Adenovirus in children: ಮಕ್ಕಳಲ್ಲಿ ಹೆಚ್ಚುತ್ತಿದೆ ಆಡಿನೋ ವೈರಸ್: ರಾಜ್ಯದಲ್ಲಿ ಒಟ್ಟು 69 ಪ್ರಕರಣಗಳು ಪತ್ತೆ

ಬೆಂಗಳೂರು: (Adenovirus in children) ಅವಧಿಗೂ ಮುನ್ನ ಬೇಸಿಗೆಯ ಬಿಸಿ ಜನರನ್ನು ಹೈರಾಣಾಗಿಸುತ್ತಿದ್ದು, ಇನ್ನೊಂದು ಕಡೆ ಬಿಸಿ ಗಾಳಿಯ ಪರಿಣಾಮದಿಂದ ಸಾಂಕ್ರಾಮಿಕ ಕಾಯಿಲೆಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಈ ಮಧ್ಯೆ ಮಕ್ಕಳಲ್ಲಿ ಆಡಿನೋ ವೈರಸ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ರಾಜ್ಯದಲ್ಲಿ 69 ಪ್ರಕರಣಗಳು ಈವೆರೆಗೆ ಪತ್ತೆಯಾಗಿದೆ.

ಕೊರೊನಾ ಮಾಹಾಮಾರಿಯಾಯ್ತು, ಒಮಿಕ್ರಾನ್‌ ಉಪತಳಿಯಾಯ್ತು, H3N2 ಆಯ್ತು ಇದೀಗ ಆಡಿನೋ ವೈರಸ್‌ ಮತ್ತೆ ಮಕ್ಕಳಲ್ಲಿ ಪತ್ತೆಯಾಗಿದೆ. ಬೇಸಿಗೆಯ ಸುಡು ಬಿಸಿಲಿನ ಜೊತೆಗೆ ತಾಪಮಾನ ಹೆಚ್ಚಳ, ಬಿಸಿ ಗಾಳಿ, ಹವಾಮಾನ ಬದಲಾವಣೆ ಈ ರೀತಿಯಾದ ಪೃಕೃತಿ ಬದಲಾವಣೆಗಳು ಸಾಂಕ್ರಾಮಿಕ ರೋಗ ಹರಡುವುದನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಇದೀಗ ಮಕ್ಕಳಲ್ಲಿ ಆಡಿನೋ ವೈರಸ್‌ ಪತ್ತೆಯಾಗಿದ್ದು, ಪೋಷಕರು ಎಚ್ಚರಿಕೆಯಿಂದಿರಬೇಕು.

ಆಡಿನೋ ವೈರಸ್‌ ಎಂದರೇನು?
ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಅಡೆನೊ ವೈರಸ್‌ಗಳು ವೈರಾಣುಗಳ ಗುಂಪಾಗಿದ್ದು, ಈ ವೈರಸ್‌ ದೇಹವನ್ನು ಪ್ರವೇಶಿಸಿದರೆ ಸಾಮಾನ್ಯವಾಗಿ ಜ್ವರ, ನೆಗಡಿ, ನ್ಯುಮೋನಿಯಾ, ಶ್ವಾಸಕೋಶದ ತೊಂದರೆ ಉಂಟಾಗಿ ಉಸಿರಾಡಲು ಕಷ್ಟವಾಗುತ್ತದೆ. ಕೇವಲ ಮಕ್ಕಳಿಗೆ ಮಾತ್ರವಲ್ಲದೇ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ, ಉಸಿರಾಟ ಅಥವಾ ಹೃದಯ ಕಾಯಿಲೆ ಹೊಂದಿರುವ ಜನರಲ್ಲಿ ಅಡೆನೊ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಆಡಿನೋ ವೈರಸ್‌ ಲಕ್ಷಣಗಳೇನು?
ಅತಿಯಾದ ಜ್ವರ
ಕಣ್ಣು ಕೆಂಪಾಗುವಿಕೆ
ಹೊಟ್ಟೆನೋವು
ನ್ಯೂಮೋನಿಯಾಗೆ ತಲುಪುವ ಸಾಧ್ಯತೆ
ಶ್ವಾಸಕೋಶದ ಸೋಂಕಿಗೆ ತುತ್ತಾಗುವ ಸಾಧ್ಯತೆ

ಅಡೆನೊ ವೈರಸ್‌ಗಳು ಹೇಗೆ ಹರಡುತ್ತವೆ?
ಅಡೆನೊ ವೈರಸ್‌ ಕೂಡ ಹೆಚ್ಚುಕಮ್ಮಿ ಕೊರೋನಾ ವೈರಸ್‌ ಹರಡಿದಂತೆ ಒಬ್ಬರಿಂದ ಒಬ್ಬರಿಗೆ ಬರುತ್ತದೆ. ಅಡೆನೊ ವೈರಸ್‌ ಸೋಂಕು ತಗುಲಿದ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ, ಆತನನ್ನು ಮುಟ್ಟುವುದು, ಕೈಕುಲುಕುವುದರಿಂದ ಹಬ್ಬುತ್ತದೆ. ಅಷ್ಟೇ ಅಲ್ಲದೇ ಈ ವೈರಸ್‌ ಗಾಳಿಯ ಮೂಲಕ, ಸೀನಿನ ಮೂಲಕವೂ ಬರಬಹುದು.

ಅಡೆನೊವೈರಸ್ ಸೋಂಕನ್ನು ತಡೆಯುವುದು ಹೇಗೆ?
ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ತೊಳೆಯಿರಿ ಮತ್ತು ಚಿಕ್ಕ ಮಕ್ಕಳಿಗೂ ಈ ಅಭ್ಯಾಸ ಹೇಳಿಕೊಡಿ.
ಕೈ ತೊಳೆಯದೇ ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸಬೇಡಿ
ಅನಾರೋಗ್ಯದ ಜನರೊಂದಿಗೆ ಸಂಪರ್ಕವನ್ನು ತಪ್ಪಿಸಿ
ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗಳು ಮನೆಯಿಂದ ಹೊರಹೋಗದೇ ಇತರರ ಸುರಕ್ಷತೆ ಕಾಪಾಡಬೇಕು.
ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ

ಇದನ್ನೂ ಓದಿ : H3N2 guideline: H3N2 ಮಾಹಾಮಾರಿ ಆತಂಕ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಇದನ್ನೂ ಓದಿ : Masks mandatory for health workers : ರಾಜ್ಯದಲ್ಲಿ H3N2 ವೈರಸ್ ಆತಂಕ ಹಿನ್ನಲೆ: ಆರೋಗ್ಯ ಸಿಬ್ಬಂದಿಗಳಿಗೆ ಇಂದಿನಿಂದಲೇ ಮಾಸ್ಕ್ ಕಡ್ಡಾಯ

Adenovirus in children: Adenovirus is increasing in children: A total of 69 cases have been detected in the state

Comments are closed.