ಭಾನುವಾರ, ಏಪ್ರಿಲ್ 27, 2025
HomeCorona Updatesಕೋವಿಡ್‌ ವೈರಸ್‌ ಹುಟ್ಟಿದ್ದು ವುಹಾನ್‌ ಲ್ಯಾಬ್‌ನಲ್ಲಿ : ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿದೆ ಶಾಕಿಂಗ್ ವರದಿ

ಕೋವಿಡ್‌ ವೈರಸ್‌ ಹುಟ್ಟಿದ್ದು ವುಹಾನ್‌ ಲ್ಯಾಬ್‌ನಲ್ಲಿ : ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿದೆ ಶಾಕಿಂಗ್ ವರದಿ

- Advertisement -

ಲಂಡನ್ : ಕೋವಿಡ್ -19 ಮಹಾಮಾರಿ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಕೋಟ್ಯಾಂತರ ಜನರು ವೈರಸ್‌ ಸೋಂಕಿನಿಂದ ತತ್ತರಿಸಿದ್ದಾರೆ. ವಿಶ್ವದ ಬಹುತೇಕ ದೇಶಗಳ ಆರ್ಥಿಕತೆ ನೆಲಕಚ್ಚಿದೆ. ಆರಂಭದಿಂದಲೂ ಕೊರೊನಾ ಸೋಂಕು ತನ್ನದಲ್ಲ ಎಂದೇ ಹೇಳಿಕೊಂಡಿದ್ದ ಚೀನಾದ ಕಳ್ಳಾಟವನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲು ಮಾಡಿದ್ದು, ಚೀನಾ ವುಹಾನ್‌ ಲ್ಯಾಬ್‌ನಲ್ಲೇ ಕೊರೊನಾ ವೈರಸ್‌ ಸೃಷ್ಟಿಯಾಗಿದೆ ಅನ್ನೋ ವರದಿ ಬಯಲಾಗಿದೆ.

ಕೆಂಪುರಾಷ್ಟ್ರ ಚೀನಾದಲ್ಲಿ ಆರಂಭದಲ್ಲಿ ಕಾಣಿಸಿಕೊಂಡಿದ್ದ ಹೆಮ್ಮಾರಿ ಕೊರೊನಾ ಚೀನಾವನ್ನು ತತ್ತರಿಸಿ ಹೋಗುವಂತೆ ಮಾಡಿತ್ತು. ನಂತರ ವಿಶ್ವದ ಅಭಿವೃದ್ದಿ ಹೊಂದಿದ ರಾಷ್ಟ್ರಗಳನ್ನೂ ಒಳಗೊಂಡಂತೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಇಂದಿಗೂ ಭಾರತ, ಅಮೇರಿಕಾ, ಬ್ರಿಟನ್‌, ಇಟಲಿ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಕೊರೊನಾ ವೈರಸ್‌ ಸೋಂಕಿನ ಭೀತಿಯಿಂದ ಹೊರಬಂದಿಲ್ಲ. ಮೂರನೇ, ನಾಲ್ಕನೇ, ಐದನೇ ಅಲೆ ಹೀಗೆ ಕಳೆದ ಎರಡು ವರ್ಷಗಳಿಂದಲೂ ಭಯದಲ್ಲಿಯೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಆರ್ಥಿಕತೆ, ಸಾಮಾಜಿನ ಜನಜೀವನ, ವ್ಯಾಪಾರ, ಉದ್ಯೋಗ, ಶಿಕ್ಷಣ ಸೇರಿದಂತೆ ಎಲ್ಲಾ ರಂಗಕ್ಕೂ ಕೊರೊನಾ ಅನ್ನೋ ಹೆಮ್ಮಾರಿ ಕೊಡಲಿಯೇಟನ್ನೇ ನೀಡಿದೆ. ಆದ್ರೆ ಆರಂಭದಿಂದಲೂ ಕೊರೊನಾ ವಿಚಾರದಲ್ಲಿ ಕಳ್ಳಾಟವನ್ನೇ ಆಡಿಕೊಂಡು ಬಂದಿದ್ದ ಚೀನಾದ ನಿಜಬಣ್ಣ ಕೊನೆಗೂ ಬಯಲಾಗಿದೆ. ಅಮೇರಿಕಾ ಕೊರೊನಾ ಹುಟ್ಟು ವುಹಾನ್‌ ಲ್ಯಾಬ್‌ನಲ್ಲೇ ಆಗಿದೆ. ಇದೊಂದು ಜೈವಿಕ ಅಸ್ತ್ರ ಅಂತೆಲ್ಲಾ ಚೀನಾದ ವಿರುದ್ದ ಆರೋಪವನ್ನು ಮಾಡಿತ್ತು. ಬಹುತೇಕ ರಾಷ್ಟ್ರಗಳು ಕೊರೊನಾ ವೈರಸ್‌ ಸೋಂಕನ್ನು ಚೀನಾ ವೈರಸ್‌ ಸೋಂಕು ಅಂತಾನೆ ಕರೆಯುತ್ತಿವೆ. ಇದೀಗ ಕೊರೊನಾ ವೈರಸ್‌ ಚೀನಾದ ಸೋಂಕು ಅನ್ನೋದಕ್ಕೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ : 80 ಲಕ್ಷ ಪೋನ್ ಸ್ಚಿಚ್ ಆಫ್, ಶೇ.80 ರಷ್ಟು ಜನರೇ ನಾಪತ್ತೆ : ವಿಶ್ವದೆದುರು ಸುಳ್ಳು ಹೇಳಿದ್ಯಾಕೆ ಚೀನಾ !

