ನವದೆಹಲಿ : ಪಾಕಿಸ್ತಾನವು ಹೇಗಾದರು ಮಾಡಿ ತಾಲಿಬಾನಿಗಳನ್ನು ಕೈವಶ ಮಾಡಿಕೊಳ್ಳಲು ಹೊಸ ಸಂಚೊಂದನ್ನು ರೂಪಿಸಿದೆ. ಪಾಕಿಸ್ತಾನ ಇದೀಗ ಹೊಸ ಕರೆನ್ಸಿ ಘೋಷಣೆ ಮಾಡಿದೆ. ಅಫ್ಘಾನಿಸ್ತಾನಕ್ಕಾಗಿ ವಿಶೇಷ ಆರ್ಥಿಕ ಯೋಜನೆಗಳನ್ನು ಘೋಷಿಸಿದ ಪಾಕಿಸ್ತಾವು ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ವಹಿವಾಟು ನಿರ್ವಹಣೆಗೆ ಪ್ರತ್ಯೇಕ ತಾಲಿಬಾನ್ ಮತ್ತು ಪಾಕಿಸ್ತಾನಿ ರೂಪಾಯಿ ಅನ್ನು ಬಳಸುವುದಾಗಿ ಘೋಷಿಸಿದೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಈ ಮೊದಲು ವಹಿವಾಟು ನಡೆಸುವುದಕ್ಕೆ ಯುಎಸ್ ಡಾಲರ್ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಅಫ್ಘಾನಿಸ್ತಾನದ ರೂಪಾಯಿ ಮೌಲ್ಯವು ಹೆಚ್ಚು ಪ್ರಭಾವ ಶಾಲಿಯಾಗಿದ್ದು, ಇದೀಗ ಪಾಕಿಸ್ತಾನ ಘೋಷಿಸಿದ ಹೊಸ ರೂಪಿಯಿಂದಾಗಿ ಅಫ್ಘಾನಿಸ್ತಾನದ ಆರ್ಥಿಕತೆ ಮತ್ತು ವಹಿವಾಟು ಹಾಗೂ ಉದ್ಯಮಗಳ ಮೇಲೆ ಪಾಕಿಸ್ತಾನ ಹಿಡಿತ ಸಾಧಿಸುವ ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ 3.1 ಕೋಟಿ ಡಾಲರ್ ನೆರವು ಘೋಷಣೆ ಮಾಡಿದ ಡ್ರಾಗನ್ ದೇಶ ಚೀನಾ
ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಸರ್ಕಾರವು ಆರ್ಥಿಕ ಕುಸಿತದ ಮೇಲೆ ಕಡಿವಾಣ ಹಾಕುವ ಅಗತ್ಯವಿದೆ. ಈ ನಿಟ್ಟಿನಲ್ಲಿ ದೇಶದ ಬಜೆಟ್‌ನ ಶೇ.80ರಷ್ಟು ಬಂಡವಾಳವು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದಲೇ ಬರುತ್ತದೆ. ಪಾಕಿಸ್ತಾನದ ತನ್ನ ಕರೆನ್ಸಿಯನ್ನು ಪರಿಚಯಿಸಿದ ನಂತರದಲ್ಲಿ ಅಫ್ಘಾನಿಸ್ತಾನದ ಕರೆನ್ಸಿ ಮೌಲ್ಯವು ಇಳಿಮುಖವಾಗಲಿದೆ. ಒಂದು ಬಾರಿ ಅದು ಸಾಧ್ಯವಾದರೆ ಎಲ್ಲಾ ವ್ಯಾಪಾರ ಮತ್ತು ವ್ಯವಹಾರಗಳು ಪಾಕಿಸ್ತಾನದ ಬೆಲೆ ಮತ್ತು ಪರಿಣಾಮವನ್ನು ಅವಲಂಬಿಸಿರುತ್ತದೆ.
ಇದನ್ನೂ ಓದಿ: “ಅಫ್ಘನ್ ಇಸ್ಲಾಮಿಕ್ ದೇಶ ” ಅಸ್ತಿತ್ವಕ್ಕೆ : ತಾಲಿಬಾನ್ ಹೊಸ ಸರಕಾರ ಘೋಷಣೆ
(Pakistan announces new currency for deal with Afghanistan)