ಚಿತ್ರಹಿಂಸೆ ಕೊಟ್ಟು ಬಾಲಕನ ಕೊಲೆ : ತಾಯಿ, ರೌಡಿಶೀಟರ್‌ ಬಂಧನ

ಬೆಂಗಳೂರು : ಬಾಲಕನೋರ್ವನಿಗೆ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವ ಅಮಾನುಷ ಘಟನೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಾಯಿ ಹಾಗೂ ರೌಡಿಶೀಟರ್‌ ಸುನಿಲ್‌ ಎಂಬಾತನನ್ನು ಮೈಕೋ ಲೇಔಟ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪತಿಯಿಂದ ದೂರವಾಗಿದ್ದ ಬಾಲಕನ ತಾಯಿ ಸಿಂಧೂ ಪ್ರತ್ಯೇಕವಾಗಿ ವಾಸವಾಗಿದ್ದಳು. ತನ್ನ ಹತ್ತು ವರ್ಷದ ಮಗನನ್ನು ನೋಡಿಕೊಳ್ಳುವಂತೆ ರೌಡಿಶೀಟರ್‌ ಸುನಿಲ್‌ಗೆ ತಿಳಿಸಿದ್ದಳು. ಆದರೆ ಸುನಿಲ್‌ ಬಾಲಕನಿಗೆ ನಿತ್ಯವೂ ಚಿತ್ರಹಿಂಸೆ ನೀಡುತ್ತಿದ್ದ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಸುನಿಲ್‌ ಕೊಠಡಿಯಲ್ಲಿ ಕೂಡಿಹಾಕಿ ಬಾಲಕನಿಗೆ ಹಿಂಸೆ ನೀಡುವ ಸಂದರ್ಭದಲ್ಲಿಯೇ ಬಾಲಕ ಸಾವನ್ನಪ್ಪಿದ್ದಾನೆ.

ಈ ವಿಚಾರವನ್ನು ಬಾಲಕನ ತಾಯಿಗೆ ಸುನಿಲ್‌ ತಿಳಿಸಿದ್ದ. ನಂತರದಲ್ಲಿ ಸುನಿಲ್‌ ಹಾಗೂ ಸಿಂಧೂ ಸೇರಿಕೊಂಡು ಬಾಲಕನ ಶವವನ್ನು ಕಾರಿನಲ್ಲಿ ಬೇರೆಡೆಗೆ ಸಾಗಾಟ ಮಾಡಿದ್ದಾರೆ. ಆದರೆ ಏನೂ ನಡೆದಿಲ್ಲಾ ಅನ್ನೋ ರೀತಿಯಲ್ಲಿ ಸಿಂಧೂ ವರ್ತಿಸುತ್ತಿದ್ದಳು. ಮಗನ ಬಗ್ಗೆ ಕೇಳಿದ್ರೆ ಒಂದಿಲ್ಲೊಂದು ಸುಳ್ಳು ಹೇಳುತ್ತಲೇ ಇದ್ದಳು. ಆದರೆ ಸಂಬಂಧಿಕರಿಗೆ ಆಕೆಯ ನಡವಳಿಕೆಯ ಮೇಲೆಯೇ ಅನುಮಾನ ಮೂಡಿತ್ತು.

ಮೈಕೋ ಲೇಔಟ್‌ ಠಾಣೆಯ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಕೂಡಲೇ ಬಾಲಕನ ತಾಯಿ ಸಿಂಧೂವನ್ನು ಕರೆಯಿಸಿ ವಿಚಾರಣೆ ನಡೆಸುತ್ತಲೇ ಬಾಲಕನ ಕೊಲೆಯ ರಹಸ್ಯ ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲೀಗ ಬಾಲಕನ ತಾಯಿ ಸಿಂಧೂ ಹಾಗೂ ರೌಡಿಶೀಟರ್‌ ಸುನಿಲ್‌ ಎಂಬವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ತನ್ನ ಮಗನನ್ನೇ ಕೊಲೆ ಮಾಡಿದ ಪಾಪಿ ತಾಯಿಗೆ ಇದೀಗ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ : ಕೊಲೆಯ ಸುಳಿವು ನೀಡಿತ್ತು ಒಂದು ಸೆಲ್ಫಿ : ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ಇದನ್ನೂ ಓದಿ : ಮನೆ ಬಿಟ್ಟು ಓಡಿ ಹೋಗಿದ್ದ 14 ವರ್ಷದ ಬಾಲಕಿಯ ಮೇಲೆ 13 ಮಂದಿಯಿಂದ ಅತ್ಯಾಚಾರ

(The mother who murdered her son, mother and rowdy sheeter arrest )

Comments are closed.