ಕೆನರಾ ಬ್ಯಾಂಕ್ ನೇಮಕಾತಿಯ (Canara Bank Recruitment 2023) ಅಧಿಕೃತ ಅಧಿಸೂಚನೆ ಮಾರ್ಚ್ 2023ರ ಮೂಲಕ ಸಹಾಯಕ ಉಪಾಧ್ಯಕ್ಷ, ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರು ನಗರದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.
ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಬ್ಯಾಂಕ್ ಹೆಸರು : ಕೆನರಾ ಬ್ಯಾಂಕ್ (Canara Bank)
ಹುದ್ದೆಗಳ ಸಂಖ್ಯೆ : 2 ಹುದ್ದೆಗಳು
ಉದ್ಯೋಗ ಸ್ಥಳ : ಬೆಂಗಳೂರು
ಹುದ್ದೆಯ ಹೆಸರು: ಸಹಾಯಕ ಉಪಾಧ್ಯಕ್ಷ, ಪ್ರಾಜೆಕ್ಟ್ ಮ್ಯಾನೇಜರ್
ವೇತನ : ರೂ.63000-78500/- ಪ್ರತಿ ತಿಂಗಳು
ಕೆನರಾ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳ ವಿದ್ಯಾರ್ಹತೆ ವಿವರ :
- ಸಹಾಯಕ ಉಪಾಧ್ಯಕ್ಷ : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯಗಳಲ್ಲಿ B.E ಅಥವಾ B.Tech, MBA ನಲ್ಲಿ ಹಣಕಾಸು, CA ಅಥವಾ ICWA (CMA) ಪೂರ್ಣಗೊಳಿಸಿರಬೇಕು.
- ಪ್ರಾಜೆಕ್ಟ್ ಮ್ಯಾನೇಜರ್ : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯಗಳಲ್ಲಿ CA, B.Com, M.Com, MBA ಇನ್ ಫೈನಾನ್ಸ್, CA ಅಥವಾ ICWA (CMA)ರಲ್ಲಿ ಉತ್ತೀರ್ಣರಾಗಿರಬೇಕು.
ವಯಸ್ಸಿನ ಮಿತಿ ವಿವರ :
ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಗರಿಷ್ಠ ವಯಸ್ಸು 30 ವರ್ಷ ವಯಸ್ಸು ಮೀರಿರಬಾರದು.
ವಯೋಮಿತಿ ಸಡಿಲಿಕೆ :
ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳ ವಯೋಮಿತಿಯನ್ನು ಕೆನರಾ ಬ್ಯಾಂಕ್ ನಿಯಮಗಳ ಪ್ರಕಾರ ಸಡಿಲಿಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ :
ಎಲ್ಲಾ ಅಭ್ಯರ್ಥಿಗಳು : ರೂ.1000/-
ಪಾವತಿ ವಿಧಾನ :
ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕಾಗಿದೆ.
ಆಯ್ಕೆ ಪ್ರಕ್ರಿಯೆ :
ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕೆನರಾ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳ ಸಂಬಳ (ತಿಂಗಳಿಗೆ) ವಿವರ :
ಸಹಾಯಕ ಉಪಾಧ್ಯಕ್ಷ : ರೂ.78500/-
ಪ್ರಾಜೆಕ್ಟ್ ಮ್ಯಾನೇಜರ್ : ರೂ.63000/-
ಕೆನರಾ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ :
ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ವ್ಯವಸ್ಥಾಪಕ ನಿರ್ದೇಶಕರು, ಕ್ಯಾನ್‌ಬ್ಯಾಂಕ್ ವೆಂಚರ್ ಕ್ಯಾಪಿಟಲ್ ಫಂಡ್ ಲಿಮಿಟೆಡ್ 29, 2 ನೇ ಮಹಡಿ, ದ್ವಾರಕಾನಾಥ ಭವನ, ಕೆ ಆರ್ ರಸ್ತೆ, ಬಸವನಗುಡಿ, ಬೆಂಗಳೂರು-560004 ಇವರಿಗೆ ಏಪ್ರಿಲ್ 10, 2023ರ ಅಥವಾ ಮೊದಲು ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ , ಅಥವಾ ಯಾವುದೇ ಇತರ ಸೇವೆ ಮೂಲಕ ಕಳುಹಿಸಬೇಕಾಗುತ್ತದೆ.
ಇದನ್ನೂ ಓದಿ : BOB Recruitment 2023 : ಪದವೀಧರರಿಗೆ ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ
ಇದನ್ನೂ ಓದಿ : ಜಿಲ್ಲಾ ಆಯುಷ್ ಕಛೇರಿ ಕಲಬುರಗಿ ನೇಮಕಾತಿ 2023 : ವಿವಿಧ ಸ್ಪೆಷಲಿಸ್ಟ್ ವೈದ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದನ್ನೂ ಓದಿ : ಕರ್ನಾಟಕ ರಾಜ್ಯ ಕೃಷಿ ಇಲಾಖೆ ನೇಮಕಾತಿ : ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 08 ಮಾರ್ಚ್ 2023
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಏಪ್ರಿಲ್ 2023
Canara Bank Recruitment 2023 : Post Graduate Jobs Apply Now