದ ಜಾಗಕ್ಕೆ ಬೇಗನೇ ಹೊಗಿ ತಲುಪಲು ಹೆಚ್ಚಿನವರು ಮೆಟ್ರೋ ವನ್ನೇ ಬಳಸುತ್ತಾರೆ. ಈಗಾಗಲೇ ಅನೇಕ ಅವಘಡಗಳಿಂದ ಸುದ್ದಿಯಲ್ಲಿರುವ ನಮ್ಮ ಮೆಟ್ರೋ ಈಗ ಮತ್ತೋಂದು ಅವಘಡಕ್ಕೆ ಕಾರಣವಾಗಿದೆ.

(Tragedy during metro work: Crane falls overturned)

Comments are closed.