ಕೊರೊನಾ ವೈರಸ್‌ ಸೋಂಕಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡ ವಿಶ್ವದ ಹಲವು ರಾಷ್ಟ್ರಗಳಲ್ಲಿ ಸಂಶೋಧನೆಯನ್ನು ನಡೆಸಿದ್ದು, ವಿಶ್ವದ ಆರೋಗ್ಯ ಸಂಸ್ಥೆಯ ತಜ್ಞರೇ ಖುದ್ದು, ಕೊರೊನಾ ಚೀನಾದ ವುಹಾನ್ ಪ್ರಯೋಗಾಲದಲ್ಲೇ ಜನ್ಮ ತಾಳಿದೆ ಅನ್ನುವುದನ್ನು ಖಚಿತ ಪಡಿಸಿದ್ದಾರೆ. ವರದಿಯ ಪ್ರಕಾರ, ಯುಎಸ್, ಚೀನಾ ಮತ್ತು ಸಿಂಗಾಪುರದ ವಿಜ್ಞಾನಿಗಳು ಹೊಸ ವೈರಸ್ ಅನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ವರದಿಯ ಪ್ರಕಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳು ಇದೇ ರೀತಿಯ ರೂಪಾಂತರಗಳ ಆನುವಂಶಿಕ ಸಂಯೋಜನೆಯನ್ನು ಮಿಶ್ರಣ ಮಾಡುವ ಮೂಲಕ ಹೊಸ ವೈರಸ್ ಅನ್ನು ರಚಿಸಲು ಯೋಜಿಸುತ್ತಿದ್ದರು. 2018 ರಲ್ಲಿ ಚೀನಾ ಅದರ ಅನುಮೋದನೆಗಾಗಿ ಸಲ್ಲಿಸಿದ ಅರ್ಜಿ ಇದೀಗ ಸೋರಿಕೆಯಾಗಿದೆ.

ಇದನ್ನೂ ಓದಿ : ‘ವುವಾನ್ ವೈರಾಲಜಿ ಲ್ಯಾಬ್’ ಎಂಬ ಚೀನಾದ ವಿವಾದಿತ ಲ್ಯಾಬ್ !

ಸಾರ್ಸ್ಕೋವ್ -2 ವೈರಸ್ ಅನ್ನು ಹೋಲುವ ಯಾವುದೇ ವೈರಸ್ ಇಲ್ಲಿಯವರೆಗೆ ಕಂಡುಬಂದಿಲ್ಲ ಎಂಬುದು ಪ್ರಯೋಗ ನಡೆದಿರುವ ಅನುಮಾನವನ್ನು ಬಲಪಡಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ತಿಂಗಳು ಲಾವೋಸ್‌ನಲ್ಲಿ ಕಂಡುಬಂದ ಬನಾಲ್ -52 ರೂಪಾಂತರವು ಕೋವಿಡ್ ವೈರಸ್‌ಗೆ ಸ್ವಲ್ಪ ಹೋಲಿಕೆಯನ್ನು ಹೊಂದಿದೆ. ಇದು ಕೋವಿಡ್ -19 ವೈರಸ್‌ನ ಜೀನೋಮ್‌ಗೆ ಕೇವಲ 96.8 ಪ್ರತಿಶತದಷ್ಟು ಹೋಲುತ್ತದೆ ಎಂದು ತಿಳಿದುಬಂದಿದೆ.

ಇನ್ನು ವುಹಾನ್ ಪ್ರಯೋಗಾಲಯದಲ್ಲಿ ಸಂಗ್ರಹಿಸಿದ ಕರೋನಾ ವೈರಸ್‌ನಿಂದ ಸ್ಪೈಕ್ ಜೀನ್‌ನೊಂದಿಗೆ ಮತ್ತೊಂದು ವೈರಸ್‌ನ ಆನುವಂಶಿಕ ಅಂಶಗಳನ್ನು ಸಂಯೋಜಿಸುವ ಮೂಲಕ ಕರೋನಾ ವೈರಸ್ ಅನ್ನು ರಚಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : 20,000 ರೋಗಿಗಳ ಹತ್ಯೆಗೆ ಚೀನಾ ಸ್ಕೆಚ್ : ಕೊರೊನಾ ಮುಚ್ಚಿಟ್ಟರೆ ಮರಣದಂಡನೆ !

ಇದನ್ನೂ ಓದಿ : ಗುಪ್ತಚರ ವರದಿಯಿಂದ ಬಯಲಾಯ್ತು ಚೀನಾ ನಿಜಬಣ್ಣ : ಕೊರೊನಾ ವರದಿ ಮುಚ್ಚಿಡಲು WHO ಮೇಲೆ ಒತ್ತಡ ಹೇರಿದ ಪಾಪಿದೇಶ !

(Covid-19 virus originates in Wuhan laboratory: World Health Organization report )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular