ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಉದ್ಯೋಗ ಆಕಾಂಕ್ಷಿಗಳಿಗೆ ಹಿಮಾಚಲ ಪ್ರದೇಶ ಟೆಲಿಕಾಂ ವಿಭಾಗದಲ್ಲಿ ಅವಕಾಶ ನೀಡುತ್ತಿದೆ(BSNL Recruitment 2022). ಈ ನೇಮಕಾತಿಯಲ್ಲಿ ಅಪ್ರೆಂಟಿಸ್(apprenticeship ) ಹುದ್ದೆಗಳಿಗೆ ಒಂದು ವರ್ಷ ಅವಧಿಯ ಟ್ರೈನಿಂಗ್ ನೀಡಲಾಗುವುದು ಎಂದು ಹೊಸ ಅಧಿಸೂಚನೆ ಹೊರಡಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸರ್ಕಾರಿ ಪೋರ್ಟಲ್ BOAT ಮೂಲಕ ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2022. ಅರ್ಜಿ ಸಲ್ಲಿಸಲು www.mhrdnats.gov.in ಬೇಟಿ ನೀಡಿ.
ಹುದ್ದೆಗಳ ವಿವರ :
ಒಟ್ಟು ಖಾಲಿ ಹುದ್ದೆಗಳು : 30
ಸ್ಥಳ | ಖಾಲಿ ಹುದ್ದೆಗಳು |
ಶಿಮ್ಲಾ | 8 |
ಧರ್ಮಶಾಲಾ | 6 |
ಸೋಲನ್ | 5 |
ಹಮಿರ್‌ಪುರ್ | 5 |
ಮಂಡಿ | 6 |
ಒಟ್ಟೂ | 30 |
ಅಧಿಕೃತ ಸೂಚನೆಯ ಪ್ರಕಾರ, ಭಾರತೀಯ ಪ್ರಜೆಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು AICTE/UGC/ರಾಜ್ಯ ಸರ್ಕಾರ/GOI ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಅಥವಾ ಡಿಪ್ಲೊಮಾ ಮಾಡಿರಬೇಕು.
ವಯೋಮಿತಿ :
ಈ ಹುದ್ದೆಗೆ 25 ವರ್ಷದವರೆಗಿನ (ಜುಲೈ 31, 2022) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ :
ಆಯ್ಕೆ ಪ್ರಕ್ರಿಯೆಯು ಸಂದರ್ಶನ ಅಥವಾ ಕೌಶಲ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನಡೆಯುವುದು.
ಅರ್ಜಿ ಸಲ್ಲಿಸುವುದು ಹೇಗೆ ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸರ್ಕಾರಿ ಪೋರ್ಟಲ್ BOAT ನ ಮೂಲಕ www.mhrdnats.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಜುಲೈ 31, 2022.
ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು :
- ಆಧಾರ್ ಕಾರ್ಡ್ 1MB ಗಿಂತ ಕಡಿಮೆ ಸೈಜ್‌ನ PDF ಫಾರ್ಮೆಟ್‌ನಲ್ಲಿರಬೇಕು.
- ಮಾನ್ಯತೆ ಪಡೆದ ಪದವಿ/ಡಿಪ್ಲೊಮಾ ಪ್ರಮಾಣ ಪತ್ರ
- JPEG ಮಾದರಿಯ ಪಾಸ್‌ಪೋರ್ಟ್ ಪೋಟೊ (ಸೈಜ್: 200 KB ಗಿಂತ ಕಡಿಮೆ ಇರಬೇಕು)
- ಇ–ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ
ಇದನ್ನೂ ಓದಿ : NEET UG Exam Postpone :ನೀಟ್ ಪ್ರವೇಶ ಪರೀಕ್ಷೆ ಮುಂದೂಡಿಕೆ ? ದೆಹಲಿ ಹೈಕೋರ್ಟ್ ಇಂದು ಅರ್ಜಿಯ ವಿಚಾರಣೆ
ಇದನ್ನೂ ಓದಿ : Work From Home Permanent : ಸಮೀಕ್ಷೆಯಲ್ಲಿ ಬಯಲಾಯ್ತು ವರ್ಕ್ ಫ್ರಾಮ್ ಹೋಮ್ ಕುರಿತ ಬಹುಮುಖ್ಯ ಮಾಹಿತಿ
(BSNL Recruitment 2022 apprenticeship training in Himachal Pradesh)