Sourav Ganguly backs Virat Kohli : ವಿರಾಟ್ ಬಗ್ಗೆ ಯಾರೂ ಕಮಕ್ ಕಿಮಕ್ ಅನ್ನಂಗಿಲ್ಲ,ಕೊಹ್ಲಿಗೆ ಸಿಕ್ತು ದಾದಾ ಸಪೋರ್ಟ್ !

ಲಂಡನ್: ವೃತ್ತಿಜೀವನದಲ್ಲಿ ಅತ್ಯಂತ ಕಠಿಣ ಸನ್ನಿವೇಶವನ್ನು ಎದುರಿಸುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Sourav Ganguly backs Virat Kohli) ಬಗ್ಗೆ ಕ್ರಿಕೆಟ್ ಪಂಡಿತರು, ಮಾಜಿ ಕ್ರಿಕೆಟಿಗರು ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಲೇ ಇದ್ದಾರೆ. 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್, ಕೊಹ್ಲಿಯನ್ನು ಟೀಮ್ ಇಂಡಿಯಾ ದಿಂದ ಕೈಬಿಡಬೇಕು ಎಂದಿದ್ದರು. ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ, ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಸಹಿತ ಹಲವರು ವಿರಾಟ್ ಕೊಹ್ಲಿ ದೇಶೀಯ ಕ್ರಿಕೆಟ್”ಗೆ ಮರಳಿ ಫಾರ್ಮ್ ಕಂಡುಕೊಳ್ಳಬೇಕೆಂಬ ಸಲಹೆ ನೀಡಿದ್ದರು. ಹೀಗೆ ಔಟ್ ಆಫ್ ಫಾರ್ಮ್ ಕೊಹ್ಲಿ ಬಗ್ಗೆ ಸಾಲು ಸಾಲು ಟೀಕೆಗಳು ವ್ಯಕ್ತವಾಗುತ್ತಲೇ ಇವೆ.

ಆದರೆ ಕೊಹ್ಲಿ ಟೀಮ್ ಇಂಡಿಯಾದಲ್ಲಿ ಮುಂದುವರಿಯಬೇಕಾ, ಬೇಡ್ವಾ ಎಂಬುದನ್ನು ನಿರ್ಧರಿಸಬೇಕಿರುವುದು ಬಿಸಿಸಿಐ. ಕೊಹ್ಲಿ ಫಾರ್ಮ್ ಕಳೆದುಕೊಂಡಿರುವುದರ ಬಗ್ಗೆ ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರೇ (BCCI President Sourav Ganguly) ಪ್ರತಿಕ್ರಿಯಿಸಿದ್ದು, ಕೊಹ್ಲಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿಯನ್ನು ಟೀಕಿಸುವ ಮುನ್ನ ಕಳೆದ 12-13 ವರ್ಷಗಳಲ್ಲಿ ಕೊಹ್ಲಿ ಮಾಡಿರುವ ಸಾಧನೆಯನ್ನು ನೋಡಬೇಕೆಂದು ಗಂಗೂಲಿ ಹೇಳಿದ್ದಾರೆ.

“ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ವಿರಾಟ್ ಕೊಹ್ಲಿಯ ಅಂಕಿಸಂಖ್ಯೆಗಳನ್ನೊಮ್ಮೆ ನೋಡಿ. ಆ ಅಂಕಿಸಂಖ್ಯೆಗಳು ಸಾಮರ್ಥ್ಯ ಹಾಗೂ ಗುಣಮಟ್ಟ ಇಲ್ಲದೆ ಬಂದಿಲ್ಲ. ಹೌದು, ಈಗ ಆತ ಕಠಿಣ ಸಮಯವನ್ನು ಎದುರಿಸುತ್ತಿದ್ದಾನೆ ಮತ್ತು ಅದು ಆತನಿಗೂ ತಿಳಿದೆ. ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ. ತನ್ನ ಆಟದ ಗುಣಮಟ್ಟ ಕುಸಿದಿರುವ ಬಗ್ಗೆ ಆತನಿಗೆ ಅರಿವಿದೆ. ಕಳೆದ 12-13 ವರ್ಷಗಳಲ್ಲಿ ಸಾಧಿಸಿ ತೋರಿಸಿದಂತೆ ತನ್ನ ಯಶಸ್ಸಿನ ಆತನೇ ಕಂಡುಕೊಳ್ಳಬೇಕು ಮತ್ತು ಅದರಲ್ಲಿ ಯಶಸ್ವಿಯಾಗಬೇಕು”.

  • ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ

ಹೀಗೆ ವಿರಾಟ್ ಕೊಹ್ಲಿಗೆ ಬೆಂಬಲ ವ್ಯಕ್ತಪಡಿಸಿರುವ ಸೌರವ್ ಗಂಗೂಲಿ, ಕೊನೆಯಲ್ಲಿ ಎಚ್ಚರಿಕೆಯ ಮಾತುಗಳನ್ನೂ ಆಡಿದ್ದಾರೆ. ಕಳೆದ ಎರಡು-ಎರಡೂವರೆ ವರ್ಷಗಳಲ್ಲಿ ವಿರಾಟ್ ಕೊಹ್ಲಿ ರನ್ ಬರ ಎದುರಿಸುತ್ತಿದ್ದಾರೆ. ಎರಡೂವರೆ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ಶತಕ ಬಾರಿಸಿಲ್ಲ. ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗಿದ್ದರು. ಅಷ್ಟೇ ಅಲ್ಲ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ ಎರಡೂ ಪಂದ್ಯ ಗಳಲ್ಲಿ ಕೊಹ್ಲಿ ಮುಗ್ಗರಿಸಿದ್ದರು.

ಇದನ್ನೂ ಓದಿ : Virat Kohli Dropped : ವಿಂಡೀಸ್ ಟಿ20 ಸರಣಿಗೆ ಟೀಮ್ ಇಂಡಿಯಾ ಪ್ರಕಟ ; ಇದೇ ಮೊದಲ ಬಾರಿ ಭಾರತ ತಂಡದಿಂದ ವಿರಾಟ್ ಕೊಹ್ಲಿ ಡ್ರಾಪ್

ಇದನ್ನೂ ಓದಿ : Kickboxer Nikhil Suresh Dies : ಕಿಕ್ ಬಾಕ್ಸಿಂಗ್ ಪಂದ್ಯಾವಳಿ ಎಡವಟ್ಟು: ಎದುರಾಳಿ ಪಂಚ್ ಗೆ ಪ್ರಾಣಬಿಟ್ಟ ಬಾಕ್ಸರ್‌

BCCI President Sourav Ganguly backs Virat Kohli

Comments are closed.